fbpx
ಸಮಾಚಾರ

ಪೋಷಕರ ನಿರ್ಲಕ್ಷದಿಂದ ತಂದೆಯ ಪ್ರಾಣವನ್ನೇ ತೆಗೆದ 2 ವರ್ಷದ ಬಾಲಕ!

ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳ ಮೇಲೆ ಹೆಚ್ಚಿನ ಗಮನ ಹರಿಸೋದನ್ನು ಕಡಿಮೆ ಗೊಳಿಸಿದ್ದಾರೆ. ಇದಕ್ಕೆ ಪೂರಕವಾಗಿ ಅಮೆರಿಕದ ಫ್ಲೋರಿಡಾದಲ್ಲಿ ಪಾಲಕರ ನಿರ್ಲಕ್ಷ್ಯದಿಂದ ಮಕ್ಕಳ ಕೈಗೆ ಬಂದೂಕು ಸಿಕ್ಕಿ ಆಕಸ್ಮಿಕವಾಗಿ ಗುಂಡು ಹಾರಿ ತಂದೆಯ ಪ್ರಾಣವನ್ನೇ ಬಲಿಪಡೆದಿದೆ.

ಅಮೆರಿಕದ ಫ್ಲೋರಿಡಾದಲ್ಲಿ 2 ವರ್ಷದ ಬಾಲಕನ ಕೈಗೆ ಅಕಸ್ಮಾತಾಗಿ ಬಂದೂಕು ಸಿಕ್ಕಿದೆ. ಇದರ ಅರಿವಿಲ್ಲದೆ ಬಾಲಕ ತನ್ನ ತಂದೆಯ ಬೆನ್ನಿಗೆ ಗುಂಡು ಹಾರಿಸಿದ್ದಾನೆ. ಇದರ ಪರಿಣಾಮ ಬಾಲಕನ ತಂದೆಗೆ ಗಾಯಗಳಾಗಿದ್ದವು. ಘಟನೆ ನಡೆದ ಕೂಡಲೇ ತಂದೆ ರೆಗ್ಗಿ ಮಾಬ್ರಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅವರು ಆಸ್ಪತ್ರೆಯಲ್ಲಿ ತಮ್ಮ ಪ್ರಾಣವನ್ನು ಬಿಟ್ಟರು.

ಈ ಘಟನೆ ನಡೆದ ಕೋಣೆಯಲ್ಲಿ ಒಟ್ಟು 5 ಜನ ಸದಸ್ಯರಿದ್ದರು. ಈ ಘಟನೆ ನಡೆದಿದ್ದು ಮೇ 26 ರಂದು, ಮತ್ತು ಈ ಘಟನೆಯ ಕುರಿತು ಅಯಾಲಾ ತನ್ನ ಪತಿ ತನಗೆ ತಾನೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದರು ಎಂದು ತಿಳಿಸಿದರು. ಆದರೆ ಅನುಮಾನಗೊಂಡ ಪೊಲೀಸರು 3 ಮಕ್ಕಳಲ್ಲಿ ಹಿರಿಯ ಮಗನನ್ನು ಪ್ರಶ್ನಿಸಿದಾಗ ತನ್ನ 2 ವರ್ಷದ ತಮ್ಮ ಗುಂಡು ಹರಿಸಿರುವುದಾಗಿ ಹೇಳಿದನು.

ಪೋಷಕರ ನಿರ್ಲಕ್ಷ್ಯದಿಂದಾಗಿ ಮಕ್ಕಳ ಕೈಗೆ ಬಂದೂಕು ಸಿಕ್ಕಿ, ಘಟನೆ ನಡೆದಿದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಮಾಬ್ರಿ ಬಂದೂಕು ಇಟ್ಟಿದ್ದ ಬ್ಯಾಗ್ ಅನ್ನು ನೆಲದ ಮೇಲೆ ಇಟ್ಟಿದ್ದು, ಅದನ್ನು ಬಾಲಕ ಕುತೂಹಲದಿಂದ ನೋಡಿದ್ದಾನೆ. ಈ ವೇಳೆ ಆತನಿಗೆ ಗನ್ ಸಿಕ್ಕಿದ್ದು, ಅಕಸ್ಮಾತ್ ಆಗಿ ತನ್ನ ತಂದೆಯ ಬೆನ್ನಿಗೆ ಶೂಟ್ ಮಾಡಿದ್ದಾನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top