fbpx
ಸಮಾಚಾರ

ಶಿಖರ್ ಧವನ್ ಮನೆಗೆ ಬರುತ್ತಿದ್ದಂತೆ ಮನಬಂದಂತೆ ಥಳಿಸಿದ ಅವರ ತಂದೆ- ಅಸಲಿ ಕಾರಣ ಏನು ಗೊತ್ತಾ? ವಿಡಿಯೋ ವೈರಲ್

ಪಂಜಾಬ್ ತಂಡದ ಶ್ರೇಷ್ಠ ಬ್ಯಾಟ್ಸಮನ್ ಮತ್ತು ಭಾರತ ತಂಡದ ಗಬ್ಬರ್ ಎಂದೇ ಕರೆಸಿಕೊಂಡಿರುವ ಶಿಖರ್ ಧವನ್ ಪಂಜಾಬ್ ತಂಡದ ಪರ ಮಹತ್ವದ ಬ್ಯಾಟಿಂಗ್ ಮಾಡಿದ್ದಾರೆ. ಆದರೆ ತಮ್ಮ ತಂಡವನ್ನು ಪ್ಲೇಆಫ್ ಹಂತದ ವರೆಗೂ ತೆಗೆದುಕೊಂಡು ಹೋಗಿಲ್ಲ ಎಂಬ ಬೇಸರ ಅವರಿಗೆ ಇತ್ತು. ಇದೆಲ್ಲದರ ನಡುವೆ ತಮ್ಮ ತಂದೆಯಿಂದ ಬಲವಾದ ಹೊಡೆತವನ್ನು ತಿಂದು ಅದರ ವಿಡಿಯೋ ಒಂದನ್ನು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಶೇರ್ ಮಾಡಿದ್ದಾರೆ.

ಶಿಖರ್ ತಮ್ಮ ತಂಡವನ್ನು ಪ್ಲೇಆಫ್ ಹಂತದವರೆಗೂ ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ ಎಂಬ ಬೇಸರದಿಂದ ಮನೆಗೆ ಹಿಂತಿರುಗಿದರು. ಇದಲ್ಲದೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಇರುವ ಟೀಮ್ ಇಂಡಿಯಾ ತಂಡದಲ್ಲೂ ಆಯ್ಕೆ ಆಗಿಲ್ಲ ಎಂಬ ಬೇಸರ ಕೂಡ ಇತ್ತು. ಆದರೆ ಶಿಖರ್ ಅವರ ತಂದೆಗೆ ಏನ್ ಆಗಿತ್ತೋ ಏನೋ ಗೊತ್ತಿಲ್ಲ ಧವನ್ ಮನೆಗೆ ಬರುತ್ತಿದಂತೆ ಅವರ ಕಪಾಳಕ್ಕೆ ಬಾರಿಸಿ ನೆಲಕ್ಕೆ ತಳ್ಳಿ ಥಳಿಸಿದ್ದಾರೆ. ಮನೆಯವರು ತಡೆಯಲು ಬಂದರು ಸಹ ಅವರನ್ನು ತಳ್ಳಿ ಶಿಖರ್ ಅವರಿಗೆ ತಮ್ಮ ಕಾಲಿನಿಂದ ಒಡೆದು ಥಳಿಸಿದ್ದಾರೆ. ಇದನೆಲ್ಲ ಗಮನಿಸಿದ ಅಭಿಮಾನಿಗಳು ಒಂದು ಕ್ಷಣ ಶಾಕ್ ಆಗಿ ಶಿಖರ್ ಅವರ ತಂದೆ ತಮ್ಮ ಮಗನಿಗೆ ಈ ರೀತಿ ಯಾಕೆ ಒಡೆಯುತ್ತಿದ್ದಾರೆ ಎಂದು ಯೋಚಿಸುತ್ತಿದ್ದರು. ಆದರೆ ಇದರಲ್ಲಿ ಒಂದು ಮಹತ್ವದ ಟ್ವಿಸ್ಟ್ ಇರುತ್ತೆ ಎಂದು ತಿಳಿದಿರಲಿಲ್ಲ.

 

 

View this post on Instagram

 

A post shared by Shikhar Dhawan (@shikhardofficial)

 

ತಮ್ಮ ತಂದೆ ಒಡೆಯುತ್ತಿರುವ ವಿಡಿಯೋವನ್ನು ಶಿಖರ್ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಅಪ್ಲೋಡ್ ಮಾಡಿ “ನಾಕ್‌ಔಟ್‌ ಹಂತಕ್ಕೆ ತೇರ್ಗಡೆ ಯಾಗದ ಕಾರಣ ನನ್ನ ತಂದೆ ಕೈಯಿಂದ ನಾಕ್‌ಔಟ್‌ ಬಿದ್ದಿದೆ,” ಎಂಬ ಕ್ಯಾಪ್ಶನ್ ಹಾಕಿದ್ದರು. ಅಸಲಿಗೆ ಶಿಖರ್ ಅವರ ತಂದೆ ಒಡೆಯುತ್ತಿದಿದ್ದು ಕೇವಲ ತಮಷೆಗೆ ಮಾತ್ರ. ಧವನ್ ಮನರಂಜನೆಯ ಉದ್ದೇಶಕ್ಕಾಗಿ ಈ ರೀತಿ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ತಮ್ಮ ಅಭಿಮಾನಿಗಳನ್ನು ರಂಜಿಸಲು ಈ ರೀತಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top