fbpx
ಸಮಾಚಾರ

ತನ್ನ ಪ್ರಿಯಕರನನ್ನು ಭೇಟಿ ಮಾಡಲು ಬಾಂಗ್ಲಾದೇಶದಿಂದ ಭಾರತಕ್ಕೆ ಈಜುಕೊಂಡೇ ಬಂದ ಯುವತಿ!

ಪ್ರೇಮಿಗಳು ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ಎಂತಹ ಸಾಧನೆಬೇಕಾದರು ಮಾಡುತ್ತಾರೆ ಎಂದು ನಾವು ಕೇಳಿದ್ದೇವೆ. ಆದರೆ ಇಲೊಬ್ಬ ಯುವತಿ ತನ್ನ ಪ್ರಿಯಕರನನ್ನು ಭೇಟಿಯಾಗಲು ಸಾವಿನ ಭಯ ಇಲ್ಲದೆ ಸುಮಾರು ಒಂದು ಘಂಟೆಗಳ ಕಾಲ ನದಿಯಲ್ಲಿ ಈಜಾಡಿ ತನ್ನ ಪ್ರಿಯಕರನನ್ನು ಭೇಟಿ ಮಾಡಿದ್ದಾಳೆ.

ಬಾಂಗ್ಲಾದೇಶದ ಯುವತಿ ಕೃಷ್ಣ ಮಂಡಲ್ ಎಂಬುವರು ಭಾರತದ ಯುವಕ ಅಭಿಕ್ ಮಂಡಲ್‌ನನ್ನು ಇಷ್ಟಪಡುತ್ತಿದ್ದರು. ಇವರಿಬ್ಬರು ಮೊದಲು ಸಾಮಾಜಿಕ ಜಾಲತಾಣದ ಮೂಲಕ ಸ್ನೇಹಿತರಾಗಿ ಪರಿಚಯರಾದರು. ಇವರಿಬ್ಬರ ಸ್ನೇಹ ನಂತರ ಪ್ರೀತಿಯಾಗಿ ಪರಿವರ್ತನೆಗೊಂಡಿತು. ಈಗಾಗಿ ಕೃಷ್ಣ ಮಂಡಲ್ ತನ್ನ ಪ್ರಿಯಕರನನ್ನು ನೋಡುವ ಉತ್ಸಾಹದಲ್ಲಿದ್ದಳು. ತನ್ನ ಬಳಿ ಪಾಸ್ಪೋರ್ಟ್ ಇಲ್ಲದೆ ಇರುವ ಕಾರಣ ತನ್ನ ಪ್ರಿಯಕರನನ್ನು ನೋಡಲು ಅಕ್ರಮವಾಗಿ ಭಾರತವನ್ನು ಪ್ರವೇಶಿಸಲು ತೀರ್ಮಾನಿಸಿದಳು.

ಅದರಂತೆ ಮೊದಲು ಸುಂದರ್ಬನ್ಸ್ ಪ್ರವೇಶಿಸಿದಳು. ನಂತರ ಸುಮಾರು ಒಂದು ಘಂಟೆಗಳ ಕಾಲ ನದಿಯಲ್ಲಿ ಈಜಾಡಿ ತನ್ನ ಪ್ರಿಯಕರನನ್ನು ತಲುಪಿದಳು ಎಂದು ಪೊಲೀಸರು ತಿಳಿಸಿದರು. ಈಕೆ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿರುವ ಕಾರಣ ಪೊಲೀಸರು ಕೃಷ್ಣ ಮಂಡಲ್ ಅವರನ್ನು ಬಂಧಿಸಿದ್ದಾರೆ. ಮುಂದೆ ಇವರನ್ನು ಬಾಂಗ್ಲಾದೇಶದ ಹೈಕಮಿಷನ್‌ಗೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top