fbpx
ಸಮಾಚಾರ

ನಟ ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯಸ್ಮರಣೆ : ಪುತ್ಥಳಿ ಅನಾವರಣ

ಕನ್ನಡ ಚಿತ್ರರಂಗ ಕಂಡ ಅದ್ಭುತ ನಟರಲ್ಲಿ ಸಂಚಾರಿ ವಿಜಯ್ ಕೂಡ ಒಬ್ಬರು. ಆದರೆ ಆ ಬಹಳ ಬೇಗ ಆ ನಾಯಕನನ್ನ ಕಳೆದುಕೊಂಡು ಸಿನಿರಂಗ ಬಡವವಾಯಿತು. ಇದೀಗ ಅವರ ಮೊದಲ ವರ್ಷದ ಪುಣ್ಯತಿಥಿ ಹತ್ತಿರವಿದ್ದು, ಅವರ ಕುಟುಂಬಸ್ಥರು ಒಳ್ಳೆಯ ಕಾರ್ಯವನ್ನು ಮಾಡಿದ್ದಾರೆ.

ಮೊದಲ ವರ್ಷದ ಪುಣ್ಯಸ್ಮರಣೆಯ ದಿನದಂದು ವಿಜಯ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಲಾಗಿದೆ. ವಿಜಯ್ ಸಹೋದರರಾದ ಬಿ.ವೀರೂಪಾಕ್ಷ ಮತ್ತು ಸಿದ್ದೇಶಕುಮಾರ್ ಸಹೋದರನ ಸುಂದರ ಮೂರ್ತಿಯನ್ನು ಅರ್ಥಗರ್ಭಿತವಾಗಿ ತಯಾರಿಸಿದ್ದು, ಇಂದು ಆ ಪುತ್ಥಳಿ ಪಂಚನಹಳ್ಳಿಯ ವಿಜಯ್ ಸಮಾಧಿ ಸ್ಥಳದಲ್ಲಿ ಅನಾವರಣಗೊಂಡಿದೆ. ವಿಜಯ್ ಅವರ ಪ್ರಥಮ ಪುಣ್ಯಸ್ಮರಣೆಯಲ್ಲಿ ನಿರ್ದೇಶಕ ಮಂಸೋರೆ, ನಿರ್ದೇಶಕ ವೀರೂ ಮಲ್ಲಣ್ಣ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

ಜೂನ್ 12, 2021 ರಂದು ಬೆಂಗಳೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಂಚಾರಿ ವಿಜಯ್ ಜೂನ್ 15 ರಂದು ಸಾವನ್ನಪ್ಪಿದರು. ಚಿಕ್ಕಮಗಳೂರಿನ ಹುಟ್ಟೂರಾದ ಪಂಚನಹಳ್ಳಿಯಲ್ಲಿ ಸಂಚಾರಿ ವಿಜಯ್ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top