fbpx
cinema

ಮೊದಲ ಬಾರಿಗೆ ಮುದ್ದು ಮಗನ ಮುಖ ರಿವೀಲ್ ಮಾಡಿದ ನಟಿ ಸಂಜನಾ

ನಟಿ ಸಂಜನಾ ಗಲ್ರಾನಿ ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದ ವಿಚಾರ ಎಲ್ಲರಿಗೂ ಗೊತ್ತಿರುವಂಥದ್ದೇ ಇದೀಗ ತನ್ನ ಮಗುವಿನ ಮುಖವನ್ನ ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಮಾಡಿದ್ದಾರೆ. ಈಗಷ್ಟೇ ಡಿಸ್ಚಾರ್ಜ್ ಆಗಿ ಮನೆ ಬಂದಿರುವ ಸಂಜನಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಅಷ್ಟೇ ಅಲ್ಲ, ತನ್ನ ಮುದ್ದಾದ ಮಗುವಿನ ಮುಖ ಕೂಡ ರಿವೀಲ್ ಮಾಡಿದ್ದಾರೆ.

 

 

ಅಂದಹಾಗೆ ನಟಿ ಸಂಜನಾ ಮುಸ್ಲಿಂ ಸಂಪ್ರದಾಯದಲ್ಲಿ ವೈದ್ಯ ಅಜೀಜ್ ಪಾಷ ಅವರನ್ನು ಮದುವೆಯಾಗಿದ್ದರು. ಅಜೀಜ್ ಪಾಷ ಬೆಂಗಳೂರಿನ ಪ್ರಸಿದ್ಧ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ಡ್ರಗ್ಸ್ ವಿವಾದದ ವೇಳೆ ಸಂಜನಾ ಮದುವೆ ವಿಚಾರ ಹೊರಬಂದಿತ್ತು. ಇದೀಗ ದಂಪತಿ ಮೊದಲ ಮಗುವಿನ ಆಗಮನದ ಸಂಭ್ರಮದಲ್ಲಿದ್ದಾರೆ. ತಾವು ಗರ್ಭಿಣಿ ಕಳೆದ ಜನವರಿಯಲ್ಲಿ ಎಂಬ ವಿಚಾರವನ್ನು ಸಂಜನಾ ಹಂಚಿಕೊಂಡಿದ್ದರು.

 

 

ಡ್ರಗ್ಸ್ ಪ್ರಕರಣದಲ್ಲಿ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಸದ್ಯ ಚಿತ್ರರಂಗದಿಂದ ಕೊಂಚ ಬ್ರೇಕ್ ಪಡೆದಿರುವ ನಟಿ ಸಂಜನಾ ಗಲ್ರಾಣಿ ಈಗ ತಾಯ್ತನದ ಕ್ಷಣ ಅನುಭವಿಸುತ್ತಿದ್ದಾರೆ. ಬೇಬಿ ಬಂಪ್ ಫೋಟೋಶೂಟ್‍ನಿಂದ ವೈರಲ್ ಆಗಿದ್ದ ನಟಿ ಸಂಜನಾ, ಹಿಂದೂ ಮತ್ತು ಮುಸ್ಲಿಂ ಸಂಪ್ರದಾಯದಂತೆ ಸೀಮಂತ ಶಾಸ್ತ್ರ ನೆರವೇರಿತ್ತು. ಇದೀಗ ಗಂಡು ಮಗುವಿಗೆ ಜನ್ಮ ನೀಡಿರುವುದು ಗಲ್ರಾನಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top