fbpx
ಸಮಾಚಾರ

IPL 2022 ಕ್ವಾಲಿಫೈಯರ್ 2: RCB vs RR ಪಂದ್ಯಕ್ಕೆ ಮಳೆ ಕಾಟ ಇದೆಯೇ? ಇಲ್ಲಿದೆ ಹವಾಮಾನ ವರದಿ. ಮಳೆಯಾದರೆ ಮುಂದೇನು?

ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಇಂದು ಕ್ವಾಲಿಫೈರ್-2 ಪಂದ್ಯ ನಡೆಯಲಿದೆ. ಇಂದಿನ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ತಲುಪಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ. ಕೋಲ್ಕತ್ತಾ ದಲ್ಲಿಇದ್ದಂತೆ weather ಇರಲಿದೆಯಾ ಅಥವಾ ಬೇರೆ ರೀತಿ ಇರುತ್ತಾ ಎಂಬ ಅನುಮಾನ ಅಭಿಮಾನಿಗಳ ಮನಸಲ್ಲಿ ಇದೆ. ಆದರೆ ಇದಕ್ಕೆ ಉತ್ತರ ಸಿಕ್ಕಿದೆ.

ಮಾಧ್ಯಮದ ವರದಿಗಳ ಪ್ರಕಾರ ಮೇ 27 ರಂದು (ಶುಕ್ರವಾರ) ಅಹಮದಾಬಾದ್ ನಗರದ ತಾಪಮಾನವು ಹಗಲಿನಲ್ಲಿ ಸುಮಾರು 42 ° ಸೆಲ್ಸಿಯಸ್ ಮತ್ತು ರಾತ್ರಿಯಲ್ಲಿ 29 ° C ಗೆ ಇಳಿಯುತ್ತದೆ. ಹಗಲಿನಲ್ಲಿ ಆಕಾಶವು ಭಾಗಶಃ ಮೋಡವಾಗಿರುತ್ತದೆ ಮತ್ತು ರಾತ್ರಿಯಲ್ಲಿ ಶುಭ್ರವಾಗಿರುತ್ತದೆ. ಮಳೆಯ ಸಾಧ್ಯತೆಯು ಹಗಲಿನಲ್ಲಿ 3% ಮತ್ತು ರಾತ್ರಿಯಲ್ಲಿ 3% ಇರುತ್ತದೆ. ತೇವಾಂಶವು ಹಗಲಿನಲ್ಲಿ ಸುಮಾರು 51% ಮತ್ತು ರಾತ್ರಿಯಲ್ಲಿ 61% ಕ್ಕೆ ಏರುತ್ತದೆ. ಹಾಗಾಗಿ ಇಂದಿನ ಪಂದ್ಯದಲ್ಲಿ ಮಳೆಯ ಅಡಚಣೆಯ ಸಾಧ್ಯತೆ ತೀರಾ ಕಡಿಮೆ ಎನ್ನಬಹುದು.

ಐದು ಓವರ್ ಮ್ಯಾಚ್:
ಎಲಿಮಿನೇಟರ್ ಮತ್ತು ಪ್ರತಿ ಕ್ವಾಲಿಫೈಯರ್ ಪ್ಲೇಆಫ್ ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲದಿರುದಿಲ್ಲ. ಮಳೆ ಹೆಚ್ಚಾದರೆ ಪ್ಲೇಆಫ್ ಪಂದ್ಯದ ಓವರ್‌ಗಳ ಸಂಖ್ಯೆಯನ್ನು ಕನಿಷ್ಠ ಎಂದರೆ ಐದು ಓವರ್ ಗಳವರೆಗೂ ಕಡಿಮೆ ಮಾಡಬಹುದು,. ಹೀಗೆ ಮಾಡಿದಾಗ ಪ್ರತಿ ತಂಡಕ್ಕೂ ಐದೈದು ಓವರ್ ಬ್ಯಾಟಿಂಗ್ ಅವಕಾಶ ಸಿಗಲಿದೆ.. ಇಲ್ಲಿ ತಂಡಗಳಿಗೆ ಯಾವುದೇ ಟೈಮ್ ಔಟ್ ಸಮಯ ಸಿಗುವುದಿಲ್ಲ.. ಪ್ರತಿ ಇನ್ನಿಂಗ್ಸ್ ಹತ್ತು ನಿಮಿಷಗಳ ಒಳಗೆ ಮುಗಿಸಬೇಕಾಗುತ್ತದೆ.. ಎರಡು ಇನ್ನಿಂಗ್ಸ್ ಗಳ ನಡುವೆ ನಾಲ್ಕು ನಿಮಿಷ ಇನ್ನಿಂಗ್ಸ್ ಬ್ರೇಕ್ ನೀಡಲಾಗುತ್ತದೆ..

ಸೂಪರ್ ಓವರ್:
ಒಂದು ವೇಳೆ ಪಂದ್ಯ ಹವಾಮಾನದಿಂದ ಅಡ್ಡಿಪಡಿಸಿದರೆ ಮತ್ತು ನಿಯಮಿತ ಸಮಯದಲ್ಲಿ ಯಾವುದೇ ಆಟವು ಸಾಧ್ಯವಾಗದಿದ್ದರೆ ಸೂಪರ್ ಓವರ್ ಆಡಿಸಲಾಗುತ್ತದೆ. ಒಂದು ವೇಳೆ ಸೂಪರ್ ಓವರ್ ಅನ್ನು ಕೂಡ ಸಾಧ್ಯವಾಗದ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟರೆ ಲೀಗ್ ಪಾಯಿಂಟ್ಸ್ ಪಟ್ಟಿಯಲ್ಲಿ ಎದುರಾಳಿ ತಂಡಕ್ಕಿಂತ ಮೇಲಿರುವ ತಂಡವನ್ನು ವಿಜೇತ ತಂಡವಾಗಿ ಘೋಷಿಸಲಾಗುತ್ತದೆ.

ಅಂದರೆ ಒಂದು ವೇಳೆ ಇಂದು ಮಳೆ ಬಂದು ಪಂದ್ಯ ನಿಂತುಹೋದರೆ ಲೀಗ್ ಹಂತದ ಪಾಯಿಂಟ್ಸ್ ಪಟ್ಟಿಯಲ್ಲಿ RCB (4ನೇ ಸ್ಥಾನ) ಗಿಂತ ಮೇಲಿನ ಸ್ಥಾನ ಪಡೆದಿದ್ದ RR (2ನೇ ಸ್ಥಾನ) ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯಲಿದೆ. ಅರ್ಥಾತ್ RCB ತಂಡ ಟೂರ್ನಿಯಿಂದ ಎಲಿಮಿನೇಟ್ ಆಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top