fbpx
ಸಮಾಚಾರ

ಕೊನೆಯ ಓವರ್ ನಲ್ಲಿ ದಿನೇಶ್ ಕಾರ್ತಿಕ್ ಅವರಿಗೆ ಕ್ರೀಜ್ ಬಿಟ್ಟುಕೊಡದೆ ವ್ಯಾಪಕ ಟೀಕೆಗೆ ಒಳಗಾದ ಹಾರ್ದಿಕ್ ಪಾಂಡ್ಯ!

ಆರ್ ಸಿ ಬಿ ತಂಡದ ಸ್ಟಾರ್ ಆಟಗಾರ ಫಿನಿಶರ್ ಎಂದೇ ಹೆಸರಾಗಿರುವ ದಿನೇಶ್ ಕಾರ್ತಿಕ್ ಕೊನೆ ಹಂತದಲ್ಲಿ ತಂಡಕ್ಕೆ ಆಸರೆ ಆಗಿ ಎಷ್ಟೊಂದು ಪಂದ್ಯವನ್ನು ಗೆದ್ದು ಕೊಟ್ಟಿದ್ದಾರೆ. ಇವರ ಈ ಅದ್ಬುತ ಪ್ರದರ್ಶನದಿಂದ ಇವರನ್ನು ಟೀಮ್ ಇಂಡಿಯಾ ಗೆ ಆಯ್ಕೆ ಮಾಡಲಾಗಿತ್ತು. ಆದರೆ ಇವರ ಉತ್ತಮ ಪ್ರದರ್ಶನವನ್ನು ಅರಿಯದೆ ಹಾರ್ದಿಕ್ ಪಾಂಡ್ಯ ಇವರನ್ನು ಕಡೆಗಣಿಸಿದ್ದಾರೆ.

ನೆನ್ನೆ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲನೆಯ T-20 ಪಂದ್ಯದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿ 211 ರನ್ ಗಳ ಬೃಹತ್ ಮೊತ್ತವನ್ನು ಕಲೆಹಾಕಿತ್ತು. ಆದರೆ ಭಾರತ ತಂಡದ ಬೌಲರ್ ಗಳ ಕಳಪೆ ಪ್ರದರ್ಶನದಿಂದ ತಂಡ ಸೋತಿತ್ತು. ಆದರೆ ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಡೆದುಕೊಂಡ ರೀತಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು ಎಲ್ಲರಿಂದಲೂ ಟೀಕೆಗೆ ಗುರಿಯಾಗಿದ್ದಾರೆ.

ಎನ್ರಿಚ್ ನೊಕಿಯಾ ಎಸೆದ 20ನೇ ಓವರ್‌ನ ಮೊದಲ ಎಸೆತದಲ್ಲಿ ರಿಷಭ್ ಪಂತ್ ಕ್ಯಾಚ್ ಕೊಟ್ಟು ಔಟ್ ಆಗಿದ್ದರು. ಸ್ಟ್ರೈಕ್‍ಗೆ ಬಂದ ದಿನೇಶ್ ಕಾರ್ತಿಕ್ ಮೊದಲ ಎಸೆತದಲ್ಲಿ ಯಾವುದೇ ರನ್ ತೆಗೆಯಲಿಲ್ಲ. ಮೂರನೇ ಎಸೆತದಲ್ಲಿ ಕಾರ್ತಿಕ್ ಸಿಂಗಲ್ ಓಡಿದರು. ನಾಲ್ಕನೇಯ ಎಸೆತದಲ್ಲಿ ಪಾಂಡ್ಯ ಸಿಕ್ಸರ್ ಸಿಡಿಸಿದರು. ಐದನೇ ಎಸೆತವನ್ನು ಪಾಂಡ್ಯ ಮಿಡ್ ವಿಕೆಟ್‍ಗೆ ತಳ್ಳಿದರು. ಆದರೆ ಪಾಂಡ್ಯ ಯಾವುದೇ ರನ್ ಓಡಲಿಲ್ಲ. ಪಾಂಡ್ಯ ಅವರ ಈ ನಡೆಗೆ ಈಗ ಟೀಕೆ ವ್ಯಕ್ತವಾಗುತ್ತಿದೆ.

ದಿನೇಶ್ ಕಾರ್ತಿಕ್ ಎಂತಹ ಫಿನಿಶರ್ ಅಂತ ನಮಗೆಲ್ಲಾ ಗೊತ್ತು. ಆದರೆ ಅವರಿಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡದೆ ಕೊನೆಯ ಎಸೆತವನ್ನು ತಾವು ಆಡಲು ಇಚ್ಚಿಸಿದ ಹಾರ್ದಿಕ್ ಪಾಂಡ್ಯ ಅವರನ್ನು ನೆಟ್ಟಿಗರು ಟೀಕಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top