fbpx
ಸಮಾಚಾರ

ಐಪಿಎಲ್ ನಲ್ಲಿ ಶತಕ ಸಿಡಿಸುವ ಮೂಲಕ ಮಹತ್ವದ ಸಾಧನೆ ಮಾಡಿದ ಪಾಟಿದಾರ್!

ನೆನ್ನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವೆ ಮೊದಲ ಎಲಿಮಿನೇಟರ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಆರ್ ಸಿ ಬಿ ಉತ್ತಮ ಪ್ರದರ್ಶನ ನೀಡಿ ಕ್ವಾಲಿಫೈಯರ್ ಹಂತ ತಲುಪಿದೆ. ಹೀಗಾಗಿ ಆರ್ ಸಿ ಬಿ ಕಪ್ ಗೆಲ್ಲಲು ಈಗ ಉಳಿದಿರೋದು ಕೇವಲ ಎರಡು ಹೆಜ್ಜೆ ಮಾತ್ರ. ಆರ್ ಸಿ ಬಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದು ರಜತ್ ಪಾಟಿದಾರ್. ಆರ್ ಸಿ ಬಿ ಪರ ಶತಕ ಸಿಡಿಸುವ ಮೂಲಖ ಒಂದು ಮಹಾನ್ ಸಾಧನೆಯನ್ನು ಮಾಡಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ ಸಿ ಬಿ ತಂಡಕ್ಕೆ ಆರಂಭಿಕ ಆಘಾತವಾಗಿತ್ತು. ನಾಯಕ ಡುಪ್ಲೆಸ್ಸಿ ಗೋಲ್ಡನ್ ಡಕ್ ಗೆ ಬಲಿಯಾದರು. ನಂತರ ಆರ್ ಸಿ ಬಿ ಗೆ ವರದಾನವಾಗಿ ಆಡಿದ್ದು ರಜತ್ ಪಾಟಿದಾರ್. ವಿರಾಟ್ ಕೊಹ್ಲಿ ಜೊತೆಗೂಡಿ ಉತ್ತಮವಾದ ಪ್ರದರ್ಶನ ತೋರಿದರು. ದೀಪಕ್ ಹೂಡಾ ಹಾಗೂ ಮನನ್ ವೋಹ್ರಾ ಕೈಬಿಟ್ಟ ಕ್ಯಾಚ್​ನಿಂದ ಸಿಕ್ಕ ಅವಕಾಶವನ್ನು ಸದೃಢವಾಗಿ ಬಳಿಸಿಕೊಂಡು ಕೇವಲ 49 ಎಸೆತದಲ್ಲಿ ಸೆಂಚುರಿ ಬಾರಿಸಿ ಅಜಯರಾಗಿ ಉಳಿದರು.

ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಎಲಿಮಿನೇಟರ್​ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟ್ಸ್​ಮನ್ ಎಂಬ ದಾಖಲೆ ಬರೆದರು. ಅಷ್ಟೇ ಅಲ್ಲದೆ ಪ್ಲೇಆಫ್ ಹಂತದಲ್ಲಿ ಸೆಂಚುರಿ ಸಿಡಿಸಿದ 5ನೇ ಆಟಗಾರ ಎಂಬ ದಾಖಲೆಯನ್ನೂ ಸಹ ತಮ್ಮದಾಗಿಸಿಕೊಂಡರು. ಇದಲ್ಲದೆ ನಾಕೌಟ್/ಪ್ಲೇಆಫ್ ಹಂತದಲ್ಲಿ ಆರ್​ಸಿಬಿ ಪರ ಶತಕ ಸಿಡಿಸಿದ ಮೊದಲ ಬ್ಯಾಟ್ಸ್​ಮನ್​ ಎಂಬ ದಾಖಲೆ ಕೂಡ ರಜತ್ ಪಾಟಿದಾರ್ ಪಾಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top