fbpx
cinema

ತಮ್ಮ ಮದುವೆ ಕುರಿತು ಇದ್ದ ವದಂತಿಯ ಬಗ್ಗೆ ಕೊನೆಗೂ ಸ್ಪಷ್ಟನೆ ನೀಡಿದ ಜೆಕೆ!

ಇತ್ತೀಚಿಗೆ ಕೆಲವು ದಿನಗಳಿಂದ ಸ್ಯಾಂಡಲ್ವುಡ್ ನಟ ಜೆಕೆ ಎಂದೇ ಪ್ರಖ್ಯಾತರಾಗಿರುವ ಜಯರಾಂ ಕಾರ್ತಿಕ್ ಅವರ ಕುರಿತು ಹಲವಾರು ಸುದ್ದಿಗಳು ಹರಿದಾಡುತ್ತಿದ್ದವು. ಇವರು ಫ್ಯಾಷನ್ ಡಿಸೈನರ್ ಅಪರ್ಣ ಸಮಂತಾ ಅವರೊಂದಿಗೆ ಮದುವೆ ಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ಇದರ ಕುರಿತು ಸ್ವತಃ ಜೆಕೆ ಅವರೇ ಸ್ಪಷ್ಟನೆ ನೀಡಿದ್ದಾರೆ.

ಸದ್ಯ ಜೆಕೆ ಹಿಂದಿ ಸಿನಿಮಾಗಳನ್ನು ಮಾಡಲು ಸಜ್ಜಾಗಿದ್ದಾರೆ. ಇದಲ್ಲದೆ ಇವರ ಕೈಯಲ್ಲಿ ಇನ್ನು ಹತ್ತು ಹಲವಾರು ಸಿನಿಮಾಗಳಿವೆ. ಇಂತಹ ಸಮಯದಲ್ಲಿ ವದಂತಿಗಳು ಎದ್ದು ಕಾಣುತ್ತಿದ್ದು ಇದು ಇವರ ಮನಸ್ಸನ್ನು ಬಹಳಷ್ಟು ಹದ ಗೆಡಿಸಿದೆ. ಇವರು ಫ್ಯಾಷನ್ ಡಿಸೈನರ್ ಅಪರ್ಣ ಸಮಂತಾ ಅವರೊಂದಿಗಿರುವ ಫೋಟೋವನ್ನು ಹಂಚಿಕೊಂಡ ಬಳಿಕ ಇವರಿಬ್ಬರು ಮದುವೆ ಯಾಗುತ್ತಿದ್ದಾರೆ ಎಂದು ಜನ ಮಾತನಾಡಿಕೊಳ್ಳಲು ಶುರು ಮಾಡಿದರು. ಇದೀಗ ಇವೆಲ್ಲ ವದಂತಿಗಳಿಗೆ ಜೆಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

ಈ ಸುದ್ದಿ ಸುಳ್ಳು, ನನಗೆ ಅದೆಷ್ಟು ಬಾರಿ ಮದುವೆ ಮಾಡಿಸುತ್ತಿರೋ ಗೊತ್ತಿಲ್ಲ. ಅಪರ್ಣ ಮತ್ತು ನಾನು ಒಳ್ಳೆಯ ಸ್ನೇಹಿತರಷ್ಟೇ, ನಮ್ಮ ಸಿನಿಮಾಗಿಂತ ನಮ್ಮ ವಯಕ್ತಿಕ ವಿಚಾರ ಬಗ್ಗೆನೇ ಸುದ್ದಿಯಾಗುತ್ತಿದೆ ನಮ್ಮಿಬ್ಬರ ನಡುವೆ ಮದುವೆಯ ವಿಚಾರ ಚರ್ಚೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top