ನಿಖಿಲ್ ಕುಮಾರಸ್ವಾಮಿ ಪುತ್ರನ ನಾಮಕರಣ ಕಾರ್ಯಕ್ರಮ ಇಂದು ನಡೆಯುತ್ತಿದೆ. ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಶಾಸ್ತ್ರ ಜರುಗುತ್ತಿದೆ. 10:30 ರಿಂದ 12:20 ರವರೆಗೂ ನಡೆಯುವ ಶುಭ ಲಗ್ನದಲ್ಲಿ ನಾಮಕರಣ ಕಾರ್ಯಕ್ರಮ ನಡೆಯುತ್ತಿದೆ. ಪ್ರಪೌತ್ರ ಜನನ ಶಾಂತಿ, ನಾಮಕರಣ, ಕನಕಾಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
‘ಅವ್ಯಾನ್ ದೇವ್’ ಎಂದರೆ ಅರ್ಥ
ಇನ್ನು ನಿಖಿಲ್ ಕುಮಾರಸ್ವಾಮಿ ಅವರ ಮಗನಿಗೆ ಸದ್ಯ 9 ತಿಂಗಳು ತುಂಬಿದ್ದು, ಈಗ ಆವ್ಯನ್ ದೇವ್ ಎಂದು ನಾಮಕರಣ ಮಾಡಲಾಗಿದೆ. ಅವ್ಯಾನ್ ದೇವ್ ದೇವರ ಹೆಸರು. ಹೌದು, ಗಣಪತಿಯ ಮತ್ತೊಂದು ಹೆಸರು. ಅದೃಷ್ಟದಿಂದ ಜನಿಸಿದವನು ಎಂದು ಸೂಚಿಸುತ್ತ
ಈ ಕಾರ್ಯಕ್ರಮಕ್ಕೆ ಕೇವಲ ಕುಟುಂಬಸ್ಥರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ದೇವೇಗೌಡರ ಕುಟುಂಬ ಮತ್ತು ಅವರ ಆಪ್ತರು ಮಾತ್ರ ಭಾಗಿಯಾಗಿದ್ದಾರೆ. ಮಗು ನಾಮಕರಣಕ್ಕೆ ವಿವಿಧ ಹೂಗಳಿಂದ ಸಿಂಗಾರ ಗೊಂಡಿದ್ದು, ಬೆಳ್ಳಿ ತೊಟ್ಟಿಲಲ್ಲಿ ಮಗುವಿನ ನಾಮಕರಣ ಶಾಸ್ತ್ರ ನಡೆಯುತ್ತಿದೆ.
2020ರ ಏಪ್ರಿಲ್ನಲ್ಲಿ ಬಿಡದಿಯ ತೋಟದ ಮನೆಯಲ್ಲಿ ಅದ್ಧೂರಿಯಾಗಿ ನಿಖಿಲ್-ರೇವತಿ ಮದುವೆಯಾಗಿತ್ತು , 2021ರ ಸೆಪ್ಟೆಂಬರ್ನಲ್ಲಿ ರೇವತಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮಗುವಿನ ನಾಮಕರಣ ಮಾಡಲಾಗಿದೆ. ಮಗುವಿಗೆ ಒಂಬತ್ತು ತಿಂಗಳು ತುಂಬಿದ್ದು, ಕುಟುಂಬಸ್ಥರು ಸೇರಿ ಈ ಕಾರ್ಯಕ್ರಮ ಮಾಡಿದ್ದಾರೆ. ಈ ನಾಮಕರಣ ಸಮಾರಂಭದಲ್ಲಿ ಗೌಡರ ಕುಟುಂಬ ಹಾಗೂ ಕೆಲ ಆಪ್ತರು ಮಾತ್ರ ಭಾಗವಹಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
