fbpx
ಸಮಾಚಾರ

ಅಭಿಮಾನಿಗಳೇ ದರ್ಶನ್ ‘ಮಾಧ್ಯಮ’: ಫ್ಯಾನ್ಸ್ ಅಭಿಮಾನಕ್ಕೆ ಡಿ ಬಾಸ್ ಖುಷ್

ಸ್ಯಾಂಡಲ್ವುಡ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಮಟ್ಟಿಗೆ ಅತಿಹೆಚ್ಚು ಅಭಿಮಾನಿಗಳನ್ನ ಹೊಂದಿರೋ ನಟ ಎಂದರೆ ಎಲ್ಲರೂ ಒಪ್ಪುವಂತಹ ಮಾತು.. ಅಭಿಮಾನಿಗಳಿಗೆ ದಚ್ಚು ಎಂದರೆ ವಿಪರೀತ ಹುಚ್ಚು ಕ್ರೇಜ್, ಹಾಗೆಯೆ ದರ್ಶನ್ ಅವರಿಗೆ ತಮ್ಮ ಅಭಿಮಾನಿಗಳೆಂದರೆ ವಿಪರೀತ ಪ್ರೀತಿ. ಅಭಿಮಾನಿಗಳನ್ನು ಪ್ರೀತಿಯಿಂದ “ಸೆಲೆಬ್ರೆಟಿಗಳು” ಎಂದು ದರ್ಶನ್ ಅವರು ಕರೆಯುತ್ತಾರೆ. ಈಗ ಯಾಕೆ ಈ ಮಾತು ಅಂತೀರಾ? ವಿಚಾರ ಇದೆ ಮುಂದೆ ಓದಿ

ದರ್ಶನ್​​ ಹೊಸ ಸಿನೇಮಾ ‘ಕ್ರಾಂತಿ’ ಶೂಟಿಂಗ್ ಭರದಿಂದ ಸಾಗುತ್ತಿದ್ದು ಬಿಡುಗಡೆಗೂ ಸಿದ್ಧವಾಗುತ್ತಿದೆ. ಸಹಜವಾಗಿ ದರ್ಶನ್ ಸಿನಿಮಾಗಳು ಶೂಟಿಂಗ್ ಹಂತದಲ್ಲಿಯೇ ಹೆಚ್ಚು ಸದ್ದು ಮಾಡುತ್ತವೆ.. ಆದರೆ ಈ ಸಲ ‘ಕ್ರಾಂತಿ’ ಬಗ್ಗೆ ಅದೇಕೋ ಯಾವುದೇ ಮಾದ್ಯಮದಲ್ಲಿ ಸುದ್ದಿನೇ ಇಲ್ಲ. ಯಾಕಪ್ಪಾ ಹೀಗೆ ಅಂತ ಕಾರಣ ಹುಡುಕಿ ಹೊರಟರೆ ತಿಳಿದ ವಿಷ್ಯ ದರ್ಶನ್​​ರನ್ನು ಮಾಧ್ಯಮಗಳು ಬಹಿಷ್ಕರಿಸಿವೆಯಂತೆ…!

ಹಾಗಾಗಿ ಮಾಧ್ಯಮ ಇಲ್ಲ ಅಂದ್ರೆ ಏನಂತೆ ನಾವೇ ನಮ್ಮ ಬಾಸ್ ಗೆ ಮಾಧ್ಯಮ ಆಗೋಣ, ನಮ್ಮ ಬಾಸ್ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡೋಣ ಅಂತ ದಚ್ಚು ಅಭಿಮಾನಿಗಳು ಪಣತೊಟ್ಟು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಪ್ರೊಮೋಷನ್ ಮಾಡಿದ್ದಾರೆ.. ಅಭಿಮಾನಿಗಳ ಈ ಅಭಿಮಾನಕ್ಕೆ ಸ್ವತಃ ದರ್ಶನ್ ಅವರೇ ಮನಸೋತಿದ್ದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

 

 

ಇದೆ ವಿಚಾರವಾಗಿ ಟ್ವೀಟ್ ಮಾಡಿರುವ ದರ್ಶನ್ ಅಭಿಮಾನಿಗಳು ನಡೆಸುತ್ತಿರುವ ಅಭಿಯಾನದ ಒಂದೆರೆಡು ಫೋಟೋಗಳನ್ನು ಹಂಚಿಕೊಂಡು ಕೃತಜ್ಞತೆ ಸಲ್ಲಿಸಿದ್ದಾರೆ. “ನಾ ನಡೆಯೋ ಹಾದಿಯಲ್ಲಿ ನನ್ನೊಂದಿಗೆ ಸದಾ ನಿಲ್ಲುವ ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನಾನು ಸದಾ ಚಿರಋಣಿ. ನೀವು ನನಗೆ ನೀಡುತ್ತಿರುವ ಸಾಥ್ ಗೆ ನಾನು ಆಭಾರಿಯಾಗಿದ್ದೇನೆ, ನಿಮ್ಮ ಈ ಪ್ರೀತಿಯನ್ನು ವರ್ಣಿಸಲು ಬಹುಕೋಟಿ ಪದಗಳೇ ಸಾಲದು… ನಿಮ್ಮ ದಾಸ ದರ್ಶನ್” ಅಂತ ಡಿ ಬಾಸ್ ಬರೆದುಕೊಂಡಿದ್ದಾರೆ.

ಅಷ್ಟಕ್ಕೂ ದರ್ಶನ್ ಮೇಲಿನ ಬಹಿಷ್ಕಾರಕ್ಕೆ ಕಾರಣ ಏನು?
ಅಂದಹಾಗೆ ದರ್ಶನ್​​ ಮೇಲಿನ ಈ ಬಹಿಷ್ಕಾರಕ್ಕೆ ಕಾರಣವಾಗಿದ್ದು ಹಳೇ ಆಡಿಯೋ. ಈ ಹಿಂದೆ ಮೈಸೂರಿನ ಹೊಟೇಲ್​​ನಲ್ಲಿ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಸುದ್ದಿ ಮಾಡಿದಾಗ ದರ್ಶನ್​​ ಮಾಧ್ಯಮಗಳಿಗೆ ಬೈದಿದ್ದರು ಎಂದು ಆಡಿಯೋ ವೈರಲ್​​ ಆಗಿತ್ತು.. ಆ ಆಡಿಯೋದಲ್ಲಿ ಮೀಡಿಯಾ ವಿರುದ್ಧ ಅವಾಚ್ಯ ಪದ ಬಳಕೆ ಮಾಡಲಾಗಿತ್ತು.
ಆ ಆಡಿಯೋ ನಿಜಕ್ಕೂ ದರ್ಶನ್​ಗೆ ಸಂಬಂಧಿಸಿದ್ದಾ ? ಆ ಮಾತುಗಳು ದರ್ಶನ್​​ ಅವರದ್ದೇನಾ ? ಅಂತ ಸ್ಪಷ್ಟನೆ ಇಲ್ಲ.

ದರ್ಶನ್​​ ನಿಜಕ್ಕೂ ಮಾಧ್ಯಮಗಳಿಗೆ ಕೆಟ್ಟ ಪದ ಬಳಸಿ ಬೈದಿದ್ದರೆ ಮಾಧ್ಯಮದ ಯಾರೊಬ್ಬರೂ ಯಾಕೆ ದೂರು ದಾಖಲಿಸಿಲ್ಲ. ದೂರು ದಾಖಲಿಸದೇ, ಆಡಿಯೋದ ಸತ್ಯಾಸತ್ಯತೆಯನ್ನು ಖಾತ್ರಿ ಮಾಡಿಕೊಳ್ಳದೆ, ಆಡಿಯೋದ ಎಫ್​ಎಸ್​ಎಲ್​​ ರಿಪೋರ್ಟ್​​ ಪಡೆಯದೇ ದರ್ಶನ್​​ ಅವರದ್ದೇ ಆಡಿಯೋ ಎಂದು ಮಾಧ್ಯಮಗಳು ಹೇಗೆ ತೀರ್ಮಾನಕ್ಕೆ ಬಂದು ದರ್ಶನ್​​ಗೆ ಬಹಿಷ್ಕಾರದ “ಶಿಕ್ಷೆ” ವಿಧಿಸಿದವು? ಎಂಬುದು ಪ್ರಜ್ಞಾವಂತ ಸಿನಿರಸಿಕರ ಪ್ರಶ್ನೆಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top