fbpx
ಸಮಾಚಾರ

ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮಿಥಾಲಿ ರಾಜ್‌: 23 ವರ್ಷಗಳ ಸುದೀರ್ಘ ಪಯಣ ಮುಗಿಸಿದ ಮಹಿಳಾ ಕ್ರಿಕೆಟ್ ದಂತಕತೆ

ಟೀಮ್ ಇಂಡಿಯಾದ ಮಾಜಿ ನಾಯಕಿ ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಟೀಂ ಇಂಡಿಯಾದ ನಾಯಕಿಯಾಗಿ ಬ್ಯಾಟಿಂಗ್‍ನಲ್ಲಿ ಮಿಂಚುತ್ತಿದ್ದ ಮಿಥಾಲಿ, ಏಕದಿನ ಕ್ರಿಕೆಟ್‍ನಲ್ಲಿ ವಿಶ್ವದಾಖಲೆ ನಿರ್ಮಿಸಿದ ಆಟಗಾರ್ತಿ. ಭಾರತದ ಪರವಾಗಿ 23 ವರ್ಷ ಸುಧೀರ್ಘ ಕಾಲ ಆಟವಾಡಿದ್ದಾರೆ.

 

 

ಇಂದು ಸಾಮಾಜಿಕ ಜಾಲತಾಣದ ಮೂಲಕ ನಾನು ದೇಶಕ್ಕಾಗಿ ಕಳೆದ 23 ವರ್ಷಗಳಿಂದ ಆಡಿದ್ದೇನೆ. ಹಲವು ಏಳು ಬೀಳುಗಳನ್ನು ಕಂಡಿದ್ದೇನೆ. ತಂಡದ ಗೆಲುವಿಗಾಗಿ ಶ್ರಮಿಸಿದ್ದೇನೆ. ಇದೀಗ ಈ ಸುಂದರ ನೆನಪುಗಳೊಂದಿಗೆ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ನಾನು ಬಿಸಿಸಿಐ, ಕಾರ್ಯದರ್ಶಿ ಜಯ್ ಶಾ ಮತ್ತು ನನ್ನ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಅಂದಹಾಗೆ ಇದಕ್ಕೂ ಮೊದಲೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ವೃತ್ತಿಬದುಕಿಗೆ ಅವರು ತೆರೆ ಎಳೆದಿದ್ದರು. ಇನ್ನು ತಮ್ಮ ಸುದೀರ್ಘಾವಧಿಯ ಕ್ರಿಕೆಟ್‌ ವೃತ್ತಿಬದುಕಿನಲ್ಲಿ ಹಲವು ದಾಖಲೆಗಳನ್ನು ನಿರ್ಮಸಿರುವ ಮಿಥಾಲಿ ರಾಜ್‌, ಮಹಿಳಾ ಕ್ರಿಕೆಟ್‌ ಇತಿಹಾಸದಲ್ಲಿ ಎಲ್ಲಾ ಮಾದರಿಯಲ್ಲಿ (ಟೆಸ್ಟ್‌ ಕ್ರಿಕೆಟ್‌, ಏಕದಿನ ಕ್ರಿಕೆಟ್, ಒಡಿಐ ಕ್ರಿಕೆಟ್‌) ಅತ್ಯಧಿಕ ರನ್‌ ಗಳಿಸಿದ ಮಹಿಳಾ ಬ್ಯಾಟರ್‌ ಎಂಬ ವಿಶ್ವ ದಾಖಲೆ ಹೊಂದಿದ್ದಾರೆ.

ಮಿಥಾಲಿ ರಾಜ್ ಭಾರತ ಮಹಿಳಾ ತಂಡದ ಪರ 232 ಏಕದಿನ ಪಂದ್ಯಗಳನ್ನಾಡಿ 50.68ರ ಬ್ಯಾಟಿಂಗ್ ಸರಾಸರಿಯಲ್ಲಿ 7,805 ರನ್ ಬಾರಿಸಿದ್ದಾರೆ. ಇನ್ನು 89 ಟಿ20 ಪಂದ್ಯಗಳಿಂದ ಮಿಥಾಲಿ ರಾಜ್ 2,364 ರನ್ ಸಿಡಿಸಿದ್ದರು. ಇದಷ್ಟೇ ಅಲ್ಲದೇ ಭಾರತ ಪರ 12 ಟೆಸ್ಟ್ ಪಂದ್ಯಗಳನ್ನಾಡಿ 699 ರನ್ ಬಾರಿಸಿದ್ದರು. ಎರಡು ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನದಲ್ಲಿ ಮಿಥಾಲಿ 7 ಏಕದಿನ ಹಾಗೂ ಒಂದು ಟೆಸ್ಟ್ ಶತಕವನ್ನು ಸಿಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top