fbpx
ಸಮಾಚಾರ

ನಾನೊಬ್ಬ ಹಿಂದೂ ಹೋರಾಟಗಾರ, ನನ್ನ ಪಠ್ಯವನ್ನು ಪಠ್ಯಪುಸ್ತಕದಲ್ಲಿ ಸೇರಿಸಿ: ಮಧುಗಿರಿ ಮೋದಿ ಹೆಸರಿನ ಪತ್ರ ವೈರಲ್

ಬಲಪಂಥೀಯ ಲೇಖಕ ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ʼಕೇಸರೀಕರಣʼವನ್ನು ಮಾಡಲಾಗಿದೆ, ಕೇವಲ ಬ್ರಾಹ್ಮಣ ಲೇಖಕರನ್ನು, ಆರ್‌ಎಸ್‌ಎಸ್‌ ಅನ್ನು ವೈಭವೀಕರಿಸಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಪಠ್ಯ ಪುಸ್ತಕ ಮರು ಪರಿಷ್ಕರಣೆಯ ವಿರುದ್ಧ ಸಾಹಿತಿಗಳು ಆಕ್ರೋಶ ಮುಂದುವರಿಸಿದ್ದಾರೆ. ಈ ಮದ್ಯೆ ವಿಚಿತ್ರ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

ಮಧುಗಿರಿ ಮೋದಿ ಎಂಬಾತನ ಹೆಸರಿನಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಅವರಿಗೆ ಬರೆದಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಈ ಪತ್ರದಲ್ಲಿ ಮಧುಗಿರಿ ಮೋದಿ ಎಂಬಾತ ತಾನು ಬರೆದಿರುವ ಪಠ್ಯವನ್ನು ಪಠ್ಯಪುಸ್ತಕದಲ್ಲಿ ಸೇರಿಸಬೇಕು ಎಂದು ಮನವಿ ಮಾಡಿಕೊಂಡಂತೆ ಬರೆಯಲಾಗಿದೆ.. ಈ ಪತ್ರ ಅಸಲಿಯೋ ನಕಲಿಯೋ ಎಂಬುದು ತಿಳಿದುಬಂದಿಲ್ಲ ಆದರೆ ಈ ಪಾತ್ರವಂತೂ ಎಲ್ಲಾ ಕಡೆ ವೈರಲ್ ಆಗ್ತಿದೆ.

9 ಜನ ಬ್ರಾಹ್ಮಣ ಕವಿಗಳ ಪಾಠ ಮಕ್ಕಳಿಗೆ ಕೊಡುತ್ತಿದ್ದೀರಿ. ನಾನು ಹಿಂದೂ ಹೋರಾಟಗಾರ, ನನ್ನ ಪಠ್ಯವನ್ನು ಸೇರಿಸಲು ರೋಹಿತ್​ ಚಕ್ರತೀರ್ಥಗೆ ಸಲಹೆ ನೀಡಿ ಎಂದು ಹಿಂದೂ ಹೋರಾಟಗಾರ ಮಧುಗಿರಿ ಮೋದಿ ಹೆಸರಿನಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಅವರಿಗೆ ಪತ್ರ ಬರೆಯಲಾಗಿದೆ. ಯೋಗಿ ಆದಿತ್ಯನಾಥ್ ಉತ್ತರಪ್ರದೇಶದ ಸಿಎಂ ಆಗಲೂ ನಾನು ಕಾರಣ. ದೇಶವ್ಯಾಪಿ ಹಿಂದುತ್ವ ಹರಡಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top