fbpx
ಸಮಾಚಾರ

ಅತ್ಯಂತ ಕೆಟ್ಟ ದಾಖಲೆ ಬರೆದ ಸಿರಾಜ್

ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನೆನ್ನೆ ನಡೆದ ಕ್ವಾಲಿಫೈರ್ ಪಂದ್ಯದಲ್ಲಿ ಆರ್ ಸಿ ಬಿ ಸೋಲುವ ಮೂಲಕ ಈ ಬಾರಿಯೂ ಕಪ್ ಗೆಲ್ಲುತ್ತದೆ ಎಂದು ಅಸೆ ಇಟ್ಟುಕೊಂಡ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಆದರೆ ಈ ಬಾರಿಯ ಐಪಿಎಲ್ ನಲ್ಲಿ ಆರ್ ಸಿ ಬಿ ಪರ ಯಾವ ಬ್ಯಾಟ್ಸಮನ್ ಮಾಡದೇ ಇರುವ ಸಾಧನೆಯನ್ನು ಸಿರಾಜ್ ಮಾಡಿದ್ದಾರೆ.

ಈ ಬಾರಿಯ ಐಪಿಎಲ್ ನಲ್ಲಿ 15 ಪಂದ್ಯ ಆಡಿರುವ ಸಿರಾಜ್ ಬೌಲಿಂಗ್​ನಲ್ಲಿ ನೀಡಿದ್ದು ಬರೋಬ್ಬರಿ 514 ರನ್ ಗಳನ್ನೂ ನೀಡಿದ್ದಾರೆ. ಇದು ಇವರ ವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನವಾಗಿದೆ. ಇದರಲ್ಲಿ ಸಿರಾಜ್ ಒಟ್ಟು 31 ಸಿಕ್ಸರ್ ಗಳನ್ನು ಹೊದಿಸಿಕೊಂಡಿದ್ದಾರೆ. ಇದಕ್ಕೆ ಮೊದಲು ಸಿ ಎಸ್ ಕೆ ತಂಡದ ಬೌಲರ್ ಡ್ವೇನ್ ಬ್ರಾವೊ 29 ಸಿಕ್ಸ್ ಹೊದಿಸಿಕೊಂಡಿದ್ದರು. ಇದೀಗ ಸಿರಾಜ್ ಇವರ ಧಾಖಲೆಯನ್ನು ಹಿಂದಿಕ್ಕಿದ್ದಾರೆ.

ಪ್ರಸ್ತುತ ಐಪಿಎಲ್ ನಲ್ಲಿ 514 ರನ್ ಹೊಂದಿಸಿಕೊಳ್ಳುವ ಮೂಲಕ ಆರ್ ಸಿ ಬಿ ಪರ ಯಾವುದೇ ಬ್ಯಾಟ್ಸಮನ್ ಮಾಡದೇ ಇರುವ ಸಾಧನೆಯನ್ನು ಮಾಡಿದ್ದಾರೆ. ಈ ಬಾರಿ ಆರ್​ಸಿಬಿ ಪರ ಅತೀ ಹೆಚ್ಚು ರನ್​ ಕಲೆಹಾಕಿದ್ದು ನಾಯಕ ಫಾಫ್ ಡುಪ್ಲೆಸಿಸ್. ಫಾಫ್ ಈ ಬಾರಿ 468 ರನ್​ಗಳಿಸಿದ್ದಾರೆ. ಇವರನ್ನು ಹೊರೆತುಪಡಿಸಿ ವಿರಾಟ್ 341 ರನ್​ ಕಲೆಹಾಕಿದರೆ, ಮ್ಯಾಕ್ಸಿ 301 ರನ್ ಗಳಿಸಿದ್ದಾರೆ. ಇವರೆಲ್ಲರನ್ನು ಹಿಂದಿಕ್ಕಿ ಸಿರಾಜ್ 514 ರನ್ ಗಳಿಸಿದ್ದು, ಅದು ಬೌಲಿಂಗ್ ನಲ್ಲಿ ಎಂಬುದು ವಿಪರ್ಯಾಸ ಅಷ್ಟೇ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top