fbpx
ಸಮಾಚಾರ

ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ, ನಿರೂಪಕಿ ಸಿರಿ ರವಿಕುಮಾರ್

ಆರ್ ಜೆ, ನಿರೂಪಕಿ, ನಟಿ ಸಿರಿ ರವಿಕುಮಾರ್ ಅವರು ಮದುವೆ ಮಾಡಿಕೊಂಡಿರುವ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ನಟಿ ಸಿರಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಕಳೆದ ವರ್ಷ ಡಿಸೆಂಬರ್‌ನಲ್ಲಿ. ಆದರೆ ತನ್ನ ಮದುವೆ ವಿಚಾರವನ್ನು ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. ಇದೀಗ ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಈ ವಿಚಾರವನ್ನು ತಿಳಿಸಿದ್ದಾರೆ.

ಬೆಂಗಳೂರಿನ ಬನಶಂಕರಿಯ ನಿವಾಸಿಯಾಗಿರುವ ಸಿರಿ, ರವಿಕುಮಾರ್ ಎಂಬುವವರ ಕೈಹಿಡಿದಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಕಳೆದ ವರ್ಷದ ಕೊನೆಯಲ್ಲಿ ಹಸೆಮಣೆ ಏರಿದ್ದಾರೆ. ಮದುವೆಯಲ್ಲಿ ಬಿಳಿ ಮತ್ತು ಕೆಂಪು ಬಣ್ಣದ ಜೆರಿ ಸೀರಿಯಲ್ಲಿ ಕಂಗೊಳಿಸಿದ್ದಾರೆ. ಇನ್ನು ಆರತಕ್ಷತೆ ಸಮಾರಂಭದಲ್ಲಿ ಮದುಮಗಳು ಸಿರಿ ಲೆಹಂಗದಲ್ಲಿ ಮಿಂಚಿದ್ದಾರೆ.

ಸಿರಿ ರವಿಕುಮಾರ್ ಆರ್ ಜೆ ಮತ್ತು ನಿರೂಪಣೆ ಮಾಡುವ ಜೊತೆಗೆ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. 2017 ರಲ್ಲಿ ’ಹ್ಯಾಪಿ ನ್ಯೂ ಇಯರ್’ ಹಾಗೂ ಬದ್ಮಾಶ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸದ್ಯ ಸಿರಿ ಸಕುಟುಂಬ ಸಮೇತ ಸಿನಿಮಾದಲ್ಲಿ ನಟಿಸಿದ್ದು ಈಗಾಗಲೇ ರಿಲೀಸ್ ಆಗಿದೆ. ಇನ್ನು ಕಿರುತೆರೆಯಲ್ಲೂ ಖ್ಯಾತಿ ಗಳಿಸಿರುವ ಕನ್ನಡ ಕೋಗಿಲೆ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದರು. ಈ ಶೋ ಸಿರಿ ಅವರಿಗೆ ದೊಡ್ಡ ಮಟ್ಟದಲ್ಲಿ ಖ್ಯಾತಿಯನ್ನ ತಂದುಕೊಟ್ಟಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top