fbpx
ಸಮಾಚಾರ

‘ವಿಕ್ರಾಂತ್ ರೋಣ’ ಆರ್ಭಟಕ್ಕೆ ಅಂಜಿದ ಅಜಯ್ ದೇವಗನ್ ಸಿನಿಮಾ ಬಿಡುಗಡೆ ಮುಂದೂಡಿಕೆ!

ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂಬ ಚರ್ಚೆ ಮತ್ತು ಹಿಂದಿ ಹೇರಿಕೆ ವಿಚಾರ ಮತ್ತೆ ದೇಶಾದ್ಯಂತ ಚರ್ಚೆಯಾಗಿತ್ತು. ಇದಕ್ಕೆ ಹಿಂದಿ ಕುರಿತು ನಟ ಕಿಚ್ಚ ಸುದೀಪ್ ಹೇಳಿಕೆಗೆ ಬಾಲಿವುಡ್ ನಟ ಅಜಯ್ ದೇವಗನ್ ನೀಡಿದ್ದ ‘ಹಿಂದಿ’ ಟ್ವೀಟ್ ಕಾರಣವಾಗಿತ್ತು. ಇದರ ಬೆನ್ನಲ್ಲೇ ಹಿಂದಿ ಪರ- ವಿರೋಧದ ಚರ್ಚೆ ಜೋರಾಗಿದೆ. ದೇವಗನ್ ಹೇಳಿಕೆಗೆ ಹಲವು ದಕ್ಷಿಣ ಭಾರತದ ನಟ ನಟಿಯರು ಆಕ್ರೋಶ ವ್ಯಕ್ತ ಪಡಿಸಿದ್ದರು. ಈ ವೇಳೆ ಕಿಚ್ಚನ ಬೆಂಬಲಕ್ಕೆ ದಕ್ಷಿಣ ಹಾಗೂ ಉತ್ತರ ಭಾರತದ ಚಿತ್ರರಂಗದ ಕೆಲ ತಾರೆಯರು ನಿಂತಿದ್ದರು.

ಸುದೀಪ್ ಮತ್ತು ಅಜಯ್ ದೇವಗನ್ ನಡುವಿನ ವಾಕ್ ಸಮರ ಅವರ ಸಿನಿಮಾ ತನಕವೂ ತಲುಪಿತು. ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ದಿನಾಂಕ ಮೊದಲೆ ಪ್ರಕಟ ಆಗಿತ್ತು. ಆದರೆ ಅದೇ ದಿನಾಂಕಕ್ಕೆ ಅಜಯ್ ದೇವಗನ್ ಹೊಸ ಸಿನಿಮಾ ರಿಲೀಸ್ ದಿನಾಂಕ ಅನೌನ್ಸ್ ಮಾಡಿತ್ತು. ಹಾಗಾಗಿ ಕಿಚ್ಚ ಮತ್ತು ಅಜಯ್ ದೇವಗನ್ ನಡುವೆ ಬಾಕ್ಸಾಫೀಸ್ ವಾರ್ ನಡೆಲಿದೆ ಎನ್ನಲಾಗಿತ್ತು. ಆದರೆ ಈಗ ಅಜಯ್ ದೇವಗನ್ ಮುಂದಕ್ಕೆ ಹೋಗಿದ್ದಾರೆ.

ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಇದೇ ಜುಲೈ 28 ರಂದು ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಈಗಾಗಲೇ ಅಧಿಕೃತ ಘೋಷಣೆ ಕೂಡ ಆಗಿದ್ದು, ಲಿರಿಕಲ್ ಹಾಡಿನ ಮೂಲಕ ಚಿತ್ರ ಬಹಳ ಸದ್ದು ಮಾಡುತ್ತಿದೆ. ಅದೇ ಸಮಯದಲ್ಲಿ ಅಜಯ್ ದೇವಗನ್ ನಟನೆಯ ಥ್ಯಾಂಕ್ ಗಾಡ್ ಚಿತ್ರ ಕೂಡ ರಿಲೀಸ್ ಆಗಲಿದೆ ಎಂಬ ಮಾತು ಕೇಳಿ ಬಂದಿತ್ತು. ಇದು ಅಜಯ್ ಮತ್ತು ಕಿಚ್ಚ ಚಿತ್ರದ ಮೂಲಕ ಪೈಪೋಟಿ ಮಾಡುತ್ತಿದ್ದಾರೆ ಎಂಬ ಸುದ್ದಿಗಳಿಗೆ ಕಾರಣವಾಗಿತ್ತು. ಆದರೆ ಇದೀಗ ಅಜಯ್ ದೇವಗನ್ ಹಿಂದೆ ಸರಿದಿದ್ದು, ಚಿತ್ರದ ಬಿಡುಗಡೆ ದಿನಾಂಕವನ್ನು ಬದಲಾವಣೆ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗುತ್ತಿದೆ.

ಸದ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಆ ದಿನ ಅಜಯ್ ದೇವಗನ್ ನಟನೆಯ ಥ್ಯಾಂಕ್ ಗಾಡ್ ಸಿನಿಮಾ ಬಿಡುಗಡೆ ಆಗುವುದಿಲ್ಲವಂತೆ. ಸಿನಿಮಾಗಳ ನಡುವೆ ಪೈಪೋಟಿ ಬೇಡವೆಂದು ಈ ಸಿನಿಮಾದ ದಿನಾಂಕವನ್ನು ಬದಲಿಸುತ್ತಿದೆಯಂತೆ ಚಿತ್ರತಂಡ. ಹಾಗಾಗಿ ಜುಲೈ 28 ರಂದು ಕೇವಲ ವಿಕ್ರಾಂತ್ ರೋಣ ಮಾತ್ರ ಬಿಡುಗಡೆ ಆಗುತ್ತಿದೆ ಎನ್ನಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top