fbpx
ಸಮಾಚಾರ

ತೆಲುಗು ಸಿನಿಮಾರಂಗಕ್ಕೆ ಕಾಲಿಡಲಿದ್ದಾರೆ ಕ್ರೇಜಿ ಸ್ಟಾರ್ ರವಿಚಂದ್ರನ್! ಮಹೇಶ್ ಬಾಬು ಅವರಿಗೆ ತಂದೆ ಆಗಿ ಆಕ್ಟ್ ಮಾಡಲಿದ್ದಾರಂತೆ?

ಕ್ರೇಜಿ ಸ್ಟಾರ್ ರವಿಚಂದ್ರನ್ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರೇಮಲೋಕ ಸಿನಿಮಾದ ಮೂಲಕ ಸಂಚಲನ ಸೃಷ್ಟಿಸಿದವರು. ನಾಯಕನಾಗಿ ಸೈ ಎನಿಸಿಕೊಂಡಿದ್ದಲ್ಲದೆ ತಂದೆಯಾಗಿ ಕೂಡ ಭೇಷ್ ಎನಿಸಿಕೊಂಡಿದ್ದಾರೆ. ಅದರಲ್ಲೂ ಮಾಣಿಕ್ಯ ಸಿನಿಮಾದಲ್ಲಿ ಸುದೀಪ್ ತಂದೆ ಪಾತ್ರ ಮಾಡಿ ಜನ ಮನ ಗೆದ್ದಿದ್ದಾರೆ. ಈಗಾಗಿ ಇವರು ತೆಲುಗು ಸ್ಟಾರ್ ನಟರ ತಂದೆಯಾಗಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ರವಿಚಂದ್ರನ್ ಅವರ ಎದುರು ಈಗ ಸಾಲು ಸಾಲು ಸಿನಿಮಾಗಳಿವೆ. ಇದಲ್ಲದೆ ಅವರು ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಷೂ ಅಲ್ಲಿ ಜಡ್ಜ್ ಆಗಿ ಕೂಡ ಬ್ಯುಸಿಯಾಗಿದ್ದಾರೆ. ಇದೆಲ್ಲದರ ನಡುವೆ ಇವರು ತೆಲುಗು ಸಿನಿಮಾದ ಸ್ಟಾರ್ ನಟರ ಜೊತೆ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಮಹೇಶ್ ಬಾಬು ಅಭಿನಯದ ‘ಸರ್ಕಾರು ವಾರಿ ಪಾಟ’ ಸಿನಿಮಾ ಹಿಟ್ ಆದ ಬಳಿಕ ತಮ್ಮ ಮುಂದಿನ ಸಿನಿಮಾದ ಬಗ್ಗೆ ಬ್ಯುಸಿ ಆಗಿದ್ದರು. ತ್ರಿವಿಕ್ರಮ್ ಅವರ ನಿರ್ದೇಶನದಲ್ಲಿ ಮಹೇಶ್ ಬಾಬು ಅವರ ಮುಂದಿನ ಸಿನಿಮಾ ಸೆಟ್ ಏರುವ ಸಾಧ್ಯತೆಗಳಿವೆ. ಇನ್ನು ಈ ಸಿನಿಮಾದಲ್ಲಿ ರವಿಚಂದ್ರನ್ ಅವರ ಹೆಸರು ಕೇಳಿ ಬರುತ್ತಿದ್ದು, ಇದರಲ್ಲಿ ರವಿಚಂದ್ರನ್ ಅವರು ಮಹೇಶ್ ಬಾಬು ಅವರ ತಂದೆಯಾಗಿ ನಟಿಸುತ್ತಿದ್ದಾರೆ.

ಮಹೇಶ್ ಬಾಬು ನಟನೆಯ ಈ ಸಿನಿಮಾದಲ್ಲಿ ಮಾಸ್ ಜೊತೆ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಹ ಇದೆಯಂತೆ. ಈ ಹಿಂದೆ ಈ ಸಿನಿಮಾಕ್ಕೆ ಬಾಲಿವುಡ್ ಸ್ಟಾರ್ ನಟ ಅನಿಲ್ ಕಪೂರ್ ಮಹೇಶ್ ಬಾಬು ಅವರ ತಂದೆಯ ಪಾತ್ರವನ್ನು ಮಾಡಲಿದ್ದಾರಂತೆ ಎನ್ನಲಾಗ್ತಿತ್ತು. ಆದರೆ ಅದು ಕನ್ಫರ್ಮ್ ಆಗಿಲ್ಲ. ಇದೀಗ ಈ ಪಾತ್ರಕ್ಕೆ ವಿ. ರವಿಚಂದ್ರನ್ ಅವರ ಹೆಸರು ಕೇಳಿ ಬರುತ್ತಿದೆ. ಈಗಾಗಿ ಈ ಸಿನಿಮಾದಲ್ಲಿ ರವಿಚಂದ್ರನ್ ಅವರು ನಟಿಸುತ್ತಾರೋ ಇಲ್ಲವೋ ಎಂದು ಕಾದು ನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top