fbpx
ಸಮಾಚಾರ

ನಾಪತ್ತೆಯಾಗಿದ್ದ ಗಾಯಕಿ ಶವವಾಗಿ ಪತ್ತೆ:12 ದಿನಗಳ ಬಳಿಕ ಅರ್ಧ ಬೆಂದ ಮೃತದೇಹ ಪತ್ತೆ!

ಸುಮಾರು 12 ದಿನಗಳಿಂದ ಹರಿಯಾಣ್ವಿ ಗಾಯಕಿಯೊಬ್ಬರು ನಾಪತ್ತೆಯಾಗಿದ್ದರು. ಈ ಬಗ್ಗೆ ಎಲ್ಲೆಡೆ ಸುದ್ದಿಯಾಗಿತ್ತು. ಇದೀಗ ಅದೇ ಗಾಯಕಿಯ ಶವ ರೋಹ್ಟಕ್ ಜಿಲ್ಲೆಯ ಹೆದ್ದಾರಿಯೊಂದರ ಬಳಿ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಪ್ರಕರಣದ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಅಪರಾಧ ಎಸಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಮ್ಯೂಸಿಕ್ ವಿಡಿಯೋ ಚಿತ್ರೀಕರಣಕ್ಕೆಂದು ತೆರಳಿದ್ದ ಗಾಯಕಿ ಸಂಗೀತಾ ಅನುಮಾನಸ್ಪದವಾಗಿ ಹರಿಯಾಣದ ರೋಹ್ಟಕ್ ಜಿಲ್ಲೆಯ ಪ್ಲೇ ಓವರ್ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ಇದೀಗ ಗಾಯಕಿಯ ಶವ ರೋಹ್ಟಕ್ ಜಿಲ್ಲೆಯ ಹೆದ್ದಾರಿಯೊಂದರ ಬಳಿ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಶೂಟಿಂಗ್‌ಗೆ ಎಂದು ಕರೆದೊಯ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸಂಗೀತಾರನ್ನು ಕರೆದುಕೊಂಡು ಹೋಗಿದ್ದ, ಅವರ ಜತೆಯಲ್ಲಿಯೇ ಕೆಲಸ ಮಾಡುತ್ತಿದ್ದ ರವಿ ಮತ್ತು ರೋಹಿತ್​ ಅವರ ಮೇಲೆ ಪಾಲಕರು ಅನುಮಾನ ಪಟ್ಟಿದ್ದು, ಅವರ ವಿರುದ್ಧ ಕೇಸ್ ದಾಖಲು ಮಾಡಲಾಗಿತ್ತು. ಇದರ ಬೆನ್ನತ್ತಿ ಹೋಗಿದ್ದ ಪೊಲೀಸರಿಗೆ ಸಿಸಿಟಿವಿಯೊಂದರಲ್ಲಿ ಸಂಗೀತಾ ಮತ್ತು ರೋಹಿತ್ ಊಟ ಮಾಡಿರುವ ದೃಶ್ಯ ಕಂಡುಬಂದಿತ್ತು. ಆದ್ದರಿಂದ ಇಬ್ಬರನ್ನೂ ವಶಕ್ಕೆ ಪಡೆಯಲಾಗಿತ್ತು. ಇದೀಗ ತಾವೇ ಕೊಲೆ ಮಾಡಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top