fbpx
Sports

RCB ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ವಾರ್ನರ್: RCB ಫ್ಯಾನ್ಸ್ ಬಗ್ಗೆ ವಾರ್ನರ್ ಹೇಳಿದ್ದೇನು ಗೊತ್ತಾ?

ಈ ಬಾರಿಯ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಉತ್ತಮ ಬ್ಯಾಟ್ ಬೀಸಿದ ಆಟಗಾರರಲ್ಲಿ ಡೇವಿಡ್ ವಾರ್ನರ್ ಕೂಡ ಒಬ್ಬರು. ಆದರೆ ತಮ್ಮ ತಂಡವನ್ನು ಪ್ಲೇಆಫ್ ಹಂತದವರೆಗೂ ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ ಎಂಬ ಬೇಸರ ಅವರ ಮನಸಿನಲ್ಲಿತ್ತು. ಇದೆಲ್ಲದರ ನಡುವೆ ವಾರ್ನರ್ ಆಡಿದ ಆ ಒಂದು ಮಾತು ಇಡೀ ಆರ್ ಸಿ ಬಿ ಅಭಿಮಾನಿಗಳ ಮನಸಲ್ಲಿ ಸಂತಸ ಮೂಡಿಸಿದೆ.

ಇಂದು ಅಹಮದಾಬಾದ್ ನಲ್ಲಿ ಕ್ವಾಲಿಫೈರ್-2 ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಎರಡು ತಂಡಗಳ ಅಭಿಮಾನಿ ಬಳಗವು ಸೇರುತ್ತದೆ. ಇದೆಲ್ಲದರ ನಡುವೆ ಡೇವಿಡ್ ವಾರ್ನರ್ ಒಂದು ಅಚ್ಚರಿಯ ಸಂಗತಿಯೊಂದನ್ನು ಹೇಳಿದ್ದಾರೆ. ಇವರ ಪ್ರಕಾರ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಈ ಮೂರೂ ತಂಡಗಳ ಪ್ರೇಕ್ಷಕರ ನೆಚ್ಚಿನ ತಂಡ ಎಂದು ತಿಳಿಸಿದ್ದಾರೆ.

ಪ್ರತಿ ಪಂದ್ಯದಲ್ಲೂ ಈ ಮೂರೂ ತಂಡಗಳಿಗೆ ಅಭಿಮಾನಿ ಬಳಗವು ಜಾಸ್ತಿ ಇರುತ್ತದೆ. ಅದು ತವರು ನೆಲ ಆಗಿರಲಿ ಇಲ್ಲ ಎದುರಾಳಿ ತಂಡದ ನೆಲ ಆಗಿರಲಿ ಇವರ ಅಭಿಮಾನಿಗಳ ಕ್ರೇಜ್ ಯಾವತ್ತೂ ಕಮ್ಮಿ ಆಗಲ್ಲ. ಇದು ಆಟಗಾರರಿಗೆ ಉತ್ತಮವಾಗಿ ಆಡಲು ಉತ್ಸಾಹವನ್ನು ನೀಡುತ್ತದೆ. ಈ ಮೂರು ತಂಡಗಳಿಗೆ ಹೋಲಿಸಿದರೆ RCB ಅಭಿಮಾನಿಗಳು ಒಂದು ಹೆಜ್ಜೆ ಮುಂದೆ” ಎಂದು ವಾರ್ನರ್ ಹೇಳಿದ್ದಾರೆ. ವಾರ್ನರ್ ಅವರ ಈ ಹೇಳಿಕೆ ಆರ್ ಸಿ ಬಿ ಅಂಭಿಮಾನಿಗಳಿಗೆ ಸಂತಸವನ್ನು ತಂದಿದ್ದು ಇಂದಿನ ಪಂದ್ಯದಲ್ಲಿ ಆರ್ ಸಿ ಬಿ ಕ್ರಾಜ್ ಮತ್ತಷ್ಟು ಹೆಚ್ಚಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top