fbpx
ಸಮಾಚಾರ

ಮೆಗಾ ಹರಾಜಿನಲ್ಲಿ ಅನ್ ಸೋಲ್ಡ್: ಆರ್‌ಸಿಬಿಗಾಗಿ ಮದುವೆಯನ್ನೇ ಮುಂದೂಡಿದ್ದ ಪಾಟಿದಾರ್: ರಜತ್ ಮ್ಯಾರೇಜ್​ ಸ್ಟೋರಿಯಿದು

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನ ಎಲಿಮಿನೇಟರ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ರಜತ್ ಪಾಟಿದಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕೇವಲ 54 ಎಸೆತಗಳಲ್ಲಿ ರಜತ್ ಪಾಟಿದಾರ್ ಅಜೇಯ 112 ರನ್ ಬಾರಿಸಿದ್ದು ಆರ್ ಸಿಬಿ ತಂಡಕ್ಕೆ ಹೀರೋ ಆಗಿದ್ದರು. ಗಾಯಾಳು ಆಟಗಾರನ ರಿಪ್ಲೇಸ್ ಮೆಂಟ್ ಆಗಿ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾದ ರಜತ್ ಆರ್‌ಸಿಬಿಗಾಗಿ ಆಡಲು ತನ್ನ ಮದುವೆಯನ್ನೇ ಮುಂದೂಡಿದ್ದಾರೆ ಎಂಬುದು ತಿಳಿದುಬಂದಿದೆ.

ಈ ಬಾರಿಯ ಹರಾಜಿನಲ್ಲಿ ಮೊದಲಿಗೆ ಯಾವುದೇ ತಂಡಕ್ಕೂ ಬೇಡವಾಗಿದ್ದ ರಜತ್ ಪಾಟಿದಾರ್ ಹರಾಜಾಗದೆ ಉಳಿದುಕೊಂಡಿದ್ದರು. ಆದರೆ ನಂತರ ಬದಲಿ ಆಟಗಾರನಾಗಿ ಆರ್‌ಸಿಬಿ ತಂಡವನ್ನು ಸೇರಿಕೊಂಡ ಪಾಟಿದಾರ್ ಆಡುವ ಬಳಗದಲ್ಲಿ ಅವಕಾಶವನ್ನು ಪಡೆದಿದ್ದು ಮಾತ್ರವಲ್ಲದೆ ಆಡಿದ ಎಲ್ಲಾ ಪಂದ್ಯಗಳಲ್ಲಿಯೂ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿನ ಪ್ರದರ್ಶನ ಅವರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ಹೌದು, ಇಂತಹದೊಂದು ಆಶ್ಛರ್ಯಕರ ಸಂತಿಯೊಂದು ಇದೀಗ ಬೆಳಕಿಗೆ ಬಂದಿದೆ. ಮೇ ತಿಂಗಳಲ್ಲಿ ಯಾವುದೇ ಕ್ರಿಕೆಟ್ ಟೂರ್ನಿಗಳಿರದ ಕಾರಣ ಮೇ ತಿಂಗಳಲ್ಲಿ ಮೇ 09ರಂದು ವಿವಾಹ ಮಾಡಲು ಮನೆಯವರೆಲ್ಲಾ ನಿರ್ಧರಿಸಿದ್ದರಂತೆ. ಇನ್ನು, ಈ ಕುರಿತು ಖಾಸಗಿ ಪತ್ರಿಕೆಗೆ ಸಂದರ್ಶನ ನೀಡಿದ್ದ ರಜತ್ ತಂದೆ, ‘ರಜತ್ ಅವನಿಗೆ ನಾವೆಲ್ಲರೂ ಸೇರಿ ಮದುವೆಯನ್ನು ನಿಸ್ಛಯಿಸಿದ್ದೇವು. ಅಲ್ಲದೇ ಇದೇ ಮೇ 9ರಂದು ರಜತ್ ವೈವಾಹಿಕ ಜೀವನಕಲ್ಕೆ ಕಾಲಿಡಬೇಕಿತ್ತು. ಅಲ್ಲದೇ ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನೂ ನಾವು ಮಾಡಿಕೊಂಡಿದ್ದೆವು‘ ಎಂದು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top