fbpx
ಸಮಾಚಾರ

ತನ್ನನ್ನು ತಾನೇ ಮದುವೆಯಾಗುತ್ತಿರುವ ಯುವತಿಗೆ ಸಂಕಷ್ಟ: ಯುವತಿ ವಿರುದ್ಧ ಸಿಡಿದ ಬಿಜೆಪಿ ನಾಯಕಿ

ತನ್ನನ್ನು ತಾನೇ ಮದುವೆಯಾಗುತ್ತೇನೆ ಎಂದು ಘೋಷಿಸಿ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಗುಜರಾತ್ ನ ಕ್ಷಮಾ ಬಿಂದು ಮದುವೆಗೆ ಇದೀಗ ಅಡ್ಡಿ ಎದುರಾಗಿದೆ. ವಡೋದರಾದ ಬಿಜೆಪಿ ನಗರ ಘಟಕದ ಉಪ ಮುಖ್ಯಸ್ಥೆ ಸುನೀತಾ ಶುಕ್ಲಾ ಅವರು ಕ್ಷಮಾ ಬಿಂದು ತನ್ನನ್ನು ಮದುವೆಯಾಗುವ ನಿರ್ಧಾರಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

24 ವರ್ಷದ ಕ್ಷಮಾ ಜೂನ್ 11 ರಂದು ಗೋತ್ರಿಯ ದೇವಸ್ಥಾನದಲ್ಲಿ ಐದು ವ್ರತಗಳನ್ನು ಮಾಡುವ ಮೂಲಕ ವಿವಾಹ ಮಾಡಿಕೊಳ್ಳುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಳು. ದೇವಸ್ಥಾನದಲ್ಲಿ ಮದುವೆ ಆಗುತ್ತಿರುವ ವಿಚಾರಕ್ಕೆ ಬಿಜೆಪಿ ನಗರ ಘಟಕದ ಉಪ ಮುಖ್ಯಸ್ಥೆ ಸುನೀತಾ ಶುಕ್ಲಾ ತೀವ್ರವಾಗಿ ವಿರೋಧ ವ್ಯಕ್ತಪಡಿದ್ದಾರೆ.

 

 

ಭಾರತೀಯ ಜನತಾ ಪಕ್ಷದ (ಬಿಜೆಪಿ) ನಗರ ಘಟಕದ ಉಪ ಮುಖ್ಯಸ್ಥೆ ಸುನೀತಾ ಶುಕ್ಲಾ, “‘ದೇವಸ್ಥಾನದಲ್ಲಿ ಮದುವೆಗೆ ನಾನು ವಿರೋಧಿ, ಯಾವುದೇ ದೇವಸ್ಥಾನದಲ್ಲಿ ತನ್ನನ್ನು ತಾನೇ ಮದುವೆಯಾಗಲು ಬಿಡುವುದಿಲ್ಲ. ಇಂತಹ ವಿವಾಹಗಳು ಹಿಂದೂ ಧರ್ಮಕ್ಕೆ ವಿರುದ್ಧವಾಗಿವೆ. ಇದರಿಂದ ಹಿಂದೂಗಳ ಜನಸಂಖ್ಯೆ ಕಡಿಮೆಯಾಗುತ್ತದೆ. ಧರ್ಮಕ್ಕೆ ವಿರುದ್ಧವಾಗಿ ಏನಾದರೂ ನಡೆದರೆ ಯಾವುದೇ ಕಾನೂನು ಕೆಲಸ ಮಾಡುವುದಿಲ್ಲ. ಬಿಂದು ಮಾನಸಿಕ ಅಸ್ವಸ್ಥ’ ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top