fbpx
ಸಮಾಚಾರ

ದೇವಸ್ಥಾನದ ಆವರಣದಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಿದ ನಯನತಾರ! ನಯನತಾರ ಪತಿ ನಿರ್ದೇಶಕ ವಿಘ್ನೇಶ್ ಶಿವನ್ ನೀಡಿದ ಕಾರಣ ಏನು ಗೊತ್ತಾ?

ನಯನತಾರ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರ ವಿವಾಹ ಗುರುವಾರ ಅದ್ದೂರಿಯಾಗಿ ನಡೆಯಿತು. ಮದುವೆಯ ನಂತರ ಈ ಜೋಡಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಹೋಗಿದ್ದಾರೆ. ಇದೆ ವೇಳೆ ನಯನತಾರ ಒಂದು ಎಡವಟ್ಟು ಮಾಡಿದ್ದೂ ಇದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ನಾವು ಪ್ರತಿ ಬಾರಿ ದೇವಸ್ಥಾನವನ್ನು ಪ್ರವೇಶಿಸಬೇಕಾದರೆ ನಮ್ಮ ಚಪ್ಪಲಿಯನ್ನು ದೇವಸ್ಥಾನದ ಹೊರಗಡೆ ಬಿಟ್ಟು ಹೋಗುತ್ತೇವೆ. ಆದರೆ ನಯನತಾರ ಇದನ್ನು ಪಾಲಿಸದೆ ದೇವಸ್ಥಾನದ ಒಳಗೆ ತಮ್ಮ ಚಪ್ಪಲಿಯನ್ನು ಹಾಕಿಕೊಂಡು ಹೋಗಿದ್ದಾರೆ. ನಯನತಾರ ಅವರ ಈ ನಡೆತೆಗೆ ಇದೀಗ ವ್ಯಾಪಕ ಟೀಕೆ ಆಗುತ್ತಿದ್ದು ಜನರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

 

 

ನಯನತಾರ ಅವರ ಪತಿ ಪಾದರಕ್ಷೆ ಇಲ್ಲದೆ ದೇವಸ್ಥಾನ ಪ್ರವೇಶಿಸಿದರು. ಆದರೆ ನಯನತಾರ ಅವರಿಗೆ ಮಾತ್ರ ಪಾದರಕ್ಷೆ ತೊಟ್ಟು ಒಳಗೆ ಪ್ರವೇಶಿಸಲು ಅನುಮತಿ ಹೇಗೆ ಸಿಕ್ಕಿತು. ಯಾವಾಗ ಈ ವಿಚಾರ ವಿಕೋಪಕ್ಕೆ ಏರಿತೋ ದೇವಸ್ಥಾನದ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ ನಯನತಾರಾ ಚಪ್ಪಲಿ ಧರಿಸಿ ಓಡಾಡಿದ ಸ್ಥಳದಲ್ಲಿ ಭಕ್ತರಿಗೆ ಪಾದರಕ್ಷೆಗಳನ್ನು ತೊಡಲು ಅವಕಾಶವಿದೆ ಎಂದು ಹೇಳಿ ಸಮಜಾಯಿಸಿ ನೀಡಲು ಮುಂದಾದರು. ಆದರೆ ನಯನತಾರ ನಡೆದುಕೊಂಡ ರೀತಿ ಮಾತ್ರ ಒಂಚೂರು ಸರಿ ಇಲ್ಲ ಎಂದು ಜನರು ಇವರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕುತಿದ್ದಾರೆ.

ಇನ್ನು ಇದರ ಕುರಿತು ನಯನತಾರ ಅವರ ಪತಿ ನಿರ್ದೇಶಕ ವಿಘ್ನೇಶ್ ಶಿವನ್ ಪತ್ರ ಬರೆಯುವ ಮೂಲಕ ಕ್ಷಮೆ ಕೇಳಿ ಇದಕ್ಕೆ ಕಾರಣವನ್ನು ತಿಳಿಸಿದ್ದಾರೆ. “ಮದುವೆಯ ನಂತರ ಮನೆಗೆ ಹೋಗುವ ಬದಲು ದೇವರ ಆಶೀರ್ವಾದ ಪಡೆಯಲು ತಿರುಪತಿಗೆ ತೆರಳಿದೆವು. ನೆನಪಿಗಾಗಿ ದೇವಸ್ಥಾನದ ಹೊರಗೆ ಫೋಟೋ ತೆಗೆಸಿಕೊಳ್ಳಲು ಬಯಸಿದ್ದೆವು. ಆದರೆ ನೂಕುನುಗ್ಗಲು ಹೆಚ್ಚಾದ ಕಾರಣ ಅಲ್ಲಿಂದ ಹೊರಬಂದೆವು. ನಂತರ ಜನಸಂದಣಿ ಕಡಿಮೆಯಾದಾಗ ಮತ್ತೆ ಬಂದು ಫೋಟೋ ತೆಗೆಸಿಕೊಂಡೆವು. ಆ ಗಡಿಬಿಡಿಯಲ್ಲಿ ನಾವು ಚಪ್ಪಲಿಯನ್ನು ಧರಿಸಿದ್ದೇವೆ ಎಂದು ನಮಗೆ ತಿಳಿದಿರಲಿಲ್ಲ” ಎಂದು ಹೇಳಿದರು.

‘ನಮ್ಮಿಂದ ಜನರ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆಯಾಚಿಸುತ್ತೇವೆ. ದೇವರಿಗೆ ಅಗೌರವ ತೋರುವುದು ನಮ್ಮ ಉದ್ದೇಶವಾಗಿರಲಿಲ್ಲ. ಮದುವೆಗೆ ಶುಭ ಕೋರಿದ ಎಲ್ಲರಿಗೂ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top