fbpx
ಸಮಾಚಾರ

ಮೈದಾನದ ಹೊರಗೆ ಹೊಸ ದಾಖಲೆ ಬರೆದ ಕಿಂಗ್ ಕೊಹ್ಲಿ: ಈ ಸಾಧನೆ ಮಾಡಿದ ಮೊದಲ ಭಾರತೀಯ

ಮೈದಾನದ ಒಳಗೆ ಅಥವಾ ಹೊರಗೆ, ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ದಾಖಲೆಗಳನ್ನು ಬರೆಯುವಲ್ಲಿ ಹೆಸರುವಾಸಿಯಾಗಿದ್ದಾರೆ. ವಿರಾಟ್ ಕೊಹ್ಲಿ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದ್ದು, ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ 200 ಮಿಲಿಯನ್ (20 ಕೋಟಿ) ಫಾಲೋವರ್ಸ್ ಹೊಂದಿದ್ದಾರೆ.

 

 

ಇನ್‍ಸ್ಟಾಗ್ರಾಮ್‍ನಲ್ಲಿ 200 ಮಿಲಿಯನ್ (20 ಕೋಟಿ) ಫಾಲೋವರ್ಸ್ ಹೊಂದಿದ ಭಾರತದ ಮೊದಲ ಆಟಗಾರನೆನ್ನುವ ಕೀರ್ತಿಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಇದರ ಬೆನ್ನಲ್ಲೇ ಮಾಜಿ ನಾಯಕ ವಿರಾಟ್ ಕೊಹ್ಲಿ, ಬಲಿಷ್ಠ 200 ಮಿಲಿಯನ್‌. ಇನ್‌ಸ್ಟಾಗ್ರಾಂ ಕುಟುಂಬಕ್ಕೆ ಅನಂತ ಧನ್ಯವಾದಗಳು ಎಂದು ತಮ್ಮ ಜೀವನದ ಅಮೂಲ್ಯ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡು ಪೋಸ್ಟ್‌ ಮಾಡಿದ್ದಾರೆ. ಈ ಬಗ್ಗೆ ಕೊಹ್ಲಿ ಫೋಟೋಗಳ ಮಾಂಟೇಜ್ ವಿಡಿಯೋ ಹಂಚಿಕೊಂಡು “200 ಮಿಲ್ ಸ್ಟ್ರಾಂಗ್ ನಿಮ್ಮ ಎಲ್ಲಾ ಬೆಂಬಲಕ್ಕಾಗಿ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಕ್ರೀಡಾಕ್ಷೇತ್ರದಲ್ಲಿ ಅತೀ ಹೆಚ್ಚು ಫಾಲೋವರ್ಸ್​ ಹೊಂದಿದ ವಿಶ್ವದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಪೋರ್ಚುಗಲ್​ನ ಖ್ಯಾತ ಫುಟ್​ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅಗ್ರಸ್ಥಾನದಲ್ಲಿದ್ದಾರೆ. ರೊನಾಲ್ಡೊಗೆ 451 ಮಿಲಿಯನ್ ಫಾಲೋವರ್ಸ್​ ಇದ್ದರೆ, 2ನೇ ಸ್ಥಾನದಲ್ಲಿರುವ ಅರ್ಜೆಂಟೀನಾ ಫುಟ್​​ಬಾಲ್​ ಕಿಂಗ್​ ಲಿಯೋನಲ್ ಮೆಸ್ಸಿ 334 ಫಾಲೋವರ್ಸ್​ ಹೊಂದಿದ್ದಾರೆ. ಇದೀಗ 20 ಕೋಟಿ ಫಾಲೋವರ್ಸ್​ನೊಂದಿಗೆ ವಿರಾಟ್ ಕೊಹ್ಲಿ ಮೂರನೇ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವಿಶ್ವದ ಟಾಪ್ 3 ಸ್ಪೋರ್ಟ್ಸ್​​ ಪರ್ಸನಾಲಿಟಿಯಾಗಿ ವಿರಾಟ್ ಕೊಹ್ಲಿ ಗುರುತಿಸಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top