fbpx
ಸಮಾಚಾರ

ಮೊದಲ ಪತಿಗೆ ವಿಚ್ಚೇದನ ನೀಡಿದ 10 ವರ್ಷದಲೇ ಮಕ್ಕಳ ಸಮ್ಮುಖದಲ್ಲಿ ಮದುವೆಯಾದ ಬಾಲಿವುಡ್ ಗಾಯಕಿ!

ಇದೀಗ ಸಿನಿಮಾ ಜಗತ್ತಿನಲ್ಲಿ ವಿಚ್ಚೇದನ ಎಂಬ ಪದ ತುಂಬಾ ಸಾರಿ ಕೇಳಿಬರುತ್ತಿದೆ. ಅದರಲ್ಲೂ ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ಅವರು ಇದೀಗ ತುಂಬಾ ಸುದ್ದಿ ಯಾಗುತ್ತಿದ್ದಾರೆ. ಈ ಬಾಲಿವುಡ್ ಗಾಯಕಿ ತಮ್ಮ ಪತಿಗೆ ವಿಚ್ಚೇದನ ನೀಡಿ 10 ವರ್ಷಗಳ ನಂತರ ಮರು ಮದುವೆ ಆಗಿದ್ದರು. ಅದು ಕೂಡ ತಮ್ಮ ಮಕ್ಕಳ ಸಮ್ಮುಖದಲ್ಲಿ ಎಂಬುದು ಅಚ್ಚರಿಯ ವಿಷಯ.

ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಬಾಲಿವುಡ್ ಹಾಡುಗಳಿಗೆ ಇವರು ಧನಿಯಾಗಿದ್ದರು. ಆದರೆ ತಮ್ಮ ವೃತಿ ಜೀವನ ಮಾತ್ರ ಸುಸೂತ್ರವಾಗಿ ಇರಲಿಲ್ಲ. 1998ರಲ್ಲಿ ರಾಜ್ ಎಂಬುವವರ ಜೊತೆ ಕನ್ನಿಕಾ ವಿವಾಹವಾಗಿತ್ತು. ಈ ಜೋಡಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗ ಇದ್ದರು. ಆದರೆ ಇವರ ದಾಂಪತ್ಯದಲ್ಲಿ ಅನ್ಯೋನ್ಯತೆ ಇಲ್ಲದೆ ಇದ್ದ ಕಾರಣ 2012ರಲ್ಲಿ ಕನ್ನಿಕಾ, ರಾಜ್ ಗೆ ವಿಚ್ಛೇದನ ನೀಡಿದರು. ನಂತರ ತಮ್ಮ ಮಕ್ಕಳನ್ನು ಅವರೇ ಸಾಕಿ ಬೆಳೆಸಿದರು.

 

 

View this post on Instagram

 

A post shared by Kanika Kapoor (@kanik4kapoor)

 

ಕನ್ನಿಕಾ ಅವರ ಮರು ಮದುವೆ ಗೆ ಅವರ ಮಕ್ಕಳು ಸಹ ಒಪ್ಪಿದ್ದಾರೆ. ಮದುವೆಯ ಪ್ರತಿಯೊಂದು ಶಾಸ್ತ್ರದಲ್ಲೂ ಮಕ್ಕಳು ಸಕ್ರಿಯವಾಗಿ ಭಾಗಿಯಾಗಿದ್ದರು. ಕನ್ನಿಕಾ ಸಪ್ತಪದಿ ತುಳಿಯುವ ವೇಳೆ ಕನ್ನಿಕಾ ಹೆಣ್ಣು ಮಕ್ಕಳು ತಾಯಿಯ ಲೆಹೆಂಗಾವು ಅವರಿಗೆ ನಡೆಯಲು ಕಷ್ಟವಾಗದಂತೆ ನೋಡಿಕೊಂಡಿದ್ದರು. ಇದಲ್ಲದೆ ತಮ್ಮ ಮದುವೆಯ ಸುಂದರ ಕ್ಷಣಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕನ್ನಿಕಾ ಹಂಚಿಕೊಂಡು ತಮ್ಮ ಪತಿಯ ಬಗ್ಗೆ ಹೊಗಳಿ ಮಾತನಾಡಿದ್ದಾರೆ.

ನಿಮ್ಮ ಬದುಕಿನಲ್ಲೂ ಮ್ಯಾಜಿಕ್ ನಡೆಯುತ್ತದೆ. ಅದನ್ನು ನಂಬೋದನ್ನು ಯಾವತ್ತೂ ನಿಲ್ಲಿಸಬೇಡಿ. ನಿಮ್ಮ ಕನಸುಗಳು ಒಂದು ದಿನ ಈಡೇರುತ್ತೆ. ನಾನು ನನ್ನ ರಾಜನನ್ನು ಹುಡಿಕೊಂಡೆ. ನಮ್ಮಿಬ್ಬರನ್ನು ಭೇಟಿ ಮಾಡಿಸಿದ ಯೂನಿವರ್ಸ್ ಗೆ ಧನ್ಯವಾದಗಳು. ನಿನ್ನ ಜೊತೆ ಹೊಸ ಜರ್ನಿ ಮಾಡಲು, ನಿನ್ನ ಜೊತೆ ಬೆಳೆಯಲು, ಕಲಿಯಲು, ನಿನ್ನ ಜೊತೆಗೆ ನಗಲು ಬಹಳ ಉತ್ಸುಕತೆಯಿಂದಿರುವೆ. ಪ್ರತಿದಿನ ನನ್ನನ್ನು ನಗಿಸುತ್ತಿರುವುದಕ್ಕೆ ಧನ್ಯವಾದಗಳು. ನನ್ನ ಸ್ನೇಹಿತ, ನನ್ನ ಸಂಗಾತಿ, ನನ್ನ ಹೀರೋ ಎಂದು ಪತಿ ಗೌತಮ್ ಕುರಿತು ಕನ್ನಿಕಾ ಕಪೂರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಗಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top