fbpx
ಸಮಾಚಾರ

ಲಖನೌ ವಿರುದ್ಧ ಪ್ಲೇ ಆಫ್ ಪಂದ್ಯ: ಆರ್‌ಸಿಬಿ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ ಸಾಧ್ಯತೆ!

ಹದಿನೈದನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಕ್ವಾಲಿಫೈಯರ್‌ ಹಂತದ 2ನೇ ಸುತ್ತು ಕೊಲ್ಕತ್ತಾದ ಈಡನ್‌ ಗಾರ್ಡನ್‌ನಲ್ಲಿ ಸಂಜೆ 7.30ಕ್ಕೆ ಇಂದು ನಡೆಯಲಿದೆ. ಲಕ್ನೋ ಸೂಪರ್‌ ಜೈಂಟ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಈ ಆಟದಲ್ಲಿ ಗೆಲುವಿಗಾಗಿ ಸೆಣಸಾಡಲಿದೆ. ಎಲಿಮಿನೇಟರ್‌ ಪಂದ್ಯದಲ್ಲಿ ಗೆದ್ದ ತಂಡ ಎರಡನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯಲಿದೆ. ಲಖನೌ ವಿರುದ್ಧ ಆರ್‌ಸಿಬಿ ಗೆದ್ದರೆ, ಎರಡನೇ ಕ್ವಾಲಿಫೈಯರ್‌ ರಾಜಸ್ಥಾನ್‌ ವಿರುದ್ಧ ಕಾದಾಟ ನಡೆಸಲಿದೆ.

 

 

ಗುಜರಾತ್‌ ಟೈಟನ್ಸ್ ವಿರುದ್ಧ ಫೀಲ್ಡ್‌ ಮಾಡುತ್ತಿದ್ದ ವೇಳೆ ಹರ್ಷಲ್‌ ಪಟೇಲ್‌ ತನ್ನ ಬಲಗೈಗೆ ಗಾಯ ಮಾಡಿಕೊಂಡಿದ್ದರು. ಈ ವೇಳೆ ಮೈದಾನದಿಂದ ಹೊರ ಉಳಿದು ತಮ್ಮ ಇನ್ನುಳಿದ ಮೂರು ಓವರ್‌ಗಳನ್ನು ಮುಗಿಸಿರಲಿಲ್ಲ. ಹೀಗಾಗಿ ಗಾಯಾಳು ಹರ್ಷಲ್‌ ಪಟೇಲ್‌, ಬುಧವಾರದ ಪಂದ್ಯಕ್ಕೆ ಲಭ್ಯರಾಗಲಿದ್ದಾರೆಯೆ? ಅಥವಾ ಇಲ್ಲವೇ? ಎಂಬ ಬಗ್ಗೆ ಇನ್ನೂ ಯಾವುದೇ ಖಚಿತತೆ ಇಲ್ಲ.

ಒಂದು ವೇಳೆ ಹರ್ಷಲ್‌ ಪಟೇಲ್ ಅವರು ಇಂದಿನ ಪಂದ್ಯಕ್ಕೆ ಅಲಭ್ಯರಾದರೆ RCB ತಂಡ ಒಂದು ಬದಲಾವಣೆ ಮಾಡಲಿದೆ. ಹರ್ಷಲ್ ಜಾಗದಲ್ಲಿ ಸಿದ್ದಾರ್ಥ್ ಕೌಲ್ ಅಥವಾ ಆಕಾಶ್ ದೀಪ್ ಆಡುವ ನಿರೀಕ್ಷೆ ಇದೆ.

ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್‌ XI
1. ವಿರಾಟ್ ಕೊಹ್ಲಿ; 2. ಫಾಫ್ ಡು ಪ್ಲೆಸಿಸ್(ನಾಯಕ), 3. ರಜತ್ ಪಾಟಿದಾರ್, 4. ಗ್ಲೆನ್ ಮ್ಯಾಕ್ಸ್‌ವೆಲ್, 5. ಮಹಿಪಾಲ್ ಲೋಮ್ರೋರ್, 6. ದಿನೇಶ್ ಕಾರ್ತಿಕ್, 7. ಶಹಬಾಜ್ ಅಹಮದ್, 8. ವಾನಿಂದು ಹಸರಂಗ, 9. ಹರ್ಷಲ್ ಪಟೇಲ್/ಸಿದ್ಧಾರ್ಥ್ ಕೌಲ್, 10. ಜಾಶ್ ಹೇಝಲ್‌ವುಡ್‌, 11.ಮೊಹಮ್ಮದ್ ಸಿರಾಜ್

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top