fbpx
ಸಮಾಚಾರ

“ನೀನು ನಾಯಿಯ ಜೊತೆ ಒಂಟಿಯಾಗಿ ಸಾಯುತ್ತೀಯಾ” ಎಂದು ಶಾಪ ಹಾಕಿದ ನೆಟ್ಟಿಗನಿಗೆ ಖಡಕ್ ತಿರುಗೇಟು ಕೊಟ್ಟ ಸಮಂತಾ: ಸ್ಯಾಮ್ ಹೇಳಿದ್ದೇನು ಗೊತ್ತಾ?

ಸಿನಿಮಾ ನಟಿಯರ ಹಾವಭಾವ ಮತ್ತು ಅವರು ಮಾಡೋ ಕಮೆಂಟುಗಳನ್ನಿಟ್ಟುಕೊಂಡು ಟ್ರೋಲ್ ಮಾಡುವವರ ಹಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತಕ್ಕಿಟ್ಟುಕೊಂಡಿದೆ. ಅದರಲ್ಲಿಯೂ ಕೆಲ ಮಂದಿ ಎಗ್ಗುಸಿಗ್ಗಿಲ್ಲದೆ ಕೊಳಕು ಟ್ರಾಲ್ ಮಾಡೋ ಮೂಲಕ ನಟಿಯರನ್ನು ಮಾನಸಿಕ ಹಿಂಸೆಗೀಡು ಮಾಡೋದೂ ಇದೆ.. ಇದರಿಂದ ಹಲವು ಸಂದರ್ಭಗಳಲ್ಲಿ ನಟ ನಟಿಯರು ಸಂಕಟಕ್ಕೀಡಾಗಬೇಕಾಗಿ ಬಂದ ಪ್ರಸಂಗಗಳೂ ಹೆಚ್ಚಾಗಿಯೇ ಇವೆ. ಹೀಗೆ ನೆಗಿಟಿವ್ ಕಾಮೆಂಟ್ ಮಾಡಿದ ವ್ಯಕ್ತಿಯೊಬ್ಬನಿಗೆ ನಟಿ ಸಮಂತಾ ತಿರುಗೇಟು ನೀಡಿದ್ದಾರೆ.

 

 

ನಟಿ ಸಮಂತಾ ಅವರು ಇತ್ತೀಚೆಗೆ ಜಿಮ್‌ನಲ್ಲಿ ವರ್ಕೌಟ್ ಮಾಡಿದ ನಂತರದಲ್ಲಿ ಮುದ್ದಿನ ನಾಯಿ ಮರಿ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದರು. ಈ ಫೋಟೋ ನೋಡಿದ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಆದರೆ ಒಬ್ಬರು ಮಾತ್ರ ಟ್ವಿಟ್ಟರ್‌ನಲ್ಲಿ “ನಾಯಿ, ಬೆಕ್ಕಿನ ಜೊತೆಗೆ ಒಂಟಿಯಾಗಿ ಸಾಯಿ” ಎಂದು ಶಪಿಸಿದ್ದಾರೆ.

ಸಮಂತಾ ಅವರು ಶ್ವಾನದ ಜತೆಗೆ ಹೆಚ್ಚು ಸಮಯ ಕಳೆಯುತ್ತಿರುವ ಬಗ್ಗೆ ಅಭಿಮಾನಿಯೋರ್ವ ವ್ಯಂಗ್ಯವಾಡಿದ್ದ. ‘ನಾಯಿ ಮತ್ತು ಬೆಕ್ಕುಗಳ ಜತೆ ಸಮಂತಾ ಒಂಟಿಯಾಗಿ ಸಾಯುತ್ತಾಳೆ’ ಎಂದು ಬರೆದುಕೊಂಡಿದ್ದ. ಇದಕ್ಕೆ ಸಮಂತಾ ಸಿಟ್ಟು ಮಾಡಿಕೊಳ್ಳಲಿಲ್ಲ. ಬದಲಿಗೆ ‘ನಾನು ಅದೃಷ್ಟಶಾಲಿ ಎಂದುಕೊಳ್ಳುತ್ತೇನೆ’ ಎಂದಷ್ಟೇ ಹೇಳಿದ್ದಾರೆ. ಸಮಂತಾ ಉತ್ತರಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ ಈ ರೀತಿ ಕಾಮೆಂಟ್ ಹಾಕಿದವನನ್ನು ಸಮಂತಾ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಆ ಟ್ವೀಟ್ ಮಾಡಿದವರು ಅವರ ಕಾಮೆಂಟ್ ಡಿಲಿಟ್ ಮಾಡಿದ್ದಾರೆ. ಆದರೆ ಆ ಟ್ವೀಟ್‌ ಸ್ಕ್ರೀನ್‌ಶಾಟ್‌ ಎಲ್ಲೆಡೆ ವೈರಲ್ ಆಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top