fbpx
ಸಮಾಚಾರ

ಪಠ್ಯದಿಂದ ತಮ್ಮ ಪಾಠ ಕೈಬಿಡುವಂತೆ ಮತ್ತೊಬ್ಬ ಸಾಹಿತಿಯ ಮನವಿ: ಮುಜುಗರದಲ್ಲಿ ಸರ್ಕಾರ

ಬಲಪಂಥೀಯ ಲೇಖಕ ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ
ʼಕೇಸರೀಕರಣʼವನ್ನು ಮಾಡಲಾಗಿದೆ, ಕೇವಲ ಬ್ರಾಹ್ಮಣ ಲೇಖಕರನ್ನು, ಆರ್‌ಎಸ್‌ಎಸ್‌ ಅನ್ನು ವೈಭವೀಕರಿಸಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

ಈ ಬೆನ್ನಲ್ಲೇ ಬಿಜೆಪಿ ಸರ್ಕಾರದ ನೂತನ ಪಠ್ಯ ಪರಿಷ್ಕರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿ “ತಮ್ಮ ಪಠ್ಯ ಸೇರ್ಪಡೆಗೆ ಅನುಮತಿ ನಿರಾಕರಿಸಿ ಕೈಬಿಡಬೇಕೆಂದು” ನಾಡಿನ ಹಿರಿಯ ಸಾಹಿತಿಗಳಾದ ದೇವನೂರು ಮಹಾದೇವರವರು ಆಗ್ರಹಿಸಿದ್ದರು. ಇದೀಗ ಮತ್ತೋರ್ವ ಸಾಹಿತಿ ತಮ್ಮ ಕೃತಿಯನ್ನು ಪಠ್ಯದಲ್ಲಿ ಸೇರಿಸದಂತೆ ಮನವಿ ಮಾಡಿಕೊಂಡಿದ್ದಾರೆ.

ಇದೀಗ ಡಾ.ಜಿ.ರಾಮಕೃಷ್ಣ ಸಹ ಭಗತ್​ಸಿಂಗ್ ಕುರಿತ ತಮ್ಮ ಲೇಖನ ತಿರಸ್ಕರಿಸುವಂತೆ ಮನವಿ ಮಾಡಿದ್ದಾರೆ. ನೂತನ ಪಠ್ಯ ಪರಿಷ್ಕರಣೆ ವೇಳೆ 10ನೇ ತರಗತಿಯಲ್ಲಿದ್ದ ಡಾ.ಜಿ.ರಾಮಕೃಷ್ಣ ಅವರ ಭಗತ್ ಸಿಂಗ್ ಪಾಠ ತೆಗೆಯಲಾಗಿತ್ತು. ಇದೊಂದು ವಿವಾದದ ತಿರುವು ಪಡೆದ ನಂತರ ಶಿಕ್ಷಣ ಇಲಾಖೆಯು ಭಗತ್ ಸಿಂಗ್ ಕುರಿತ ಪಾಠವನ್ನು ಸೇರಿಸಿತ್ತು. ಆದರೆ ಈಗ ಡಾ.ಜಿ.ರಾಮಕೃಷ್ಣ ಅವರು ನಾನು ಬರೆದ ಲೇಖನ ಬಳಸಲು ನನ್ನ ಒಪ್ಪಿಗೆ ಇಲ್ಲ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top