fbpx
ಸಮಾಚಾರ

ಭಾರಿ ವಿರೋಧದ ಬಳಿಕ ಎಚ್ಚೆತ್ತ ಶಿಕ್ಷಣ ಮಂತ್ರಿ: ‘ಸಂವಿಧಾನ ಶಿಲ್ಪಿ’ ಎನ್ನುವ ಪದವನ್ನು ಸೇರಿಸುವುದಾಗಿ ಭರವಸೆ

ಪಠ್ಯಪುಸ್ತಕ ‌ಪರಿಷ್ಕರಣೆ ವಿವಾದ ಇನ್ನೂ ಮುಗಿಯುತ್ತಿಲ್ಲ. ಒಂದಲ್ಲ ಒಂದು ವಿವಾದಳು ಹುಟ್ಟಿಕೊಳ್ಳುತ್ತಿವೆ. ಬಸವಣ್ಣನವರ ವಿವಾದದ ಬಳಿಕ ಈಗ ಅಂಬೇಡ್ಕರ್ ವಿವಾದ ಭುಗಿಲೆದ್ದಿದೆ. ರೋಹಿತ್ ‌ಚಕ್ರತೀರ್ಥ ನೇತೃತ್ವದ ಪರಿಷ್ಕರಣೆ ವೇಳೆ ಮಹಾಪ್ರಮಾದ ಉಂಟಾಗಿದ್ದು, ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಇದ್ದ ಸಂವಿಧಾನ ಶಿಲ್ಪಿ ಎಂಬ ಬಿರುದನ್ನೇ ಚಕ್ರತೀರ್ಥ ಸಮಿತಿ ಕೈಬಿಟ್ಟಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ಭುಗಿಲೆದ್ದಿದೆ.

ರೋಹಿತ್ ಚಕ್ರತೀರ್ಥ ಸಮಿತಿ ಕೈಬಿಟ್ಟಿದ ಡಾ.ಬಿ.ಆರ್. ಅಂಬೇಡ್ಕರ್ “ಸಂವಿಧಾನ ಶಿಲ್ಪಿ” ಬಿರುದನ್ನು ಮತ್ತೆ ಸೇರಿಸಿ 9 ನೇ ತರಗತಿ ಸಮಾಜ ವಿಜ್ಞಾನ ನಮ್ಮ ಸಂವಿಧಾನ ಅಧ್ಯಾಯವನ್ನು ಮುದ್ರಿಸಿ ಶಾಲೆಗಳಿಗೆ ಪೂರೈಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಇಂದು ಮಾಧ್ಯಮದ ಜೊತೆ ಮಾತನಾಡಿದ ಶಿಕ್ಷಣ ಮಂತ್ರಿ ನಾಗೇಶ್ “ಪರಿಷ್ಕರಣೆಯಲ್ಲಿ ಸಣ್ಣಪುಟ್ಟ ಲೋಪಗಳು ಆಗುತ್ತದೆ. ಅಂಬೇಡ್ಕರ್ ಸಂವಿಧಾನ ಶಿಲ್ಪಿ ಎನ್ನುವ ಪದವನ್ನು ಸೇರಿಸುತ್ತೇವೆ. ಬಸವಣ್ಣನವರ ಎರಡು ಸಾಲುಗಳನ್ನು ಸೇರ್ಪಡೆ ಮಾಡುತ್ತೇವೆ. ಅದನ್ನು ನಾವು ಮುಕ್ತ ಮನಸ್ಸಿನಿಂದ ಸ್ವಾಗತ ಮಾಡುತ್ತೇವೆ ಎಂದಿದ್ದಾರೆ.

ನಮ್ಮ ಸಂವಿಧಾನ ಪಠ್ಯದಲ್ಲಿ ಕರಡು ರಚನಾ ಸಮಿತಿ ಬಗ್ಗೆ ಮಾಹಿತಿ ನೀಡುವ ವೇಳೆ ಅಂಬೇಡ್ಕರ್ ಅವರು ಸಂವಿಧಾನ ರಚನೆಗೆ ನೀಡಿದ್ದ ಕೊಡುಗೆಯನ್ನ ಆದರಿಸಿ ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗಿದೆ ಎಂಬ ಅಂಶ ಇತ್ತು. ಬರಗೂರು ರಾಮಚಂದ್ರಪ್ಪ ಸಮಿತಿಯ ಪರಿಷ್ಕರಣೆಯಲ್ಲಿ ಸಂವಿಧಾನ ಶಿಲ್ಪಿ ಪದ ಇತ್ತು. ಆದರೆ ರೋಹಿತ್ ಚಕ್ರತೀರ್ಥ ಸಮಿತಿ ಸಂವಿಧಾನ ಶಿಲ್ಪಿ ಪದವನ್ನೇ ಕೈಬಿಟ್ಟಿತ್ತು.. ಈ ವಿಚಾರ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top