fbpx
ಸಮಾಚಾರ

ಚಕ್ರತೀರ್ಥ ಸಮಿತಿಯ ಮತ್ತೊಂದು ಎಡವಟ್ಟು: 3 ಮತ್ತು 4ನೇ ತರಗತಿ ಪುಸ್ತಕಗಳಲ್ಲಿ ಒಂದೇ ಪದ್ಯ!

ಬಲಪಂಥೀಯ ಲೇಖಕ ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ʼಕೇಸರೀಕರಣʼವನ್ನು ಮಾಡಲಾಗಿದೆ, ಕೇವಲ ಬ್ರಾಹ್ಮಣ ಲೇಖಕರನ್ನು, ಆರ್‌ಎಸ್‌ಎಸ್‌ ಅನ್ನು ವೈಭವೀಕರಿಸಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಪಠ್ಯ ಪುಸ್ತಕ ಮರು ಪರಿಷ್ಕರಣೆಯ ವಿರುದ್ಧ ಸಾಹಿತಿಗಳು ಆಕ್ರೋಶ ಮುಂದುವರಿಸಿದ್ದಾರೆ. ಈ ಮದ್ಯೆ ರೋಹಿತ್ ಚಕ್ರತೀರ್ಥ ಸಮಿತಿಯಿಂದ ಮತ್ತೊಂದು ಯಡವಟ್ಟು ಬಯಲಾಗಿದೆ.

3 ಮತ್ತು 4ನೇ ತರಗತಿ ಪುಸ್ತಕಗಳಲ್ಲಿ ಒಂದೇ ಪದ್ಯವನ್ನು ಸೇರ್ಪಡೆಗೊಳಿಸಿದ್ದು, ದಿನಕ್ಕೊಂದು ಯಡವಟ್ಟು ಬಹಿರಂಗವಾಗುತ್ತಿವೆ. ಬಿ.ಎಂ ಶರ್ಮಾರವರು ‘ಬಾವಿಯಲ್ಲಿ ಚಂದ್ರ’ ಎಂಬ ಪದ್ಯವನ್ನು ಎರಡು ತರಗತಿಗಳಲ್ಲಿ ಸೇರಿಸಿ ಸಮಿತಿ ಎಡವಟ್ಟು ಮಾಡಿದೆ. ಆ ಮೂಲಕ ಮಕ್ಕಳು 3 ಮತ್ತು 4 ನೇ ಎರಡೂ ತರಗತಿಗಳಲ್ಲಿಯೂ ಒಂದೇ ಪದ್ಯ ಕಲಿಯಬೇಕಾದ ದುಸ್ಥಿತಿ ಎದುರಾಗಿದೆ.

‘ಬಾವಿಯಲ್ಲಿ ಚಂದ್ರ’ ಮಕ್ಕಳ ಪದ್ಯವನ್ನು ಹಿಂದಿನ ಬರಗೂರು ರಾಮಚಂದ್ರಪ್ಪನವರ ಸಮಿತಿಯು 3 ನೇ ತರಗತಿ ನಲಿಕಲಿ ಕನ್ನಡ ಪಠ್ಯದಲ್ಲಿ ಸೇರಿಸಿತ್ತು. ನೂತನ ರೋಹಿತ್ ಚಕ್ರತೀರ್ಥ ಸಮಿತಿಯು 3ನೇ ತರಗತಿಯ ಪಠ್ಯದಲ್ಲಿ ಅದನ್ನು ಹಾಗೆ ಉಳಿಸಿಕೊಂಡಿದ್ದಲ್ಲದೆ, 4ನೇ ತರಗತಿಯ ಸವಿಕನ್ನಡ ಪುಸ್ತಕದಲ್ಲಿಯೂ ಅದೇ ಪದ್ಯವನ್ನು ಸೇರಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top