fbpx
ಸಮಾಚಾರ

ಐಪಿಎಲ್ 2023 ಕ್ಕೂ ಮುಂಚೆ RCB ರಿಲೀಸ್ ಮಾಡಲು ಬಯಸುವ ಆಟಗಾರರು ಇವರೇ?

ಐಪಿಎಲ್ 2022 ಮುಗಿತು. ಗುಜರಾತ್ ತಂಡ ಕಪ್ ಗೆದ್ದಾಯ್ತು. ಪ್ರತಿ ಬಾರಿಯಂತೆ ಈ ಬಾರಿಯೂ ಆರ್ ಸಿ ಬಿ ಅಭಿಮಾನಿಗಳಿಗೆ ನಿರಾಸೆ ಆಯಿತು. ನೂತನ ನಾಯಕನೊಂದಿಗೆ ಕಣಕ್ಕಿಳಿದರು ಈ ಬಾರಿಯೂ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ಕೆಲವು ಬದಲಾವಣೆ ಯೊಂದಿಗೆ 2023 ಐಪಿಎಲ್ ನಲ್ಲಿ ಕಣಕ್ಕಿಳಿಯಲು ಆರ್ ಸಿ ಬಿ ಚಿಂತಿಸಿದೆ.

ನೂತನ ನಾಯಕನೊಂದಿಗೆ ಕಣಕ್ಕಿಳಿದ ಆರ್ ಸಿ ಬಿ ಕ್ವಾಲಿಫೈರ್-2 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತ ಕಾರಣ ಐಪಿಎಲ್ 2022 ಫೈನಲ್​ಗೇರಲು ವಿಫಲವಾಯಿತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಆರ್ ಸಿ ಬಿ ಸ್ವಲ್ಪ ಬಲಿಷ್ಠ ತಂಡವಾಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸುಧಾರಣೆ ಕಂಡಿದೆ. ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಮತ್ತೆ ಘರ್ಜಿಸಿದರೆ ಆರ್ ಸಿ ಬಿ ಅವರನ್ನು ಹಿಡಿಯಲು ಸಾಧ್ಯವಿಲ್ಲ. ಇನ್ನು ಬೌಲಿಂಗ್ ವಿಭಾಗದಲ್ಲಿ ಹಸರಂಗ, ಜೋಶ್ ಹ್ಯಾಜ್ಲೆವುಡ್ ಮತ್ತು ಹರ್ಷಲ್ ಪಟೇಲ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇವೆಲ್ಲದರ ನಡುವೆ ಮುಂದಿನ ಐಪಿಎಲ್ ನಲ್ಲಿ ಆರ್ ಸಿ ಬಿ ಯಾ ಕೆಲವು ಆಟಗಾರರನ್ನು ಕೈ ಬಿಡಲು ಆರ್ ಸಿ ಬಿ ಮ್ಯಾನೇಜ್ಮೆಂಟ್ ಚಿಂತಿಸಿದೆ.

ಐಪಿಎಲ್ 2023 ರಲ್ಲಿ ಆರ್ ಸಿ ಬಿ ಮ್ಯಾನೇಜ್ಮೆಂಟ್ ರಿಲೀಸ್ ಮಾಡಬಹುದಾದ ಕೆಲವು ಆಟಗಾರರ ಪಟ್ಟಿ ಇಲ್ಲಿದೆ:

ಶೆರ್ಫನ್ ರುಥರ್​​ಫಾರ್ಡ್: ಐಪಿಎಲ್ 2022 ಟೂರ್ನಿ ಆರಂಭದಲ್ಲಿ ಆರ್​ಸಿಬಿ ತಂಡಕ್ಕೆ ಗ್ಲೆನ್ ಮ್ಯಾಕ್ಸ್​ವೆಲ್ ಅಲಭ್ಯರಾಗಿದ್ದ ಕಾರಣ ವೆಸ್ಟ್ ಇಂಡೀಸ್ ಆಲ್ರೌಂಡರ್ ಶೆರ್ಫನ್ ರುಥರ್​​ಫಾರ್ಡ್ ಸ್ಥಾನ ಪಡೆದುಕೊಂಡಿದ್ದರು. ಆದರೆ, ಇವರು ಆಡಿದ ಮೂರು ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶ ನೀಡಿರಲಿಲ್ಲ. ಇವರು ಗಳಿಸಿದ್ದು ಕೇವಲ 33 ರನ್​ಗಳನ್ನಷ್ಟೆ. ಹೀಗಾಗಿ ಇವರನ್ನು ಕೈಬಿಡುವುದು ಬಹುತೇಕ ಖಚಿತ.

ಅನುಜ್ ರಾವತ್: ಆರ್ ಸಿ ಬಿ ಪರ ನಾಯಕ ಡುಪ್ಲೆಸ್ಸಿ ಜೊತೆ ಕಣಕ್ಕಿಳಿದ ಅನುಜ್ ರಾವತ್ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಈಗಾಗಿ ಇವರ ಬದಲು ವಿರಾಟ್ ಡುಪ್ಲೆಸ್ಸಿ ಜೊತೆ ಕಣಕ್ಕಿಳಿದ್ದಿದ್ದರು. ಇವರು ಮುಂಬೈ ಇಂಡಿಯನ್ಸ್ ವಿರುದ್ಧ 47 ಎಸೆತಗಳಲ್ಲಿ 66 ರನ್ ಗಳಿಸಿದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಘರ್ಜಿಸಿರಲಿಲ್ಲ. ಆದ್ದರಿಂದ ಇವರನ್ನು ಸಹ ಕೈ ಬಿಡುವ ಸಾಧ್ಯತೆ ಇದೆ.

ಸಿದ್ಧಾರ್ಥ್​​ ಕೌಲ್: ಇವರು ಸಿರಾಜ್ ಅವರ ಉಪಸ್ಥಿತಿಯಲ್ಲಿ ಒಂದು ಪಂದ್ಯವನ್ನು ಮಾತ್ರ ಆರ್ ಸಿ ಬಿ ಪರ ಆಡಿದರು. ಈ ಪಂದ್ಯದಲ್ಲಿ 4 ಓವರ್​ಗೆ 43 ರನ್ ನೀಡಿ ಒಂದು ವಿಕೆಟ್ ಕೂಡ ಕಬಳಿಸಿರಲಿಲ್ಲ. ಈಗಾಗಿ ಇವರನ್ನು ಸಹ ಕೈಬಿಡುವ ಸಾಧ್ಯತೆಗಳಿವೆ.

ಇವರನ್ನು ಹೊರೆತುಪಡಿಸಿ ಒಂದು ಪಂದ್ಯವನ್ನು ಆಡದೆ ಇರುವ ಜೇಸನ್ ಬೆಹ್ರೆನ್​​ಡಾರ್ಫ ಮತ್ತು ಬೌಲಿಂಗ್ ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಆಕಾಶ್ ಡೀಪ್, ಡೇವಿಡ್ ಮಿಲ್ಲೆ ಇವರನ್ನು ಕೈ ಬಿಡುವ ಎಲ್ಲಾ ಸಾಧ್ಯತೆಗಳಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top