fbpx
ಸಮಾಚಾರ

ಹೊಂಬಾಳೆ ಫಿಲಂ ಸಂಸ್ಥೆಯಿಂದ ಘೋಷಣೆಆಯ್ತು ಮತ್ತೊಂದು ಪಾನ್ ಇಂಡಿಯಾ ಸಿನಿಮಾ! ಟೈಟಲ್ ಏನು ಗೊತ್ತಾ?

ಹೊಂಬಾಳೆ ಫಿಲಂ ಸಂಸ್ಥೆಯಿಂದ ಮತ್ತೊಂದು ಪಾನ್ ಇಂಡಿಯಾ ಸಿನಿಮಾದ ಘೋಷಣೆಯಾಗಿದೆ. ವಿಜಯ್ ಕುಮಾರ್ ಕಿರಗಂದೂರು ಅವರ ಪ್ರೊಡಕ್ಷನ್ ಮತ್ತು ಮಲಯಾಳಂ ನಟ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಅವರ ಜೊತೆಗೂಡಿ ಸಿನಿಮಾ ನಿರ್ಮಾಣವಾಗುತ್ತಿದ್ದು ಇದಕ್ಕೆ ಟೈಸನ್ ಎಂಬ ಹೆಸರನ್ನು ಇಡಲು ಮುಂದಾಗಿದ್ದಾರೆ.

ಕೆಲವು ತಿಂಗಳ ಹಿಂದೆ ಪೃಥ್ವಿರಾಜ್ ಅವರನ್ನು ಕೇರಳದಲ್ಲಿ ಹೊಂಬಾಳೆ ತಂಡ ಭೇಟಿ ಮಾಡಿ ಫೋಟೋವನ್ನು ಹಂಚಿಕೊಂಡಿದ್ದರು. ಸಲಾರ್ ಚಿತ್ರದಲ್ಲಿ ಒಂದು ಸಣ್ಣ ಪಾತ್ರದಲ್ಲಿ ಪೃಥ್ವಿರಾಜ್ ಅವರು ಅಭಿನಯಿಸಲಿದ್ದಾರೆ ಎಂದು ಸ್ವತಃ ಪ್ರಭಾಸ್ ಅವರೇ ತಿಳಿಸಿದ್ದರು. ಆದರೆ ಸಲಾರ್ ಚಿತ್ರವಲ್ಲದೆ ಟೈಸನ್ ಸಿನಿಮಾದ ಬಗ್ಗೆ ಕೂಡ ಚರ್ಚೆಯಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಟೈಸನ್ ಸಿನಿಮಾದ ಹೆಸರನ್ನು ಕೇಳಿದರೆ ಬಾಕ್ಸಿಂಗ್ ಬಗ್ಗೆ ಸಿನಿಮಾ ಮಾಡಲಿದ್ದಾರೆ ಎಂಬ ಕುತೂಹಲ ಬರಬಹುದು. ಆದರೆ ಇದಕ್ಕೆಲ್ಲ ಸಿನಿಮಾ ತಂಡ ಬಹಿರಂಗವಾಗಿ ತಿಳಿಸಿದರೆ ಮಾತ್ರ ಉತ್ತರ ಸಿಗುತ್ತದೆ. ಈ ಸಿನಿಮದಲ್ಲಿ ಪೃಥ್ವಿರಾಜ್ ನಿರ್ದೇಶನ ಮಾತ್ರವಲ್ಲದೆ ನಟನೆಯನ್ನು ಸಹ ಮಾಡುತ್ತಿದ್ದಾರೆ. ಇದು ಇವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ನಾಲ್ಕನೇ ಸಿನಿಮಾ. ಇದಕ್ಕಿಂತ ಮುಂಚೆ ಲೂಸಿಫರ್, ಬ್ರೋ ದಾಡಿ ಹೀಗೆ ಹಲವಾರು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top