fbpx
ಸಮಾಚಾರ

RCB v/s LSG ಎಲಿಮಿನೇಟರ್ ಪಂದ್ಯದ ವೇಳೆ ಮಳೆ ಬರಲಿದೆಯಾ? ಇಲ್ಲಿದೆ ಹವಾಮಾನ ವರದಿ

ಐಪಿಎಲ್ ನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವೆ ಮೊದಲ ಎಲಿಮಿನೇಟರ್ ಪಂದ್ಯ ಕೋಲ್ಕತ್ತಾದಲ್ಲಿ ನಡೆಯುತ್ತಿದೆ. ಇಂದು ಗೆದ್ದ ತಂಡ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಕ್ವಾಲಿಫೈಯರ್ ಪಂದ್ಯ ಆಡಬೇಕಿದೆ. ಆದರೆ ಇಂದಿನ ಪಂದ್ಯದಲ್ಲಿ ಮಳೆ ಅಡ್ಡಿಯಾಗಬಹುದು ಎಂಬ ಸುದ್ದಿ ಇತ್ತು. ಹೀಗಾಗಿ ಕೋಲ್ಕತ್ತಾದಲ್ಲಿ ಸದ್ಯದ ಹವಾಮಾನ ವರದಿ ಹೇಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಳೆದ ಕೆಲವು ದಿನಗಳಿಂದ ಕೋಲ್ಕತ್ತಾದಲ್ಲಿ ಮಳೆ ರಾಯ ಬಿಟ್ಟು ಬಿಡದೇ ಕಾಡುತ್ತಿದ್ದ. ಇದೆಲ್ಲದರ ನಡುವೆ ಬಿಸಿಸಿಐ ಕೋಲ್ಕತ್ತಾದಲ್ಲೇ ಪ್ಲೇಆಫ್ ನಡೆಸಬೇಕೆಂದು ನಿರ್ಧರಿಸಿತು. ಇದು ಹಲವಾರು ಟೀಕೆಗಳಿಗೆ ಕಾರಣವಾಗಿತ್ತು. ಇದೆಲ್ಲದರ ನಡುವೆ ಮೊದಲ ಕ್ವಾಲಿಫೈರ್ ಪಂದ್ಯ ಯಾವುದೇ ಅಡ್ಡಿ ಇಲ್ಲದೆ ನಡೆಯಿತು. ಆದರೆ ಇಂದು ನಡೆಯುವ ಪಂದ್ಯದಲ್ಲಿ ಮಳೆ ರಾಯ ಕಾಟ ಕೊಡುತ್ತಾನೋ ಇಲ್ಲವೋ ಎಂದು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ.

ಹವಾಮಾನ ಇಲಾಖೆಯ ಪ್ರಕಾರ ಇಂದಿನ ಪಂದ್ಯದಲ್ಲಿ ಮಳೆ ಅಡ್ಡಿ ಪಡಿಸೋದು ತೀರಾ ಕಮ್ಮಿ. ಮೋಡ ಮುಸುಕಿದ ವಾತಾವರಣ ಇದ್ದರೂ ಸಂಜೆ ಮಳೆಯಾಗುವ ಸಾಧ್ಯತೆ ಇಲ್ಲ. ಹವಾಮಾನವು ಸ್ಪಷ್ಟವಾಗಿರುತ್ತದೆ. ತಾಪಮಾನವು 27 ಡಿಗ್ರಿಗಳಿಂದ 36 ವರೆಗೆ ತಲುಪಬಹುದು. ಹೀಗಾಗಿ ಪಂದ್ಯದ ಮದ್ಯೆ ಮಳೆ ಆಗುವ ಸಾಧ್ಯತೆಗಳು ತೀರಾ ಕಡಿಮೆ ಇರುವುದರಿಂದ ಯಾವುದೇ ಅಡೆ ತಡೆ ಇಲ್ಲದೆ ಇಂದಿನ ಪಂದ್ಯ ಸುಸೂತ್ರವಾಗಿ ನಡೆಯುತ್ತದೆ ಎಂದು ತಿಳಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top