fbpx
ಸಮಾಚಾರ

ಪಠ್ಯದಲ್ಲಿ ‘ಡಾ. ರಾಜ್‌’ ಕುರಿತ ಬರಹವನ್ನು ಪ್ರಕಟಿಸುವ ಅನುಮತಿ ವಾಪಸ್ ಪಡೆದ ಲೇಖಕ

ಬಲಪಂಥೀಯ ಲೇಖಕ ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ʼಕೇಸರೀಕರಣʼವನ್ನು ಮಾಡಲಾಗಿದೆ, ಕೇವಲ ಬ್ರಾಹ್ಮಣ ಲೇಖಕರನ್ನು, ಆರ್‌ಎಸ್‌ಎಸ್‌ ಅನ್ನು ವೈಭವೀಕರಿಸಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

ಪಠ್ಯ ಪುಸ್ತಕ ಮರು ಪರಿಷ್ಕರಣೆಯ ವಿರುದ್ಧ ಸಾಹಿತಿಗಳು ಆಕ್ರೋಶ ಮುಂದುವರಿಸಿದ್ದಾರೆ. ಇದೀಗ ಕನ್ನಡ ನಟ ಡಾ. ರಾಜ ಕುಮಾರ್‌ ಬಗ್ಗೆ ಬರೆದಿದ್ದ ಬರಹವನ್ನು ಲೇಖಕ ದೊಡ್ಡ ಹುಲ್ಲೂರು ರುಕ್ಕೋಜಿರಾವ್‌ ಪಠ್ಯದಿಂದ ವಾಪಸ್ ಪಡೆದಿದ್ದಾರೆ. ‘ವರನಟ ಡಾ.ರಾಜಕುಮಾರ್ ಬಗೆಗಿನ ಲೇಖನವನ್ನು ಆರನೇ ತರಗತಿಯ ಪಠ್ಯದಲ್ಲಿ ಸೇರಿಸಲು ನೀಡಿದ್ದ ಒಪ್ಪಿಗೆಯನ್ನು ಹಿಂಪಡೆದಿದ್ದೇನೆ’ ಎಂದು ಲೇಖಕ ದೊಡ್ಡ ಹುಲ್ಲೂರು ರುಕ್ಕೋಜಿರಾವ್‌ ಅವರು ಸಚಿವರಿಗೆ ಪತ್ರ ಬರೆದಿದ್ದಾರೆ.

‘ಈಗಿನ ಅಧ್ಯಕ್ಷ ಚಕ್ರತೀರ್ಥ ಅವರು ನಾಡಧ್ವಜವನ್ನು ಒಳ ಉಡುಪಿಗೆ ಹೋಲಿಸಿದ್ದಲ್ಲದೇ ಕುವೆಂಪು ಅವರನ್ನು ಕೀಳಾಗಿ ಕಂಡಿದ್ದಾರೆ. ಕನ್ನಡ ಭಾಷೆಯನ್ನೇ ತಮ್ಮ ಮೇಲೆ ಹೇರಲಾಗಿದೆ ಎಂದು ಕನ್ನಡ ವಿರೋಧಿ ಮಾತನಾಡಿದ್ದಾರೆ. ಕನ್ನಡ ದ್ರೋಹದ ಮಾತನಾಡಿರುವ ವ್ಯಕ್ತಿ ಪರಿಷ್ಕರಿಸಿದ ವ್ಯಕ್ತಿಯ ಪಠ್ಯದಲ್ಲಿ, ಅಪೂರ್ವ ಕನ್ನಡ ಪ್ರೇಮಿಯಾದ ರಾಜ ಕುಮಾರ್‌ ಅವರ ಬಗೆಗಿನ ಪಠ್ಯ ಸೇರಿಸುವುದು ರಾಜ್ ಅವರಿಗೆ ಅವಮಾನ ಮಾಡಿದಂತೆ. ಹೀಗಾಗಿ ಲೇಖನ ಬಳಸಬೇಡಿ’ ಎಂದು ಅವರು ಕೋರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top