fbpx
ಸಮಾಚಾರ

ಮದುವೆ ಹೆಸರಲ್ಲಿ ವಂಚನೆಗೊಳಗಾಗಿದ್ದ `ಜೋಶ್’ ಸಿನಿಮಾ ನಟಿಗೆ ಕೊನೆಗೂ ಕೂಡಿಬಂತು ಕಂಕಣಭಾಗ್ಯ

ಜೋಶ್ ಸಿನಿಮಾ ಮೂಲಕ ಕನ್ನಡದಲ್ಲೂ ಕಾಣಿಸಿಕೊಂಡಿದ್ದ ದಕ್ಷಿಣ ಭಾರತದ ಖ್ಯಾತ ನಟಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮಲಯಾಳಂ, ತೆಲುಗು, ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ತಾರೆ ಪೂರ್ಣಾ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ.

ನಟಿ ಪೂರ್ಣ ಅವರ ನಿಜವಾದ ಹೆಸರು ಶಮ್ನಾ ಕಾಸಿಮ್. ಬಹುಭಾಷೆಯಲ್ಲಿ ಮಿಂಚಿರುವ ನಟಿ ಪೂರ್ಣ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಕಳೆದ ವರ್ಷ ಮದುವೆ ವಿಚಾರವಾಗಿ ಪೂರ್ಣಗೆ ವಂಚಿಸಿದ್ದರು. ಈ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತು. ಇದೀಗ ಶಾಮ್ನಾ ನಿಜವಾಗಿಯೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಈ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

 

 

`ನನ್ನ ಜೀವನದ ಮುಂದಿನ ಹಂತಕ್ಕೆ ಕಾಲಿಡುತ್ತಿದ್ದೇನೆ’ ಎಂದು ಸಂತಸದ ವಿಚಾರವನ್ನು ನಟಿ ಪೂರ್ಣ ಹಂಚಿಕೊಂಡಿದ್ದಾರೆ. ಜೊತೆಗೆ ಭಾವಿ ಪತಿಯನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಅಂದಹಾಗೆ ಪೂರ್ಣ ಮದುವೆಯಾಗುತ್ತಿರುವ ಹುಡುಗ ಶಾನಿದ್ ಆಸಿಫ್ ಅಲಿ.

ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಂಡಿರುವ ನಟಿ ಪೂರ್ಣ ನನ್ನ ಕುಟುಂಬದ ಆಶೀರ್ವಾದದ ಜೊತೆಗೆ ನಾನು ನನ್ನ ಜೀವನದ ಮುಂದಿನ ಹಂತಕ್ಕೆ ಹೆಜ್ಜೆ ಇಡುತ್ತಿದ್ದೇನೆ. ಇದು ಅಧಿಕೃತ ಎಂದು ಹೇಳಿದ್ದಾರೆ. ನೆಚ್ಚಿನ ನಟಿಯ ಹೊಸ ಅಧ್ಯಾಯಕ್ಕೆ ಅಭಿಮಾನಿಗಳು ಶುಭ ಕೋರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top