fbpx
ಸಮಾಚಾರ

ವೆಬ್ ಸೀರೀಸ್ ಅಂಗಳಕ್ಕೂ ಕಾಲಿಡಲಿದ್ದಾರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸದ್ಯ ವೇದ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದಲ್ಲದೆ ಇವರ ಕೈಯಲ್ಲಿ ಇನ್ನು ಹಲವಾರು ಸಿನಿಮಾಗಳು ಬಾಕಿ ಇವೆ. ಇದೆಲ್ಲದರ ನಡುವೆ ಶಿವಣ್ಣ ವೆಬ್ ಸೀರೀಸ್ ಒಂದರಲ್ಲಿ ನಟನೆ ಮಾಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಕುರಿತು ಸ್ವತಃ ಶಿವಣ್ಣ ಅವರೇ ಹೇಳಿದ್ದಾರೆ.

ಪ್ರಸ್ತುತ ಶಿವಣ್ಣ ವೇದ ಸಿನಿಮಾದ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ. ಈ ಸಿನಿಮಾವನ್ನು ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ನಿರ್ಮಿಸುತ್ತಿದ್ದಾರೆ. ಸದ್ಯ ಸಿನಿಮಾದ ಅರ್ಧ ಕೆಲಸ ಮುಗಿದಿದೆ. ಇದೆಲ್ಲದರ ನಡುವೆ ಶಿವಣ್ಣನ ಕೈಲಿ ಇನ್ನು 3 ಸಿನಿಮಾಳಿವೆ. ಇದೆಲ್ಲ ಮುಗಿದ ಬಳಿಕ ಶಿವಣ್ಣ ವೆಬ್ ಸೀರೀಸ್ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ.

ಶಿವಣ್ಣನ ಪುತ್ರಿ ಈಗಾಗಲೇ ಹನಿಮೂನ್ ಎಂಬ ವೆಬ್ ಸೀರೀಸ್ ಒಂದನ್ನು ನಿರ್ಮಿಸಿದ್ದಾರೆ. ಇದಕ್ಕಿಂತ ಮೊದಲು ದೀಪ್ ಜೊತೆಗೂಡಿ ಲೂಸ್ ಕನೆಕ್ಷನ್ ಎಂಬ ವೆಬ್ ಸೀರಿಸ್ ನಿರ್ಮಾಣ ಮಾಡಿದ್ದರು. ಈಗ ಇದೇ ಟೀಮ್ ಇದೀಗ ಶಿವಣ್ಣ ಅವರಿಗೆ ಕಥೆ ರೆಡಿ ಮಾಡಿಕೊಂಡಿದೆ. ಇದಕ್ಕೆ ಓಂಕಾರ್ ಎಂಬ ಟೈಟಲ್ ನೀಡಿದೆ.

ಇನ್ನು ಇದರ ಕೆಥೆಯನ್ನು ಕೇಳಿದ ಶಿವಣ್ಣ ತುಂಬಾ ಫಿದಾ ಆಗಿದ್ದಾರೆ. ಹೀಗಾಗಿ ವೆಬ್ ಸೀರೀಸ್ ನಲ್ಲಿ ನಟಿಸಲು ಶಿವಣ್ಣ ಸಿದ್ದರಾಗಿದ್ದಾರೆ. ಸದ್ಯ ತಮ್ಮ ಕೈಯಲ್ಲಿರುವ ಸಿನಿಮಾವನ್ನು ಮುಗಿಸಿ ನಂತರ ವೆಬ್ ಸೀರೀಸ್ ಒಂದರಲ್ಲಿ ನಟಿಸುವುದಾಗಿ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top