fbpx
ಸಮಾಚಾರ

ಡಾ. ರಾಜ್ ಕುಮಾರ್ ಅವರಿಗೆ ಇಷ್ಟವಾದ ಚಿತ್ರವನ್ನು ಅಮೀರ್ ಖಾನ್ ಹಾಳು ಮಾಡಿದ್ರಾ? ಮಾಳವಿಕಾ ಅವಿನಾಶ್ ಈ ರೀತಿ ಹೇಳಲು ಕಾರಣವೇನು

ಅಮೀರ್ ಖಾನ್ ನಟನೆಯ ಬಹುನಿರೀಕ್ಷಿತ ಸಿನಿಮಾ ಲಾಲ್​ಸಿಂಗ್ ಚಡ್ಡಾಇದೀಗ ರಿಲೀಸ್ ಗೆ ರೆಡಿ ಆಗಿದೆ. 11 ಆಗಸ್ಟ್ 2022 ರಂದು ವಿಶ್ವದಾದ್ಯಂತ ಈ ಚಿತ್ರ ಬಿಡುಗಡೆಯಾಗಲಿದೆ” ಎಂದು ತಿಳಿಸಲಾಗಿತ್ತು. ಈ ಚಿತ್ರದ ಟ್ರೈಲರ್ ಬಿಡುಗಡೆ ಆದ ನಂತರ ಹಲವಾರು ಸಂಕಷ್ಟಗಳು ಎದುರಾಗಿದ್ದವು. ಇದೆಲ್ಲದರ ನಡುವೆ ನಟಿ ಹಾಗೂ ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಅವರ ಒಂದು ಪೋಸ್ಟ್ ಹಲವಾರು ಚರ್ಚೆಗಳಿಗೆ ಕಾರಣವಾಗಿದೆ.

ನಮಗೆಲ್ಲರಿಗೂ ತಿಳಿದಿರುವಂತ ಲಾಲ್​ಸಿಂಗ್ ಚಡ್ಡಾ ಸಿನಿಮಾ ಹಾಲಿವುಡ್ ನ ಫಾರೆಸ್ಟ್ ಗಂಪ್ ಚಿತ್ರದ ರಿಮೇಕ್. ಇದಕ್ಕಿಂತ ಮಿಗಿಲಾಗಿ ಇದು ನಮ್ಮ ವರನಟ ಡಾ. ರಾಜ್ ಕುಮಾರ್ ಅವರ ನೆಚ್ಚಿನ ಚಿತ್ರ ಎಂದು ಯಾರಿಗೂ ತಿಳಿದಿರಲಿಲ್ಲ. ಇದರ ಕುರಿತು ಸ್ವತಃ ನಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಮಾಳವಿಕಾ ಅವಿನಾಶ್ ಅವರಿಗೆ ಹೇಳಿದ್ದರಂತೆ. ಈ ಕುರಿತು ಮಾಳವಿಕಾ ಅವರು ನೆನೆದು ತಮ್ಮ ಫೇಸ್ಬುಕ್ ಅಲ್ಲಿ ಪೋಸ್ಟ್ ಮಾಡಿದ್ದಾರೆ.

ಮಾಳವಿಕಾ ಅವಿನಾಶ್ ಅವರ ಪೋಸ್ಟ್ ನಲ್ಲಿ ಏನಿದೆ:
ಇನ್ನು ಪೋಸ್ಟ್​ನಲ್ಲಿ ನಾನು ಈ ಫಾರೆಸ್ಟ್ ಗಂಪ್ ಚಿತ್ರವನ್ನು ಕನಿಷ್ಠ ಎಂದರೂ 20 ಬಾರಿ ನೋಡಿದ್ದೇನೆ, ಪ್ರತಿ ಬಾರಿ ನೋಡಿದಾಗಲೂ ಕಣ್ಣೀರು ಬರುತ್ತದೆ. ಅಂತಹ ಅದ್ಭುತ ಚಿತ್ರ ಇದು ಎಂದು ಮಾಳವಿಕಾ ಹೇಳಿದ್ದಾರೆ. ಇನ್ನು ಯಾವುದೇ ಚಿತ್ರವನ್ನು ಅರ್ಥ ಮಾಡಿಕೊಳ್ಳಲು ಭಾಷೆ ಮುಖ್ಯವಲ್ಲ. ಭಾವನೆಗಳು ಬಹಳ ಅಗತ್ಯ. ಭಾವನೆಗಳಿಗೆ ಮಿತಿ ಇಲ್ಲ ಅದು ಸಾರ್ವತ್ರಿಕ. ಹಾಗಾಗಿಯೇ ರಾಜ್​ಕುಮಾರ್​ ಅಂತಹ ಮೇರು ನಟರಿಗೆ ಈ ಫಾರೆಸ್ಟ್ ಗಂಪ್ ಚಿತ್ರ ಇಷ್ಟವಾಗಿದ್ದು ಎಂದು ಬರೆದಿದ್ದಾರೆ.

ಇನ್ನು ಈ ಚಿತ್ರವನ್ನು ನೋಡಿದ ನನಗೆ ಭಗವದ್ಗೀತೆಯ ಕೆಲ ಸಾಲುಗಳು ನೆನಪಾಗಿದ್ದವು, ನೀವು ನಿಮ್ಮ ಕೆಲಸ ಮಾಡಿ ಫಲ ಫಲಾವನ್ನು ನನಗೆ ಬಿಡಿ ಎಂಬ ವಾಕ್ಯ ಈ ಚಿತ್ರದ ಮೆಸೇಜ್​ ಎನಿಸುತ್ತದೆ. ರಾಜ್​ಕುಮಾರ್ ಅವರಿಗೂ ಸಹ ಇದೆ ಮೆಸೇಜ್​ ಈ ಚಿತ್ರದಲ್ಲಿ ಕಾಣಿಸಿದೆ ಎಂದಿದ್ದಾರೆ. ಇನ್ನು ಇದೊಂದು ಅದ್ಬುತ ಚಿತ್ರವಾಗಿದ್ದು, ಯಾವುದೇ ಭಾಷೆಯ ಹಂಗಿಲ್ಲದೇ ನಾವು ಚಿತ್ರವನ್ನು ಅರ್ಥ ಮಾಡಿಕೊಳ್ಳಬಹುದು. ಅದರಲ್ಲೂ ಈಗಿನ ಕಾಲದಲ್ಲಿ ಈ ಚಿತ್ರಗಳ ರಿಮೇಕ್​ ಅಗತ್ಯವಿಲ್ಲ. ನಾವು ಸಬ್ ​ಟೈಟಲ್​ ಮೂಲಕ ಎಲ್ಲಾ ಭಾಷೆಯ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಮಾಳವಿಕಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಮೀರ್ ಖಾನ್ ಈ ಚಿತ್ರ ಹಾಳು ಮಾಡಿದ್ರಾ?
ಇನ್ನು ಚಿತ್ರದ ಟ್ರೈಲರ್ ವೀಕ್ಷಿಸಿರುವ ಜನರು ಇದರಲ್ಲಿ ಅಮೀರ್ ಖಾನ್ ಅವರ ಅಭಿನಯ ಟಾಮ್ ಹ್ಯಾಂಕ್ಸ್​ ಅಭಿನಯದ ಮುಂದೆ ಏನು ಇಲ್ಲ, ಕೇವಲ ಒಂದೇ ಒಂದು ರಿಯಾಕ್ಷನ್ ಇಟ್ಟುಕೊಂಡು ಆಕ್ಟ್ ಮಾಡಿದ್ದಾರೆ. ಇದು ಮೂಲ ಚಿತ್ರದ ಭಾವನೆಯನ್ನು ಹಾಳು ಮಾಡುತ್ತಿದ್ದು ಇದರಲ್ಲಿ ನಮಗೆ ಎಲ್ಲಿಯೂ ಭಗವದ್ಗೀತೆಯ ಸಾರ ಕಾಣಿಸುವುದು ಅನುಮಾನ ಎಂದು ನೆಟ್ಟಿಗರು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top