fbpx
ಸಮಾಚಾರ

ಪ್ರಶಾಂತ್ ನೀಲ್- ಜೂನಿಯರ್ NTR ಶಿವಣ್ಣನ ಸಿನಿಮಾ ಟೈಟಲ್ ಫಿಕ್ಸ್?

ಕೆಜಿಎಫ್ ಸರಣಿಯ ಯಶಸ್ಸಿನ ಉತ್ತುಂಗದಲ್ಲಿರುವ ನಿರ್ದೇಶಕ ಪ್ರಶಾಂತ್ ನೀಲ್ ಅವರು ಸದ್ಯ ಪ್ರಭಾಸ್ ನಟನೆಯಲ್ಲಿ ಸಾಲಾರ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.. ಈ ಚಿತ್ರ ಮುಗಿದ ಮೇಲೆ ಪ್ರಶಾಂತ್ ನೀಲ್ ತೆಲುಗು ಸ್ಟಾರ್ ಜೂನಿಯರ್ ಎನ್ಟಿಆರ್ ರೊಂದಿಗೆ ಸಿನಿಮಾ ಮಾಡಲಿದ್ದಾರೆ. ಇದು ಜೂನಿಯರ್ ಎನ್ಟಿಆರ್ ಅವರ 31 ನೇ ಚಿತ್ರವಾಗಲಿದೆ.

ಇತ್ತೀಚೆಗಷ್ಟೇ ಜ್ಯೂ.ಎನ್‌ಟಿಆರ್ ರಗಡ್ ಪೋಸ್ಟರ್ ರಿಲೀಸ್ ಮಾಡಿ, ಬರ್ತಡೇ ವಿಶ್ ಮಾಡಿದ್ದರು. ಈಗ ಜ್ಯೂ.ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ಚಿತ್ರಕ್ಕೆ ಟೈಟಲ್ ಕೂಡ ಫಿಕ್ಸ್ ಆಗಿದೆಯಂತೆ. ಹೌದು, ಈ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟಿಸಿರುವ ಚಿತ್ರದ ಟೈಟಲ್ ಅನ್ನೇ ಈ ಚಿತ್ರಕ್ಕೆ ಇಡಲಾಗಿದೆ.

ಅಸುರ:
ಈ ಸಿನಿಮಾಕ್ಕೆ ‘ಅಸುರ’ ಎಂಬ ಹೆಸರು ರಿಜಿಸ್ಟರ್ ಮಾಡಿಸಿಲಾಗಿದೆ ಎನ್ನಲಾಗಿದೆ. NTR ಬರ್ತಡೇ ವಿಶೇಷವಾಗಿ ಬಿಡುಗಡೆಯಾಗಿದ್ದ ಪೋಸ್ಟರ್‌ಗೂ `ಅಸುರ’ ಹೆಸರಿಗೂ ಚೆನ್ನಾಗಿ ಹೊಂದಿಕೆ ಆಗುತ್ತಿದೆ. ವಿಶೇಷ ಎಂದರೆ, ಇದೇ ಹೆಸರಿನಲ್ಲಿ ಶಿವರಾಜ್ ಕುಮಾರ್ ಸಿನಿಮಾ ಒಂದನ್ನು ಸಹ ಮಾಡಿದ್ದರು. 2001ರಲ್ಲಿ ತೆರೆಕಂಡಿದ್ದ `ಅಸುರ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ಇದೇ ಹೆಸರು ಇಟ್ಟುಕೊಂಡು ಪ್ರಶಾಂತ್ ನೀಲ್ ಹಾಗೂ ಜ್ಯೂ.ಎನ್‌ಟಿಆರ್ ಸಿನಿಮಾ ಮಾಡುತ್ತಿದ್ದಾರೆ. .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top