fbpx
ಸಮಾಚಾರ

ಕಡಿಮೆ ವೇಗದಲ್ಲಿ ಚಲಿಸುತ್ತಿರುವಾಗಲೇ ಮುರಿದು ಬಿದ್ದ Ola S1 Pro ಎಲೆಕ್ಟ್ರಿಕ್ ಸ್ಕೂಟರ್​ನ ಮುಂಭಾಗ! ಫೋಟೋ ವೈರಲ್

ನಿಮ್ಮ ಬಳಿ OLA S1Pro ಗಾಡಿ ಇದ್ಯಾ. ಹಾಗಿದ್ದರೆ ಹುಷಾರ್. ಏಕೆಂದರೆ ನೀವು ಅತಿ ಕಡಿಮೆ ವೇಗದಲ್ಲಿ ಚಲಾಯಿಸಿದರು ನಿಮ್ಮ ಗಾಡಿ ಅಪಘಾತಕ್ಕೀಡಾಗಬಹುದು. ಹೀಗಾಗಿ ಉಳಿದವರು OLA S1Pro ಗಾಡಿ ಖರೀದಿಸುವ ಮುಂಚೆ ಈ ಫೋಟೋ ಒಂದು ಸಲ ನೋಡುವುದು ಉತ್ತಮ.

ನವದೆಹಲಿಯಲ್ಲಿ OLA S1Pro ಎಲೆಕ್ಟ್ರಿಕ್ ಸ್ಕೂಟರ್ ಸಂಚರಿಸುತ್ತಿರುವ ವೇಳೆ ಸ್ಕೂಟರ್​ನ ಮುಂಭಾಗ ಹ್ಯಾಂಡಲ್‌ಬಾರ್‌ಗೆ ಸಂಪರ್ಕಿಸುವ ಟಯರ್ ಮುರಿದು ಬಿದ್ದಿದೆ. ವಿಪರ್ಯಾಸವೆಂದರೆ ಸವಾರ ಅತಿ ಕಡಿಮೆ ವೇಗದಲ್ಲಿ ಸಂಚರಿಸುತ್ತಿದ್ದರು ಈ ಅಪಘಾತ ಸಂಭವಿಸಿದೆ. ಇದರ ಕುರಿತು ಫೋಟೋ ಮೂಲಕ ಟ್ವೀಟ್ ಮಾಡಿರುವ ಸವಾರ ಓಲಾ ಎಲೆಕ್ಟ್ರಿಕ್ ಭೌತಿಕ ರಚನೆಯು ಅಸುರಕ್ಷಿತವಾಗಿರಬಹುದು ಎಂದು ಆರೋಪಿಸಿದ್ದಾರೆ. ಇದಲ್ಲದೆ ಇದು ಅತ್ಯಂತ ಅಪಾಯಕಾರಿ ಪರಿಸ್ಥಿತಿಯನ್ನು ಪ್ರಸ್ತುತಪಡಿಸುತ್ತದೆ ಎಂದು ಹೇಳಿದ್ದಾರೆ.

 

 

ಇನ್ನು ಈ ಸ್ಕೂಟರ್ ನ ಮಾಲೀಕರಾದ ಶ್ರೀನಾದ್ ಮೆನನ್ ಅವರು “ಕಡಿಮೆ ವೇಗದ ಡ್ರೈವಿಂಗ್‌ನಲ್ಲಿಯೂ ಮುಂಭಾಗದ ಫೋರ್ಕ್ ಮುರಿಯುತ್ತಿದೆ . ಇದು ನಾವು ಈಗ ಎದುರಿಸುತ್ತಿರುವ ಗಂಭೀರ ಮತ್ತು ಅಪಾಯಕಾರಿ ವಿಷಯವಾಗಿದೆ. ಆ ಭಾಗದ ವಿನ್ಯಾಸ ಬದಲಾವಣೆಯಾಗಬೇಕು. ಇದಿರಂದ ರಸ್ತೆ ಅಪಘಾತವನ್ನು ತಪ್ಪಿಸಬಹುದು” ಎಂದು ಹೇಳಿದ್ದಾರೆ. ಈ ಟ್ವೀಟ್ ಅಲ್ಲಿ ಓಲಾ ಸಿಇಒ ಮತ್ತು ಸಹ-ಸಂಸ್ಥಾಪಕ ಭವಿಶ್ ಅಗರ್ವಾಲ್ ಅವರನ್ನು ಟ್ಯಾಗ್ ಮಾಡಿದ್ದಾರೆ.

ಇದಕ್ಕಿಂತ ಮೊದಲು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹಲವಾರು ಕಂಪ್ಲೆಂಟ್ಸ್ ಗಳು ಕೇಳಿ ಬರುತ್ತಿದ್ದವು. ಆದರೆ ಇದರ ಕುರಿತು ಓಲಾ ಕಂಪನಿ ಮಾತ್ರ ಯಾವುವೇ ತಲೆ ಕೆಡಿಸಿಕೊಂಡಿರಲಿಲ್ಲ. ಈ ಹಿಂದೆ ಈ ಸ್ಕೂಟರ್ ಬೆಂಕಿಗೆ ಆಹುತಿಯಾದ ಘಟನೆ ಕೂಡ ನಡೆದಿದೆ. ಇಷ್ಟೆಲ್ಲಾ ಪ್ರಕರಣಗಳು ನಡೆದ ನಂತರ ಇನ್ಮುಂದೆ ಆದ್ರೂ ಓಲಾ ಕಂಪನಿ ಎಚ್ಚೆತ್ತುಕೊಳ್ಳುತ್ತಾ ನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top