fbpx
ಸಮಾಚಾರ

ನಿರ್ದೇಶಕ ಯೋಗರಾಜ್ ಭಟ್ ಮಾವ, ನಟ ಸತ್ಯ ಉಮ್ಮತ್ತಾಲ್ ವಿಧಿವಶ

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರ ಮಾವ ಸತ್ಯ ಉಮ್ಮತ್ತಾಲ್ ಅವರು ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಅವರು ತೀವ್ರ ಹೃದಯಾಘಾತದಿಂದ ಇಂದು ಕೊನೆಯುಸಿರೆಳೆದಿದ್ದಾರೆ.

ಯೋಗರಾಜ್ ಭಟ್ ಅವರ ಪತ್ನಿಯ ತಂದೆಯಾಗಿರುವ ಸತ್ಯ ಅವರ ಪಾರ್ಥಿವ ಶರೀರವನ್ನು ಸದ್ಯ ಭಟ್ಟರ ಮನೆಯಲ್ಲಿ ಇರಿಸಲಾಗಿದ್ದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಸಂಜೆ ಬೆಂಗಳೂರಿನ ರುದ್ರಭೂಮಿಯಲ್ಲಿ ಅವರ ಪಾರ್ಥಿವ ಶರೀರಕ್ಕೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬ ತಿಳಿಸಿದೆ.

ಸತ್ಯ ಉಮ್ಮತ್ತಾಲ್ ಅವರು ಕನ್ನಡದ ಲೈಫು ಇಷ್ಟೇನೆ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಆನಂತರ ಸುಮಾರು 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪೋಷಕ ನಟರಾಗಿ ನಟಿಸಿದ್ದಾರೆ ಶಿವರಾಜಕುಮಾರ್ ದುನಿಯಾ ವಿಜಯ್ ಸೇರಿದಂತೆ ಅನೇಕ ಹೆಸರಾಂತ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ

ಇವರು ಯೋಗರಾಜ್ ಭಟ್ ನಿರ್ದೇಶನ ನಿರ್ದೇಶನ ಮಾಡಿರುವ ಬಹುತೇಕ ಎಲ್ಲಾ ಸಿನಿಮಾಗಳಲ್ಲೂ ನಟಿಸಿದ್ದರು ಜಯಮ್ಮನ ಮಗ ಕೆಂಡಸಂಪಿಗೆ ಕಡ್ಡಿಪುಡಿ ದನಕಾಯೋನು ಪ್ರೀತಿ ಗೀತಿ ಇತ್ಯಾದಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top