fbpx
ಸಮಾಚಾರ

ನಿರ್ದೇಶಕನೊಂದಿಗೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ರಶ್ಮಿತಾ ನಟಿ

ಕಿರುತೆರೆ ನಟಿ ರಶ್ಮಿತಾ ಶೆಟ್ಟಿ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವತ್ತಿರುವ ‘ಕನ್ಯಾಕುಮಾರಿ’ ಧಾರಾವಾಹಿ ನಟಿ ಯಾಮಿನಿ ಅಲಿಯಾಸ್ ರಶ್ಮಿತಾ ಶೆಟ್ಟಿ ಸಪ್ತಪದಿ ತುಳಿದಿದ್ದಾರೆ.. ಈ ಅದ್ದೂರಿ ಮದುವೆಗೆ ಕಿರುತೆರೆ ನಟ ನಟಿರು ಸಾಕ್ಷಿಯಾಗಿದ್ದಾರೆ.

 

 

ನಿರ್ದೇಶಕ ಹೊನ್ನೇಶ್ ಅವರೊಂದಿಗೆ ರಶ್ಮಿತಾ ಶೆಟ್ಟಿ ಅವರ ವಿವಾಹ ಮಹೋತ್ಸವ ಬೆಂಗಳೂರಿನ ಕನ್ವೆನ್ಷನ್‌ ಹಾಲ್‌ನಲ್ಲಿ ನಡೆದಿದೆ. ರಶ್ಮಿತಾ ಶೆಟ್ಟಿ ಹಾಗೂ ಹೊನ್ನೇಶ್ ಅವರ ಮದುವೆ ಅದ್ಧೂರಿಯಾಗಿ ನೆರವೇರಿದ್ದು, ಇಡೀ ‘ಕನ್ಯಾಕುಮಾರಿ’ ಧಾರಾವಾಹಿಯ ತಂಡ ಸಾಕ್ಷಿಯಾಗಿತ್ತು. ಸಾಕಷ್ಟು ಕಿರುತೆರೆ ಕಲಾವಿದರೂ ಕೂಡ ವಿವಾಹಕ್ಕೆ ಬಂದು ನವದಂಪತಿ ರಶ್ಮಿತಾ ಶೆಟ್ಟಿ ಮತ್ತು ಹೊನ್ನೇಶ್ ಅವರಿಗೆ ಶುಭ ಹಾರೈಸಿದರು.

ಅಂದಹಾಗೆ ತ್ರಿವೇಣಿ ಸಂಗಮ, ಸುಬ್ಬಲಕ್ಷ್ಮಿ ಸಂಸಾರ, ಬ್ರಹ್ಮಾಸ್ತ್ರ, ಹೀಗೆ ಸಾಕಷ್ಟು ಧಾರಾವಾಹಿ ಮೂಲಕ ಮೋಡಿ ಮಾಡಿರುವ ನಟಿ ರಶ್ಮಿತಾ ಜೆ ಶೆಟ್ಟಿ ಪ್ರಸ್ತುತ ಕನ್ಯಾಕುಮಾರಿ ಧಾರಾವಾಹಿಯಲ್ಲಿ ಮಿಂಚ್ತಿರುವ ರಶ್ಮಿತಾ ಖಳನಾಯಕಿಯಾಗಿ ಯಾಮಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 2019ರ `ಕೃಷ್ಣ ಗಾರ್ಮೆಟ್ಸ್’ ಚಿತ್ರದಲ್ಲೂ ನಟಿಸಿ ರಶ್ಮಿತಾ ಸೈ ಎನಿಸಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top