fbpx
ಸಮಾಚಾರ

ವಿರಾಟ್, ಧೋನಿ, ರೋಹಿತ್ ಇಲ್ಲದೆ ನಡೆದ ಮೊದಲ ಐಪಿಎಲ್ ಫೈನಲ್ ಇದು: ಇಲ್ಲಿದೆ ಕುತೂಹಲಕಾರಿ ಸಂಗತಿ

ಐಪಿಎಲ್ 2022 ಕೊನೆಗೂ ಮುಗಿದು ಹಲವು ರೋಚಕತೆಯಿಂದ ಕೂಡಿತ್ತು. ಪಾದಾರ್ಪಣೆ ಮಾಡಿದ ಸೀಸನ್ ನಲ್ಲೆ ಗುಜರಾತ್ ಕಪ್ ಗೆದ್ದು ಸಂಭ್ರಮಿಸಿತು. ಇದೆಲ್ಲದರ ನಡುವೆ ಕೆಲವು ಅಚ್ಚರಿಯ ಸಂಗತಿಗಳು ನಡೆದರೆ ಇನ್ನೊಂದೆಡೆ ಅಭಿಮಾನಿಗಳಿಗೆ ಕೆಲವು ಬೇಸರದ ಸಂಗತಿ ಕೂಡ ನಡೆಯಿತು. ಅತ್ಯಂತ ಅಚ್ಚರಿಯ ಸಂಗತಿ ಎಂದರೆ 2014 ರ ಬಳಿಕ ಇದೇ ಮೊದಲ ಬಾರಿಗೆ ಭಾರತ ತಂಡದ ಸ್ಟಾರ್ ಆಟಗಾರರಾದ ಎಂ.ಎಸ್ ಧೋನಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಲ್ಲದೆ ಫೈನಲ್ ನೋಡುವಂತಾಯಿತು.

2008 ರಿಂದ 2021 ವರೆಗೂ ನಡೆದ ಐಪಿಎಲ್ ಪಂದ್ಯದಲ್ಲಿ ವಿರಾಟ್, ಧೋನಿ ಮತ್ತು ರೋಹಿತ್ ಶರ್ಮಾ ಫೈನಲ್ ಪಂದ್ಯದಲ್ಲಿ ಆಡಿದ್ದಾರೆ. ಆದರೆ ಇದೇ ಮೊದಲ ಬಾರಿ ಈ ಮೂವರು ಘಟಾನುಘಟಿಗಳಿಲ್ಲದೆ ಫೈನಲ್ ಪಂದ್ಯ ನಡೆದಿರೋದು ವಿಪರ್ಯಾಸ.

ಐಪಿಎಲ್ ಹಿತಿಹಾಸದ ಕಡೆ ಒಂದು ಕ್ಷಣ ಕಣ್ಣು ಹಾಕಿದರೆ ಮುಂಬೈ ತಂಡ 2010, 2013, 2015, 2017, 2019, 2020 ರಲ್ಲಿ ಫೈನಲ್ ತಲುಪಿ 2020 ರಲ್ಲಿ ಮಾತ್ರ ಎರಡನೇ ಸ್ಥಾನ ಅಲಂಕರಿಸಿದೆ. ಇನ್ನುಳಿದ ವರ್ಷಗಳಲ್ಲಿ ಕಪ್ ಗೆದ್ದಿದೆ. ಅಂದರೆ ಒಟ್ಟು 5 ಬಾರಿ ಕಪ್ ಗೆದ್ದಿದೆ. ಇನ್ನು ಚೆನ್ನೈ ತಂಡ 2008, 2010, 2011, 2012, 2013, 2015, 2018, 2019, 2021ರಲ್ಲಿ ಫೈನಲ್ ತಲುಪಿ 2010, 2011, 2018 ಮತ್ತು 2021ರಲ್ಲಿ ಕಪ್ ಗೆದ್ದಿದೆ. ಅಂದರೆ ಒಟ್ಟು 4 ಬಾರಿ ಕಪ್ ಗೆದ್ದಿದೆ. ಇನ್ನು ನಮ್ಮ ರಾಯಲ್ ಚಾಲೆಂಜರ್ಸ್ ತಂಡ 2009, 2011, 2016 ರಲ್ಲಿ ಫೈನಲ್ ತಲುಪಿತ್ತು. ಆದರೆ ಈ ಮೂರೂ ಪಂದ್ಯದಲ್ಲೂ ಮುಗ್ಗರಿಸಿ ಕಪ್ ಗೆಲ್ಲಲು ವಿಫಲವಾಗಿತ್ತು. ಹೀಗಾಗಿ ಇದೇ ಮೋಡಲ್ ಬಾರಿಗೆ ಈ ಮೂರೂ ಕ್ರಿಕೆಟ್ ದಿಗ್ಗಜರಿಲ್ಲದೆ ಐಪಿಎಲ್ ಪಂದ್ಯ ನೋಡುವಂತಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top