fbpx
ಸಮಾಚಾರ

ವಿರೋಧದ ನಡುವೆಯೂ ಕೊನೆಗೂ ತನ್ನನ್ನು ತಾನೇ ಮದುವೆ ಮಾಡಿಕೊಂಡ ಯುವತಿ

ತನ್ನನ್ನು ತಾನೇ ಮದುವೆಯಾಗುವುದಾಗಿ ಹೇಳಿಕೆ ನೀಡುವ ಮೂಲಕ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಗುಜರಾತ್‌ನ ವಡೋದರಾದ ಯುವತಿ, ನಿಗದಿಗಿಂತ ಮೂರು ದಿನ ಮುನ್ನವೇ ಸ್ವಯಂ ವಿವಾಹ ಮಾಡಿಕೊಂಡಿದ್ದಾಳೆ. ಕೆಂಪು ಬಣ್ಣದ ಉಡುಗೆಯಲ್ಲಿ ವಧುವಿನ ಅಲಂಕಾರದಲ್ಲಿ 24 ವರ್ಷದ ಕ್ಷಮಾ ಬಿಂದು, ಹಣೆಯಲ್ಲಿ ದಪ್ಪನೆಯ ಸಿಂಧೂರ ಮತ್ತು ಕೊರಳಲ್ಲಿ ಮಂಗಳಸೂತ್ರ ಪ್ರದರ್ಶಿಸಿ, ತನ್ನ ಮದುವೆಯಾಯಿತು ಎಂದು ಬುಧವಾರ ಹೇಳಿಕೊಂಡಿದ್ದಾಳೆ.

 

 

ತನ್ನನ್ನು ತಾನೇ (ಸ್ವಯಂ ಮದುವೆ) ವಿವಾಹವಾಗಿರುವುದು ಭಾರತದಲ್ಲಿ ಇದೇ ಮೊದಲು. ಮದುವೆಯ ಬಳಿಕ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಅವರು ಸ್ವಯಂ ಮದುವೆಗೆ ಪ್ರೋತ್ಸಾಹ ನೀಡಿದ ಎಲ್ಲರಿಗೂ ಕೃತಜ್ಞತೆಗಳನ್ನು ತಿಳಿಸಿದ್ದಾರೆ. ನನ್ನ ಈ ಮದುವೆಗೆ ಬೆಂಬಲ ನೀಡಿದ, ಅಭಿನಂದಿಸಿದ, ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶ ರವಾನಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.

 

 

ವಿವಾಹದ ನಂತರ ವೀಡಿಯೊದಲ್ಲಿ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಬೆಂಬಲ ಮತ್ತು ಪ್ರೋತ್ಸಾಹಕ್ಕೆ ಕೃತಜ್ಞರಾಗಿರುತ್ತೇನೆ ಎಂದು ಹೇಳಿದರು. “ನನಗೆ ಸಂದೇಶ ಕಳುಹಿಸಿದ ಮತ್ತು ನನ್ನನ್ನು ಅಭಿನಂದಿಸಿದ ಮತ್ತು ನಾನು ನಂಬಿದ್ದಕ್ಕಾಗಿ ಹೋರಾಡುವ ಶಕ್ತಿಯನ್ನು ನೀಡಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಅವರು ಫೇಸ್‌ ಬುಕ್‌ ನಲ್ಲಿ ತಿಳಿಸಿದ್ದಾರೆ.

ವಿರೋಧ ವ್ಯಕ್ತವಾಗಿತ್ತು:
ಜೂನ್ 11ರಂದು ದೇವಸ್ಥಾನದಲ್ಲಿ ಮದುವೆಯಾಗುವುದಾಗಿ ಆಕೆ ಈ ಮೊದಲು ಘೋಷಿಸಿಕೊಂಡಿದ್ದಳು. ಆದರೆ ಇದು ವಿವಾದ ಸೃಷ್ಟಿಸಿತ್ತು. ದೇವಸ್ಥಾನದಲ್ಲಿ ಮದುವೆಯಾಗಲು ಬಿಡುವುದಿಲ್ಲ ಎಂದು ಸ್ಥಳೀಯ ಬಿಜೆಪಿ ನಾಯಕರು ಎಚ್ಚರಿಕೆ ನೀಡಿದ್ದರು. ಆಕೆಯ ‘ಸ್ವಯಂ ವಿವಾಹ’ಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದವು. ಕೊನೆಗೆ ಗಲಾಟೆಗಳು ನಡೆಯಬಾರದು ಎಂದು ಮೂರು ದಿನ ಮುನ್ನವೇ ಆಕೆ ಮದುವೆಯಾಗಿದ್ದಾಳೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top