fbpx
ಸಮಾಚಾರ

ಬಿರುಗಾಳಿಯ ವೇಗದಲ್ಲಿ ಸಾಗುತ್ತಿರುವ ಕ್ರಾಂತಿ ಸಿನಿಮಾದ ಚಿತ್ರೀಕರಣ! ಕ್ರಾಂತಿ ಕಥೆಯೇನು? ಡಿಬಾಸ್ ಪಾತ್ರ ಏನು ಗೊತ್ತಾ?

“ಚಾಲೆಂಜಿಂಗ್ ಸ್ಟಾರ್”, “ಬಾಕ್ಸ್ ಆಫೀಸ್ ಸುಲ್ತಾನ್”, ಡಿ ಬಾಸ್ ದರ್ಶನ್ ರಾಬರ್ಟ್ ಸಿನಿಮಾದ ಸಕ್ಸಸ್ ನಂತರ ಕ್ರಾಂತಿ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿರೋದು ನಮಗೆಲ್ಲಾ ತಿಳಿದಿದೆ. ಆದರೆ ಈ ಸಿನಿಮಾದ ಕಥೆ ಏನು? ಇದರಲ್ಲಿ ಡಿ ಬಾಸ್ ಯಾವ ಪಾತ್ರ ಮಾಡುತ್ತಿದ್ದಾರೆ? ಹೀಗೆ ಹತ್ತು ಹಲವಾರು ಪ್ರಶ್ನೆಗಳು ಅಭಿಮಾನಿಗಳ ಮನಸಲ್ಲಿ ಮೂಡಿರೋದು ಸಹಜ. ಇದಕ್ಕೆ ಉತ್ತರ ಇಲ್ಲಿದೆ.

ಕ್ರಾಂತಿ ಸಿನಿಮಾದ ಚಿತ್ರೀಕರಣ ಬಿರುಸಾಗಿ ನಡೆಯುತ್ತಿದೆ. ಸಿನಿಮಾದ ಪೋಸ್ಟರ್ ಜೊತೆ ಫಸ್ಟ್ ಲುಕ್ ಟೀಸರ್ ಕೂಡ ಸಿನಿಮಾ ತಂಡ ಬಿಡುಗಡೆ ಮಾಡಿ ಭರ್ಜರಿ ರೆಸ್ಪಾನ್ಸ್ ಗಳಿಸಿದೆ. ಇದರಲ್ಲಿ ಡಿ ಬಾಸ್ ಸಕತ್ ಸ್ಟೈಲಿಶ್ ಆಗಿ ಕಾಣುತಿದ್ದು ಅಭಿಮಾನಿಗಳಿಗೆ ಕ್ರೇಜ್ ಹೆಚ್ಚಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಬಿರುಸಾಗಿ ಸಾಗುತ್ತಿದ್ದು ಈಗಾಗಲೇ ದರ್ಶನ್ ಜೊತೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಕ್ರಾಂತಿ ಶೂಟಿಂಗ್ ನಲ್ಲಿ ಭಾಗಿ ಆಗಿದ್ದಾರೆ. ಇದೆಲ್ಲದರ ನಡುವೆ ಕ್ರಾಂತಿ ಅಂದರೆ ಹೋರಾಟ ಸೊ ಡಿಬಾಸ್ ಈ ಸಿನಿಮಾದಲ್ಲಿ ಯಾವ ಕಾರಣಕ್ಕಾಗಿ ಹೋರಾಟ ಮಾಡುತ್ತಾರೆ ಎಂಬ ಗೊಂದಲ ಅಭಿಮಾನಿಗಳ ಮನಸಲ್ಲಿ ಇತ್ತು. ಇದಕ್ಕೆ ಉತ್ತರ ನಾವು ಹೇಳ್ತಿವಿ ಕೇಳಿ..

ಸರ್ಕಾರಿ ಶಾಲೆಗಳನ್ನು ಉಳಿಸುವ ಹೋರಾಟದ ಸಿನಿಮಾವಾಗಿದ್ದು, ಅವನತಿಯತ್ತ ಸಾಗುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸುವುದು ಹೇಗೆ ಮತ್ತು ಸರ್ಕಾರಿ ಶಾಲೆಗಳು ಅವನತಿ ಹೊಂದಿದರೆ ಏನೆಲ್ಲಾ ಆಗುತ್ತದೆ ಎಂಬ ವಿಷಯವನ್ನು ಇಟ್ಟುಕೊಂಡು ಕಥೆಯನ್ನು ಮಾಡಲಾಗಿದೆ. ಇನ್ನು ಇದರಲ್ಲಿ ದರ್ಶನ್ ‘NRI’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಫಾರಿನ್ ಇಂದ ಬಂದು ಭಾರತದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವ ಹೋರಾಟ ಮಾಡಿ ‘ಕ್ರಾಂತಿ’ ಮೂಡಿಸ್ತಾರಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top