fbpx
ಸಮಾಚಾರ

“ಜನಿವಾರ ದೀಕ್ಷೆ ನಿರಾಕರಿಸಿ ಹೊರಗೆ ಬಂದ ಸತ್ಯ ಮಕ್ಕಳಿಗೆ ತಿಳಿಸಬೇಕು” ಪಠ್ಯಪುಸ್ತಕ ವಿವಾದದ ಬಗ್ಗೆ ಸಿದ್ದಗಂಗಾ ಶ್ರೀ ಕಿಡಿ

ಬಲಪಂಥೀಯ ಲೇಖಕ ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ʼಕೇಸರೀಕರಣʼವನ್ನು ಮಾಡಲಾಗಿದೆ, ಕೇವಲ ಬ್ರಾಹ್ಮಣ ಲೇಖಕರನ್ನು, ಆರ್‌ಎಸ್‌ಎಸ್‌ ಅನ್ನು ವೈಭವೀಕರಿಸಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಇದೀಗ ವಿವಾದದ ಕುರಿತು ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಪಠ್ಯ ಪುಸ್ತಕದ ವಿಷಯ ಈಗಾಗಲೇ ಬಹಳಷ್ಟು ತಿರುವು ಪಡೆದುಕೊಳ್ಳುತ್ತಿದೆ. ಯಾವುದೇ ಕಾರಣದಿಂದ ಇಂತಹ ವಾತಾವರಣ ಸೃಷ್ಟಿ ಆಗಬಾರದು. ಮಕ್ಕಳಿಗೆ ಏನೇ ವಿಷಯ ಭೋದನೆ ಮಾಡಿದರೆ ನೈತಿಕ ಶಿಕ್ಷಣದ ಅತ್ಯಂತ ಅಗತ್ಯ ಬೇಕಾಗಿದೆ. ಪಠ್ಯ ಪುಸ್ತಕದಲ್ಲಿ ನೈತಿಕ ಕೊರತೆ ಹೆಚ್ಚು ಕಾಣ್ತಾ ಇದೆ. ಮೂಲ ವಿಚಾರವನ್ನು ತಿದ್ದದೆ ವಾಸ್ತವವಾಗಿ ಕೊಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಜನಿವಾರ ದೀಕ್ಷೆಯನ್ನು ಬಸವಣ್ಣನವರು ನಿರಾಕರಿಸಿ, ಹೊರಗೆ ಬಂದಿದ್ದು ಸತ್ಯ. ಆ ವಾಸ್ತವ ವಿಚಾರವನ್ನು ಇಂದಿನ ಮಕ್ಕಳಿಗೆ ತಿಳಿಸುವ ದೃಷ್ಠಿಯಿಂದ ಪ್ರಕಟಗೊಳಿಸುವುದು ಒಳ್ಳೆಯದು. ಮುಖ್ಯಮಂತ್ರಿಗಳು ಹೇಳಿದ್ದಾರೆ, ಶಿಕ್ಷಣ ಸಚಿವರು ವರದಿ ಕೊಟ್ಟ ನಂತರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ವೀರಶೈವ ಪಂಥ ಸ್ಥಾಪನೆ ಬಸವ ಧರ್ಮ ವಿಚಾರವಾಗಿ ಗೊಂದಲ ಇದೆ. ಬಸವಣ್ಣ ಒಬ್ಬ ಮಾನವತವಾದಿ. ಮಾನವ ಬದುಕಿಗೆ ಕೊಟ್ಟಿರುವುದು ಬಹಳ ಮುಖ್ಯ ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top