fbpx
ಸಮಾಚಾರ

ಎರಡು ವರ್ಷಗಳಿಂದ ಯಾರಿಂದಲೂ ಬಗೆಹರಿಸಲು ಸಾಧ್ಯವಾಗದೇ ಇದ್ದ ಮಂಡ್ಯ ವ್ಯಕ್ತಿಯ ಸಮಸ್ಯೆಯನ್ನು ಕೇವಲ ಎರಡೇ ದಿನದಲ್ಲಿ ಬಗೆಹರಿಸದ ಮೋದಿ!

ಮಂಡ್ಯದ ವ್ಯಕ್ತಿ ಅನುಭವಿಸುತ್ತಿದ್ದ ಸಮಸ್ಯೆಯ ಬಗ್ಗೆ ಮಂಡ್ಯ ರೈತ ಮುಖಂಡ ಮಧು ಚಂದನ್ ಅವರು ಮಾಡಿದ ಟ್ವೀಟ್ ಗೆ ಸ್ಪಂದಿಸಿದ ಪ್ರಧಾನಿ ಮೋದಿ ಎರಡು ವರ್ಷಗಳಲ್ಲಿ ಯಾರು ಬಗೆಹರಿಸದ ಸಮಸ್ಯೆಯನ್ನು ಕೇವಲ ಎರಡೇ ದಿನದಲ್ಲಿ ಬಗೆಹರಿಸಿ ಕೊಟ್ಟಿದ್ದಾರೆ.

ಮಂಡ್ಯದ ತಂಡಸನಹಳ್ಳಿ ಗ್ರಾಮದ ನಿವಾಸಿಯಾಗಿದ್ದ ನೂತನ್ ಹುಟ್ಟುವಾಗಲೇ ಅಂಗವಿಕಲತೆ ಮತ್ತು ವಿಚಿತ್ರ ಚರ್ಮದಿಂದ ಬಳಲುತ್ತಿದ್ದರು. ಇವರ ಭಾವಚಿತ್ರದ ಆಧಾರದ ಮೇಲೆ ಇವರಿಗೆ ಆಧಾರ್ ಕಾರ್ಡ್ ಮಾಡಿಕೊಡಲಾಗಿತ್ತು. ಆದರೆ ಕೆಲವು ವರ್ಷಗಳಿಂದ ಇವರಿಗೆ ಬರುತ್ತಿದ್ದ ಪಿಂಚಣಿ ಮತ್ತು ಸರ್ಕಾರಿ ಸೇವೆಗಳು ನಿಂತು ಹೋಗಿತ್ತು. ಇದರ ಕುರಿತು ವಿಚಾರಿಸಿದಾಗ ಇವರ ಆಧಾರ್ ಕಾರ್ಡ್ ಬ್ಲಾಕ್ ಆಗಿದ್ದು ಅದನ್ನು ಶೀಘ್ರವೇ ಅಪ್ಡೇಟ್ ಮಾಡಿಸಬೇಕೆಂದು ಅಧಿಕಾರಿಗಳು ಹೇಳಿದರು. ಈಗಾಗಿ ತಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಲು ಕಚೇರಿಗೆ ತೆರಳಿದಾಗ ನಿಮ್ಮ ಥಂಬ್ ಇಂಪ್ರೆಷನ್ ತೆಗೆದುಕೊಳ್ಳುತ್ತಿಲ್ಲ ಆದ್ದರಿಂದ ಅಪ್ಡೇಟ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ವಾಪಸ್ ಕಳುಹಿಸಿದರು.

ನೂತನ್ ವಿಚಿತ್ರ ಚರ್ಮ ರೋಗದಿಂದ ಬಳಲುತ್ತಿರುವ ಕಾರಣ ಇವರ ಥಂಬ್ ಇಂಪ್ರೆಷನ್ ಹಾಗು ಕಣ್ಣಿನ ಗುರುತನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಇವರ ಸಮಸ್ಯೆಯನ್ನು ಬಗೆಹರಿಸಲು ಹಲವಾರು ಜನಪ್ರತಿನಿದಿಗಳು ಹಾಗು ಅಧಿಕಾರಿಗಳಿಗೆ ಸುಮಾರು ಎರಡು ವರ್ಷಗಳಿಂದ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನ ವಾಗಿರಲಿಲ್ಲ.

ಮಂಡ್ಯ ರೈತ ಮುಖಂಡ ಮಧುಚಂದನ್ ನೂತನ್ ಫೋಟೊವನ್ನು ಹಾಕಿ, ಇವರಿಗೆ ಚರ್ಮ ರೋಗವಿದ್ದು ಇವರ ಆಧಾರ್ ಕಾರ್ಡ್ ಗೆ ಬೆರಳಚ್ಚು ಆಗುತ್ತಿಲ್ಲ. ಇದರಿಂದ ಇವರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇವರ ಆಧಾರ್ ಕಾರ್ಡ್ ಅನ್ನು ಹೇಗೆ ಸರಿಪಡಿಸಬೇಕೆಂದು ಪ್ರಧಾನಿ ಮೋದಿ ಅವರಿಗೆ ಟ್ವೀಟ್ ಮಾಡಿದರು.

ಇವರ ಟ್ವೀಟ್ ಗೆ ಸಕರಾತ್ಮಕವಾಗಿ ಸ್ಪಂದಿಸಿದ ಪ್ರಧಾನಿ ಸಚಿವಾಲಯದ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಳಿಕ ಅಧಿಕಾರಿಗಳು ನೂತನ್‌ಗೆ ಕರೆ ಮಾಡಿ, ಸಮಸ್ಯೆಗಳನ್ನು ಆಲಿಸಿ ಅವರಿಗೆ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿ ಅವರ ಮನೆಗೆ 2 ದಿನದಲ್ಲಿ ಕಳುಹಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top