fbpx
ಸಮಾಚಾರ

ನಟಿ ನಯನತಾರ ಅವರಿಗೆ ಲೀಗಲ್ ನೋಟೀಸ್ ನೀಡಿದ ತಿರುಪತಿ ದೇವಸ್ಥಾನದ ಅಧಿಕಾರಿಗಳು! ಕಾರಣವೇನು ಗೊತ್ತಾ?

ನಟಿ ನಯನತಾರ ಅವರಿಗೆ ಮದುವೆ ಆದಮೇಲೆ ಸಂಕಷ್ಟಗಳು ಒಂದರಮೇಲೊಂದರಂತೆ ಬರುತ್ತಿದೆ. ಇತ್ತೀಚಿಗೆ ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಿದ ಪ್ರಸಂಗ ನಮಗೆಲ್ಲರಿಗೂ ಗೊತ್ತು. ಇದು ಮಾಸುವ ಮುನ್ನವೇ ಇದೀಗ ತಿಮ್ಮಪ್ಪನ ಸನ್ನಿಧಾನದಲ್ಲಿ ಮತ್ತೊಂದು ಎಡವಟ್ಟು ಮಾಡಿಕೊಂಡ ಕಾರಣ ಇವರಿಗೆ ಲೀಗಲ್ ನೋಟೀಸ್ ನೀಡಲಾಗಿದೆ.

ನಿಯಮಗಳ ಪ್ರಕಾರ ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಖಾಸಗಿ ಕ್ಯಾಮೆರಾಗಳಿಗೆ ಅವಕಾಶವಿಲ್ಲ. ಆದರೆ ನಯನತಾರ ಮತ್ತು ವಿಘ್ನೇಶ್ ಶಿವನ್ ತಮ್ಮ ಬಳಿ ಖಾಸಗಿ ಕ್ಯಾಮೆರಾವನ್ನು ತೆಗೆದುಕೊಂಡು ಹೋಗಿದ್ದಾರೆ. ಕೆಲವು ದಿನಗಳ ಹಿಂದೆ ಮಾತಾ ಬೀದಿಯಲ್ಲಿ ನಯನತಾರಾ ಚಪ್ಪಲಿ ಧರಿಸಿಕೊಂಡು ಓಡಾಡಿದ್ದಾರೆ. ನಯನತಾರ ಅವರು ಮಾಡಿದ ಇವೆರಡು ಎಡವಟ್ಟುಗಳಿಂದ ತಿರುಮಲ ತಿರುಪತಿ ದೇವಸ್ಥಾನಂ ಬೋರ್ಡ್ ನ ಮುಖ್ಯ ವಿಜಿಲೆನ್ಸ್ ಸೆಕ್ಯುರಿಟಿ ಆಫೀಸರ್ ನರಸಿಂಹ ಕಿಶೋರ್, ಈ ಕುರಿತು ಮಾತನಾಡಿ “ಎರಡು ಪ್ರಮುಖ ನಿಯಮಗಳನ್ನು ಅವರು ಉಲ್ಲಂಘಿಸಿರುವ ಕಾರಣ ಲೀಗಲ್ ನೋಟಿಸ್ ಕಳುಹಿಸಲಾಗುತ್ತಿದೆ ಎಂದಿದ್ದಾರೆ.

ತಮ್ಮ ವಿವಾಹವಾದ ಮರುದಿನ ದಂಪತಿಗಳಿಬ್ಬರು ತಿಮ್ಮಪ್ಪನ ದರ್ಶನಕ್ಕೆ ಬಂದಿದ್ದರು. ಈ ವೇಳೆ ನಯನತಾರ ಅವರ ಪತಿ ಪಾದರಕ್ಷೆ ಇಲ್ಲದೆ ದೇವಸ್ಥಾನ ಪ್ರವೇಶಿಸಿದರು. ಆದರೆ ನಯನತಾರ ಮಾತ್ರ ಪಾದರಕ್ಷೆ ಧರಿಸಿಕೊಂಡು ಒಳಗೆ ಪ್ರವೇಶಿಸದರು.ಯಾವಾಗ ಈ ವಿಚಾರ ವಿಕೋಪಕ್ಕೆ ಏರಿತೋ ದೇವಸ್ಥಾನದ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ ನಯನತಾರ ಚಪ್ಪಲಿ ಧರಿಸಿ ಓಡಾಡಿದ ಸ್ಥಳದಲ್ಲಿ ಭಕ್ತರಿಗೆ ಪಾದರಕ್ಷೆಗಳನ್ನು ತೊಡಲು ಅವಕಾಶವಿದೆ ಎಂದು ಹೇಳಿ ಸಮಜಾಯಿಸಿ ನೀಡಲು ಮುಂದಾದರು. ಆದರೆ ಇದೀಗ ದೇವಸ್ಥಾನದವರೇ ನೋಟೀಸ್ ನೀಡಲು ಮುಂದಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top