fbpx
ಸಮಾಚಾರ

ರಸ್ತೆಗೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಂತಕ ‘ಗೋಡ್ಸೆ’ ಹೆಸರು: ವ್ಯಾಪಕ ಖಂಡನೆ

ಹಿಂದೆಲ್ಲಾ ಶೈಕ್ಷಣಿಕ ಸಾಧನೆ ವಿದ್ಯಾಭ್ಯಾಸಗಳ ವಿಚಾರವಾಗಿ ಭೇಷ್ ಎನಿಸಿಕೊಳ್ಳುತ್ತಿದ್ದ ಉಡುಪಿ ಜಿಲ್ಲೆ ಇತ್ತೀಚಿನ ದಿನಗಳಲ್ಲಿ ಬರೀ ವಿವಾದಗಳಿಗೆ ಮಾತ್ರ ಸೀಮಿತವಾಗಿದೆಯಾ ಎಂಬ ಸಂಶಯ ನಮ್ಮಲ್ಲಿ ಮೂಡುತ್ತದೆ.. ಏಕೆಂದರೆ ಉಡುಪಿಯಲ್ಲಿ ಇತ್ತೀಚಿಗೆ ನಡೆಯುತ್ತಿರುವ ಘಟನೆಗಳೇ ಇದಕ್ಕೆ ಸಾಕ್ಷಿ ಎನ್ನುವಂತಿದೆ. ಹಿಜಾಬ್‌, ಮುಸ್ಲಿಮರ ವ್ಯಾಪಾರಕ್ಕೆ ವಿರೋಧ ರೀತಿಯ ಮೊದಲಾದ ಸಂಗತಿಗಳಿಂದ ಉಡುಪಿ ಜಿಲ್ಲೆ ಸುದ್ದಿ ಮಾಡುತ್ತಿದೆ. ಈ ನಡುವೆ ಮತ್ತೊಂದು ವಿವಾದ ಉಡುಪಿಯಿಂದ ಮುನ್ನೆಲೆಗೆ ಬಂದಿದೆ.

ಉಡುಪಿ ಜಿಲ್ಲೆ, ಕಾರ್ಕಳ ತಾಲ್ಲೂಕಿನ ಬೋಳ ಗ್ರಾಮ ಪಂಚಾಯಿತಿಗೆ ಸೇರಿದ ರಸ್ತೆಯೊಂದಕ್ಕೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಹತ್ಯೆ ಮಾಡಿದ ‘ನಾಥೂರಾಮ್‌ ಗೋಡ್ಸೆ’ ಹೆಸರನ್ನು ಇಡಲಾಗಿದೆ. ‌ಇದಕ್ಕೆ ಸಂಬಂಧಿಸಿದ ಫೋಟೋ ವೈರಲ್ ಆಗುತ್ತಿದ್ದು “ಬೋಳ ಗ್ರಾಮ ಪಂಚಾಯತ್‌- ಪಡುಗಿರಿ ನಾಥೂರಾಮ್‌ ಗೋಡ್ಸೆ ರಸ್ತೆ” ಎಂದು ಬರೆಯಲಾಗಿದೆ.

ಗಾಂಧಿ ಹಂತಕನ ಹೆಸರನ್ನು ರಸ್ತೆಗೆ ಇಟ್ಟಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಅಂದಹಾಗೆ ಈ ಘಟನೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್‌ಕುಮಾರ್‌ ಪ್ರತಿನಿಧಿಸುವ ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ನಡೆದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top