fbpx
ಸಮಾಚಾರ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನಯನತಾರ: ವಿಘ್ನೇಶ್ ಶಿವನ್ ಜೊತೆ ಸಪ್ತಪದಿ

ನಟಿ ನಯನತಾರಾ ತಮ್ಮ ಬಹುಕಾಲದ ಗೆಳೆಯ ಚಿತ್ರ ನಿರ್ಮಾಪಕ, ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಬುಧವಾರ ( ಜೂ.9) ಮದುವೆಯಾಗಿದ್ದಾರೆ. ಚೆನ್ನೈನ ಮಹಾಬಲಿಪುರಂ ಖಾಸಗಿ ರೆಸಾರ್ಟ್‌ನಲ್ಲಿ ಅದ್ದೂರಿಯಾಗಿ ವಿವಾಹ ನಡೆಯಿತು ಎಂದು ತಮಿಳುನಾಡು ಮಾಧ್ಯಮಗಳು ವರದಿ ಮಾಡಿವೆ.

ಇಂದು (ಜೂನ್ 9) ಬೆಳಗ್ಗೆ 8:30 ರಿಂದ ಇದ್ದ ಶುಭ ಮುಹೂರ್ತದಲ್ಲಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರ ಕಲ್ಯಾಣ ನೆರವೇರಿದೆ. ಮಹಾಬಲಿಪುರಂನಲ್ಲಿರುವ ಐಷಾರಾಮಿ ರೆಸಾರ್ಟ್‌ನಲ್ಲಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರ ಮದುವೆ ಶಾಸ್ತ್ರೋಕ್ತವಾಗಿ ಜರುಗಿದೆ. ಐಷಾರಾಮಿ ಹೋಟೆಲ್‌ನಲ್ಲಿ ಗಾಜಿನ ಬೃಹತ್ ಮಂಟಪದಲ್ಲಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರ ಮದುವೆ ನಡೆದಿದೆ.

ಶಾರುಖ್​ ಖಾನ್​, ರಜನಿಕಾಂತ್​ ಸೇರಿದಂತೆ ಅನೇಕ ಗಣ್ಯರು ನಯನತಾರಾ ಮತ್ತು ವಿಘ್ನೇಶ್​ ಶಿವನ್​ ಅವರ ಮದುವೆಗೆ ಬಂದಿದ್ದಾರೆ. ನವಜೋಡಿಗೆ ಎಲ್ಲರೂ ಶುಭ ಹಾರೈಸಿದ್ದಾರೆ. ಮದುವೆಯ ಫೋಟೋಗಳು ವೈರಲ್​ ಆಗುತ್ತಿವೆ. ಈ ಮದುವೆಗೆ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಕುಟುಂಬದವರು, ಸಂಬಂಧಿಕರು, ಆಪ್ತರು, ಗೆಳೆಯರು ಕೂಡ ಭಾಗವಹಿಸಿದ್ದರು. ಈ ಹಿಂದೆ ವಿವಾಹ ತಿರುಪತಿಯಲ್ಲಿ ನಡೆಯಲಿದೆ ಎನ್ನಲಾಗಿತ್ತು. ಭದ್ರತೆಯ ಕಾರಣಗಳಿಂದಾಗಿ ತಮಿಳುನಾಡಿನಲ್ಲಿ ಮದುವೆ ನಡೆದಿದೆ ಎಂದು ವಿಘ್ನೇಶ್ ಶಿವನ್ ಗೆಳೆಯರು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top