fbpx
ಸಮಾಚಾರ

ಕೊನೆಗೂ ಪ್ರಭಾಸ್ ಅವರಿಗೆ ಕೂಡಿಬಂತು ಕಂಕಣ ಭಾಗ್ಯ! ಹುಡುಗಿ ಯಾರು ಗೊತ್ತಾ?

ಬಾಹುಬಲಿ ಸಿನಿಮಾದ ಮೂಲಕ ಖ್ಯಾತಿ ಗಳಿಸಿದ ತೆಲುಗು ನಟ ಪ್ರಭಾಸ್ ಅವರ ಜೀವನುದ್ದಕ್ಕೂ ಕಾಡುತ್ತಿದ್ದ ಪ್ರಶ್ನೆ ಎಂದರೆ “ಇಷ್ಟು ಒಳ್ಳೆ ಹುಡುಗನಿಗೆ ಇನ್ನು ಮದ್ವೆ ಆಗಿಲ್ಲ ಯಾಕೆ” ಎಂಬುದು. ಪ್ರಭಾಸ್ ಎಲ್ಲೇ ಹೋದರು ಜನರು ಅವರನ್ನು ಕೇಳುತಿದ್ದು ನಿಮ್ಮ ಮದುವೆ ಯಾವಾಗ ಎಂದು. ಯಾಕೆ ಜನರು ತನ್ನ ಮದುವೆಯ ಬಗ್ಗೆ ಇಷ್ಟೊಂದು ತಲೆ ಕೆಡಿಸಿಕೊಂಡಿದ್ದಾರೆ ಎಂದು ಸ್ವತಃ ಪ್ರಭಾಸ್ ಆವರೇ ಹೇಳಿದ್ದರು. ಇದೀಗ ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಸದ್ಯದಲ್ಲೇ ಪ್ರಭಾಸ್ ಅವರಿಗೆ ಕಂಕಣ ಭಾಗ್ಯ ಕೂಡಲಿದೆ ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಪ್ರಭಾಸ್ ಅವರ ಪೋಷಕರು ಈಗಾಗಲೇ ಪ್ರಭಾಸ್ ಅವರಿಗೆ ಹುಡುಗಿಯನ್ನು ಹುಡುಕಿದ್ದಾರಂತೆ. ಪ್ರಭಾಸ್ ತಮ್ಮ ಮನೆಯವರು ನೋಡಿರುವ ಹುಡುಗಿಯನ್ನೇ ಮದುವೆ ಆಗುವುದಾಗಿ ಸಹ ತಿಳಿಸಿದ್ದಾರೆ. ಹುಡುಗಿ ಯಾವುದೇ ಸಿನಿಮಾ ರಂಗದ ಕಲಾವಿದೆ ಅಲ್ಲಾ ಎಂದು ಕುಟುಂಬದವರು ತಿಳಿಸಿದ್ದಾರೆ. ಹೀಗಾಗಿ ಪ್ರಭಾಸ್ ಸುತ್ತಾ ಮುತ್ತಾ ಇದ್ದ ಹಲವಾರು ಗಾಸಿಪ್ ಗಳಿಗೆ ಕುಟುಂಬದವರು ಬ್ರೇಕ್ ಹಾಕಿದ್ದಾರೆ.

ಪ್ರಭಾಸ್ ಹಲವು ನಟಿಯರ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂಬ ಸುದ್ದಿ ತೆಲುಗು ಸಿನಿಮಾ ರಂಗದಲ್ಲಿ ಹರಿದಾಡುತ್ತಿತ್ತು. ಅದರಲ್ಲೂ ಅನುಷ್ಕಾ ಅವರನ್ನು ಅವರು ಮದುವೆ ಆಗಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿತ್ತು. ಆದರೆ ಇವೆಲ್ಲ ಉಹಾ ಪೋಹಗಳಿಗೆ ಕುಟುಂಬದವರು ತೆರೆ ಎಳೆದಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಈ ವರ್ಷದಲ್ಲೇ ಪ್ರಭಾಸ್ ಮದುವೆ ಆಗುವ ಎಲ್ಲಾ ಸಾಧ್ಯತೆಗಳಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top