fbpx
ಸಮಾಚಾರ

ನನಗೆ ಒಂದು ಕೋಟಿ ಆಫರ್ ಕೊಟ್ಟರು ನಾನು ಮಾತ್ರ ಆ ಸ್ಥಳದಲ್ಲಿ ಹಾಡುವುದಿಲ್ಲ! ಕೇಕೆ ಈ ರೀತಿ ಹೇಳಿದ್ದು ಯಾವ ಸ್ಥಳ ಬಗ್ಗೆ ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಹಲವಾರು ಗಾಯಕರನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಕಳೆದ ಕೆಲವು ದಿನಗಳ ಹಿಂದೆ ಕೇರಳದಲ್ಲಿ ಗಾಯಕ ಎಡವ ಬಿಶೀರ್​ ಅವರು ವೇದಿಕೆಯಲ್ಲಿ ಹಾಡುತ್ತಿರುವಾಗಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆಯಿತು. ಇದರ ಬೆನ್ನಲೇ ಖ್ಯಾತ ಗಾಯಕ ಕೆಕೆ (ಕೃಷ್ಣಕುಮಾರ್​ ಕುನ್ನತ್​ ) ಅವರು ಕೂಡ ಹೃದಯಾಘಾತದಿಂದ ನಿಧನರಾದರು. ಇಷ್ಟೊಂದು ಖ್ಯಾತಿ ಗಳಿಸಿರುವ ಕೇಕೆ ಅವರು ನಮಗೆ ಒಂದು ಕೋಟಿ ಸಂಭಾವನೆ ಕೊಟ್ಟರು ಆ ಒಂದು ಸ್ಥಳದಲ್ಲಿ ಆಡುವುದಿಲ್ಲ ಎಂದು ಹೇಳಿದರು.

ಕೇಕೆ ಅವರಿಗೆ ಯಾವುದೇ ಮದುವೆ ಸಮಾರಂಭದಲ್ಲಿ ಹಾಡುವುದು ಇಷ್ಟವಿಲ್ಲ. ನಾವು ಹಲವಾರು ಸೆಲೆಬ್ರಿಟಿಗಳ ಮದುವೆ ಸಮಾರಂಭವನ್ನು ನೋಡಿದರೆ ಅದರಲ್ಲಿ ಖ್ಯಾತ ಗಾಯಕರು ಮನರಂಜನೆ ನೀಡುತ್ತಿರುತ್ತಾರೆ. ಇವರಿಗೆ ಕೋಟಿ ಕೋಟಿ ಸಂಭಾವನೆ ಕೂಡ ಸಿಗುತ್ತದೆ. ಆದರೆ ಇವೆಲ್ಲವನ್ನೂ ಕೆಕೆ ನಿರಾಕರಿಸಿದರು ಎಂದು ಸ್ವತಃ ಅವರೇ ತಿಳಿಸಿದ್ದಾರೆ.

2008 ರಲ್ಲಿ ಖಾಸಗಿ ಸುದ್ದಿ ಮಾದ್ಯಮದಲ್ಲಿ ನಡೆದ ಸಂಧರ್ಶನದಲ್ಲಿ “ನೀವು ಯಾವುದಾದರೂ ಆಫರ್​ ಅನ್ನು ತಿರಸ್ಕರಿಸಿದ್ದು ಇದೆಯೇ?’ ಎಂದು ನಿರೂಪಕರು ಕೇಳಿದ ಪ್ರೆಶ್ನೆಗೆ ಉತ್ತರಿಸಿದ್ದ ಕೆಕೆ ‘ಹೌದು, ಒಂದು ಕೋಟಿ ರೂಪಾಯಿ ಸಂಭಾವನೆ ನೀಡಿದರೂ ಕೂಡ ಮದುವೆ ಸಮಾರಂಭಗಳಲ್ಲಿ ಹಾಡಲು ನಾನು ಒಪ್ಪಿಕೊಳ್ಳುವುದಿಲ್ಲ’ ಎಂದು ಹೇಳಿದ್ದರು.

ಅನೇಕ ಗಾಯಕರು ಸಿನಿಮಾಗಳಲ್ಲಿ ಹೀರೋ ಆಗಿರೋದನ್ನು ಸಹ ನಾವು ಹಲವು ಬಾರಿ ನೋಡಿದ್ದೇವೆ. ಆದರೆ ಕೇಕೆ ಅವರಿಗೆ ಈ ರೀತಿಯ ಆಸೆಗಳು ಇರಲಿಲ್ಲ. ಇವರಿಗೆ ಸಿನಿಮಾದಲ್ಲಿ ನಟಿಸುವಂತೆ ಒಮ್ಮೆ ಆಫರ್​ ಬಂದಿತ್ತಂತೆ. ಆದರೆ ಕಡಿಮೆ ಹಣಕ್ಕಾಗಿ ನಾನು ನಟಿಸಲಾರೆ. ಹಾಗಾಗಿ ಅಂಥ ಆಫರ್​ ಅನ್ನು ನಾನು ತಿರಸ್ಕರಿಸಿದ್ದೆ’ ಎಂದು ಕೆಕೆ ಹೇಳಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top